ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ಅಪಘಾತದಲ್ಲಿ ಈ ವರ್ಷ ಮೃತಪಟ್ಟವರು 1,264 ಜನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23 : ಜೀವನಹಳ್ಳಿ ಬಳಿ ರೈಲು ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟಿದ್ದಾನೆ. ಬೆಂಗಳೂರು ರೈಲ್ವೆ ವಿಭಾಗದಲ್ಲಿ ಈ ವರ್ಷ ಸೆಪ್ಟೆಂಬರ್ ತನಕ ರೈಲ್ವೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1264.

ರೈಲ್ವೆ ಹಳಿ ದಾಟುವಾಗ ಈಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಿದ್ದ ಅರ್ಷದ್‌ಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಬೇಜವಬ್ದಾರಿಯಿಂದ ರೈಲ್ವೆ ಹಳಿ ದಾಟುವುದು ಅಪಾಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ಮೇಲೆ 3 ರೈಲು ಹಾದುಹೋದರೂ ಬದುಕುಳಿದ, 'ಅಪ್ಪ ಬಂದ್ರು' ಎಂದು ಎದ್ದುಕುಳಿತ!ತನ್ನ ಮೇಲೆ 3 ರೈಲು ಹಾದುಹೋದರೂ ಬದುಕುಳಿದ, 'ಅಪ್ಪ ಬಂದ್ರು' ಎಂದು ಎದ್ದುಕುಳಿತ!

ರೈಲ್ವೆ ಸುರಕ್ಷತಾ ದಳ ನೀಡುವ ಮಾಹಿತಿಯಂತೆ ಈ ವರ್ಷದ ಸೆಪ್ಟೆಂಬರ್ ತನಕ 1246 ಜನರು ರೈಲ್ವೆ ಅಪಘಾತಗಳಿಂದ ಮೃತಪಟ್ಟಿದ್ದಾರೆ. ದಿನನಿತ್ಯ ನೂರಾರು ಜನರು ರೈಲು ಹಳಿಯನ್ನು ದಾಟು ಮೂಲಕ ಬೇರೆ ಕಡೆಗೆ ಸಾಗುತ್ತಾರೆ.

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲುಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲು

rail

ಅಸುರಕ್ಷಿತ ಸ್ಥಳದಲ್ಲಿ ರೈಲ್ವೆ ಹಳಿ ದಾಟುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇಲಾಖೆ ಈ ಕುರಿತು ಜನರಿಗೂ ಮಾಹಿತಿ ನೀಡಿದೆ, ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇದೆ. ಆದರೂ ಜನರು ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿಲ್ಲ.

2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ

2018ರಲ್ಲಿ ನಿಯಮ ಉಲ್ಲಂಘಟನೆ ಮಾಡಿದ ಕಾರಣಕ್ಕಾಗಿ 883 ಕೇಸುಗಳನ್ನು ರೈಲ್ವೆ ದಾಖಲು ಮಾಡಿಕೊಂಡಿದೆ. 3.6 ಲಕ್ಷ ದಂಡವನ್ನು ಜನರಿಂದ ಸಂಗ್ರಹಣೆ ಮಾಡಿದೆ. ಈ ವರ್ಷದ ಸೆಪ್ಟೆಂಬರ್ ತನಕ 683 ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ರೈಲ್ವೆ ವಿಭಾಗ 1,193 ಕಿ. ಮೀ. ವ್ಯಾಪ್ತಿಯನ್ನು ಒಳಗೊಂಡಿದೆ. ಅಸುರಕ್ಷಿತ ಕ್ರಾಸಿಂಗ್ ಇರುವ ಕಡೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮೆಷ್‌ಗಳನ್ನು ಅಳವಡಿಸಲಾಗಿದೆ. ಆದರೆ, ಅದನ್ನೂ ಕಿತ್ತುಹಾಕಿ ಜನರು ಒಳ ನುಗ್ಗುತ್ತಾರೆ.

ಮಹಿಳೆಯರು ಹಳಿ ದಾಟದಂತೆ ತಡೆಯಲು, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 'ಶಕ್ತಿ' ಎಂಬ ಪ್ರತ್ಯೇಕ ದಳವೇ ಇದೆ. ಹಳಿ ದಾಟುವುದು, ಫುಟ್ ಬೋರ್ಡ್ ಮೇಲೆ ಪ್ರಯಾಣ ಮಾಡುವವರ ಬಗ್ಗೆ ದಳ ಗಮನ ಹರಿಸುತ್ತಿದೆ.

ಶೇ 60ರಷ್ಟು ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಜನರು ಅದನ್ನು ಬಳಕೆ ಮಾಡುತ್ತಿಲ್ಲ. ನಮ್ಮ ಮೆಟ್ರೋ ಮಾದರಿಯಲ್ಲಿ ಪ್ರತಿ ಫ್ಲಾಟ್‌ ಫಾರ್ಮ್‌ಗೆ 4 ರಿಂದ 5 ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡುವ ಕುರಿತು ರೈಲ್ವೆ ಚಿಂತನೆ ನಡೆಸಿದೆ.

ರೈಲ್ವೆ ಸುರಕ್ಷತಾ ದಳದ ಬೆಂಗಳೂರು ವಿಭಾಗದಲ್ಲಿ ಸದ್ಯ 386 ಸಿಬ್ಬಂದಿ ಇದ್ದಾರೆ. 250 ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲು ಪ್ರಕ್ರಿಯೆ ಆರಂಭವಾಗಿದೆ. ರೈಲ್ವೆ ಅಪಘಾತ ತಪ್ಪಿಸಲು ಸಿಬ್ಬಂದಿಗಳಿಂದ ಮಾತ್ರ ಸಾಧ್ಯವಿಲ್ಲ. ಜನರು ಸಹಕಾತ ನೀಡಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
According to railway protection force deaths in Bengaluru division in 2019 till September 1,246 in railway accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X