ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಮಾರುಕಟ್ಟೆಗೆ ಬೆಂಗಳೂರು ರೈಲ್ವೆ ಗಾಲಿ ಕಾರ್ಖಾನೆ ಪ್ರವೇಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17 : ಭಾರತೀಯ ರೈಲ್ವೆ ಗಾಲಿ ಕಾರ್ಖನೆ ವಿಶ್ವದ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ಆಸ್ಟೇಲಿಯಾ, ಉತ್ತರ ಅಮೆರಿಕಕ್ಕೆ ರೈಲ್ವೆ ಗಾಲಿಗಳನ್ನು ಕಾರ್ಖನೆ ಪೂರೈಕೆ ಮಾಡಲು ಸಿದ್ಧತೆ ನಡೆಸಿದೆ.

ಬೆಂಗಳೂರಿನ ಯಲಹಂಕದಲ್ಲಿ ಕಾರ್ಖಾನೆ ಇದೆ. ಭಾರತೀಯ ರೈಲುಗಳಿಗೆ ಗಾಲಿ, ಆಕ್ಸೆಲ್‌ಗಳನ್ನು ಕಾರ್ಖನೆ ತಯಾರು ಮಾಡುತ್ತದೆ. ಇದೇ ಮೊದಲ ಬಾರಿಗೆ ಗಾಲಿಗಳನ್ನು ರಫ್ತು ಮಾಡಲು ಕಾರ್ಖನೆ ಮುಂದಾಗಿದೆ.

ಈಶಾನ್ಯ ರೈಲ್ವೆ ವಿಭಾಗದಲ್ಲಿ 2590 ಹುದ್ದೆಗಳಿಗೆ ನೇಮಕಾತಿ ಈಶಾನ್ಯ ರೈಲ್ವೆ ವಿಭಾಗದಲ್ಲಿ 2590 ಹುದ್ದೆಗಳಿಗೆ ನೇಮಕಾತಿ

ಪ್ರತಿ ವರ್ಷ ಕಾರ್ಖನೆಯಲ್ಲಿ ಸುಮಾರು 2 ಲಕ್ಷ ಗಾಲಿಗಳು ತಯಾರಾಗುತ್ತದೆ. 10 ರಿಂದ 20 ಸಾವಿರ ಗಾಲಿಗಳು ಉಳಿಯುತ್ತವೆ. ಈ ವರ್ಷ 1.7 ಲಕ್ಷ ಗಾಲಿಗಳನ್ನು ತಯಾರು ಮಾಡಲಾಗಿದೆ. ಸುಮಾರು 17 ಸಾವಿರ ಹೆಚ್ಚುವರಿ ಗಾಲಿಗಳು ಉಳಿದಿವೆ.

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲುಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲು

Rail Wheel Factory To Export Wheels To Other countries

ಇದೇ ಮೊದಲ ಬಾರಿಗೆ ರೈಲ್ವೆ ಗಾಲಿ ಕಾರ್ಖಾನೆ ವಿದೇಶಗಳಿಗೆ ಗಾಲಿಗಳನ್ನು ಪೂರೈಕೆ ಮಾಡಲು ಮುಂದಾಗಿದೆ. ಆಸ್ಟ್ರೇಲಿಯಾ, ಅಮೆರಿಕ ಮುಂತಾದ ದೇಶಗಳಿಗೆ ಗಾಲಿಗಳನ್ನು ಪೂರೈಸಲಿದ್ದು, ಹೇಗೆ ಅಲ್ಲಿಗೆ ಕಳಿಸಬೇಕು? ಎಂಬುದು ಇನ್ನೂ ತೀರ್ಮಾನವಾಗಿಲ್ಲ.

2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ

ಉತ್ತರ ಅಮೆರಿಕ ಜೊತೆ ಈಗಾಗಲೇ ರೈಲ್ವೆ ಗಾಲಿ ಕಾರ್ಖಾನೆ ಮಾತುಕತೆ ನಡೆಸುತ್ತಿದೆ. ಹೊರ ದೇಶಗಳಿಗೆ ಗಾಲಿ ರಫ್ತು ಮಾಡುವುದರಿಂದ ಬೆಂಗಳೂರು ಕಾರ್ಖಾನೆಯ ಆದಾಯವೂ ಹೆಚ್ಚಲಿದೆ.

ಭಾರತದಲ್ಲಿ ನಿರ್ಮಾಣಗೊಂಡ ಗಾಲಿಗಳನ್ನು ವಿದೇಶಕ್ಕೆ ರಫ್ತು ಮಾಡುವುದರಿಂದ ಭಾರತೀಯ ರೈಲ್ವೆಯ ಗುಣಮಟ್ಟದ ಪರಿಚಯ ಎಲ್ಲಾ ದೇಶಗಳಿಗೂ ಆಗಲಿದೆ.

English summary
Bengaluru Rail Wheel Factory (RWF) all set to enter global market. Factory will export of rail wheels to other countries soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X