ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಫೇಲ್ ಡೀಲ್ ಕುರಿತು ಕಬ್ಬನ್‌ಪಾರ್ಕ್‌ನಲ್ಲಿ ರಾಹುಲ್ ಸಂವಾದ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ರಫೇಲ್ ಡೀಲ್ ಕುರಿತು ಎಚ್‌ಎಎಲ್ ನೌಕರರ ಜೊತೆ ಎಚ್‌ಎಎಲ್ ಆವರಣದಲ್ಲೇ ಸಂವಾದ ನಡೆಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದರು.

ರಾಹುಲ್ ನೇತೃತ್ವದ ರಫೇಲ್ ಡೀಲ್ ಚರ್ಚೆಗೆ ಎಚ್‌ಎಎಲ್ ನಕಾರ ರಾಹುಲ್ ನೇತೃತ್ವದ ರಫೇಲ್ ಡೀಲ್ ಚರ್ಚೆಗೆ ಎಚ್‌ಎಎಲ್ ನಕಾರ

ಆದರೆ ಎಚ್‌ಎಲ್ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಎಚ್‌ಎಎಲ್ ಆವರಣದಲ್ಲಿ ಸಂವಾದ ನಡೆಸಲು ಎಚ್‌ಎಎಲ್ ನಿರಾಕರಿಸಿತ್ತು. ರಾಹುಲ್ ಗಾಂಧಿ ಅಕ್ಟೋಬರ್ 13ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ, ರಫೇಲ್ ಡೀಲ್, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಕುರಿತು ಕಾಂಗ್ರೆಸ್ ಶಾಸಕರು, ಸಚಿವರ ಜತೆಗೆ ಮತುಕತೆ ನಡೆಸಲಿದ್ದಾರೆ.

ಎಚ್‌ಎಎಲ್ ಅಂಗಳದಲ್ಲಿ ರಫೇಲ್ ಚರ್ಚೆ: ಅ.13ರಂದು ರಾಹುಲ್ ಭೇಟಿ ಎಚ್‌ಎಎಲ್ ಅಂಗಳದಲ್ಲಿ ರಫೇಲ್ ಚರ್ಚೆ: ಅ.13ರಂದು ರಾಹುಲ್ ಭೇಟಿ

ಎಚ್‌ಎಎಲ್ ಚರ್ಚೆಗೆ ನಿರಾಕರಿಸಿರುವ ಕಾರಣ ಕಬ್ಬನ್ ಪಾರ್ಕ್ ನಲ್ಲಿ ಸಂವಾದ ನಡೆಸಲು ರಾಜ್ಯ ಕಾಂಗ್ರೆಸ್ ಮುಂದಾಗಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್ ಕೊಡುಗೆ ಎಂಬ ಶೀರ್ಷಿಕೆಯಲ್ಲಿ ಸಂವಾದ ನಡೆಯಲಿದೆ. ಸಂಸ್ಥೆಯ ನಿವೃತ್ತರು ಹಾಗೂ ನೌಕರರು ಸೇರಿ 100 ಮಂದಿಗೆ ಆಹ್ವಾನ ನೀಡಲಾಗಿದೆ.

Rahul Gandhi will hold interaction about Rafale deal at Cubbon park

ಆಹ್ವಾನಿತರ ಪಟ್ಟಯನ್ನು ಎಐಸಿಸಿ ಅಧ್ಯಕ್ಷರ ಕಾರ್ಯಾಲಯವೇ ಸಿದ್ಧಪಡಿಸಿದೆ. ಅದರಂತೆ ಶನಿವಾರ ಮಧ್ಯಾಹ್ನ ಈ ಕಾರ್ಯಕ್ರಮ ನಡೆಯಲಿದೆ. ರಾಹುಲ್ ನೇತೃತ್ವದಲ್ಲಿ ನಡೆಯುವುದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಚಿತಪಡಿಸಿದ್ದಾರೆ. ಆದರೆ ಎಚ್‌ಎಎಲ್ ಸಂಶ್ಥೆ ಆವರಣದಲ್ಲಿ ಈ ಸಭೆ ನಡೆಸಲು ಉದ್ದೇಶಿರಲಿಲ್ಲ.

ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್ ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್

ಹಾಗಾಗಿ ಅನುಮತಿ ಕೇಳುವ ಪ್ರಶ್ನೆಯೂ ಉದ್ಭವಿಸುವುದಿಲ್ಲ, ಈ ಸಭೆ ಆಯೋಜಿಸುವ ಜವಾಬ್ದಾರಿ ಪ್ರದೇಶ ಕಾಂಗ್ರೆಸ್ ವಹಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.ರಾಹುಲ್ ಗಾಂಧಿ ಸಭೆಯ ಬಗ್ಗೆ ಯಾರೂ ಅನುಮತಿ ಕೇಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಬ್ಬನ್ ಪಾರ್ಕ್ ಮುಂದೆ ನಾರಾರು ಮಂದಿಯನ್ನು ಸೇರಿಸಿ ಸಭೆ ನಡೆಸಿದರೆ ಭದ್ರತಾ ಸಮಸ್ಯೆ ಎದುರಾಗಲಿದೆ ಎನ್ನಲಾಗುತ್ತಿದೆ.

English summary
AICC president Rahul Gandhi will hold interaction with HAL employees about Rafale deal at Cubbon park in Bengaluru on October 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X