ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ ಎಎಲ್ ನೌಕರರ ಸಂಘ ರಾಹುಲ್ ಭೇಟಿಗೆ ಸಿದ್ಧವಿಲ್ಲ: ಸಂಸದ ಮೋಹನ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ನೌಕರರ ಸಂಘ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲು ನಿರಾಕರಿಸಿದೆ. ದೇಶದ ರಕ್ಷಣಾ ವಿಷಯವನ್ನು ಮತ್ತು ಸಂಸ್ಥೆಗಳನ್ನು, ತಮ್ಮ ಕೀಳು ಲಾಭಕ್ಕಾಗಿ ರಾಜಕೀಯಗೊಳಿಸುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರ ಪ್ರಯತ್ನಕ್ಕೆ ಇದರಿಂದ ಮುಖಭಂಗವಾಗಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.

ರಫೇಲ್ ಡೀಲ್ ಕುರಿತು ಕಬ್ಬನ್‌ಪಾರ್ಕ್‌ನಲ್ಲಿ ರಾಹುಲ್ ಸಂವಾದ ರಫೇಲ್ ಡೀಲ್ ಕುರಿತು ಕಬ್ಬನ್‌ಪಾರ್ಕ್‌ನಲ್ಲಿ ರಾಹುಲ್ ಸಂವಾದ

ಇವರ ರಾಜಕೀಯ ದಾಳಗಳಾಗಲು ಎಚ್.ಎ.ಎಲ್ ನೌಕರರು ನಿರಾಕರಿಸಿರುವಾಗ ರಾಹುಲ್ ಗಾಂಧಿ ಅವರು ನಾಳೆ ಯಾರನ್ನು ಭೇಟಿ ಆಗಲಿದ್ದಾರೆ? ಈ ವಿಷಯ ರಾಜಕೀಯಗೊಳಿಸುವುದನ್ನು ಎಚ್.ಎ.ಎಲ್ ನೌಕರರು ಬಯಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Rahul Gandhi must realise HAL employees snub and stay away from politicising

ರಾಹುಲ್ ನೇತೃತ್ವದ ರಫೇಲ್ ಡೀಲ್ ಚರ್ಚೆಗೆ ಎಚ್‌ಎಎಲ್ ನಕಾರರಾಹುಲ್ ನೇತೃತ್ವದ ರಫೇಲ್ ಡೀಲ್ ಚರ್ಚೆಗೆ ಎಚ್‌ಎಎಲ್ ನಕಾರ

ದೇಶದ ಹೆಮ್ಮೆ ಆಗಿರುವ ಎಚ್.ಎ.ಎಲ್ ಸಂಸ್ಥೆಗೆ ವಿಷವನ್ನು ಬೆರೆಸುವಂತಹ ಕೆಟ್ಟ ಮತ್ತು ಅಪಾಯಕಾರಿ ಪ್ರಯತ್ನವನ್ನು ರಾಹುಲ್ ಗಾಂಧಿ ಕೈಬಿಡಲಿ. ಎಚ್.ಎ.ಎಲ್ ಅನ್ನು ತನ್ನಷ್ಟಕ್ಕೆ ಇರಲು ಬಿಡಲಿ ಎನ್ನುವ ನೌಕರರ ಸಂದೇಶ ರಾಹುಲ್ ಗಾಂಧಿ ಅವರಿಗೆ ತಲುಪಲಿದೆ ಎಂದು ನಾನು ಆಶಿಸುತ್ತೇನೆ ಎಂಬುದನ್ನು ಬಿಜೆಪಿ ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ.

English summary
The employees union of HAL has refused to meet Shri Rahul Gandhi. This is slap on the face of Rahul Gandhi and Congress who are trying to politicise the matter. If HAL employees have refused to meet him, who will he meet tomorrow? The message from HAL employees union is clear: We don’t want to meet Rahul Gandhi. We don’t want him to politicise the matter, Statement by MP PC Mohan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X