• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಕ್ರಂ ಸಂಸ್ಥೆ ವಿರುದ್ಧ ಕೊನೆಗೂ ದೂರಿತ್ತ ರಾಹುಲ್ ದ್ರಾವಿಡ್

By Mahesh
|

ಬೆಂಗಳೂರು, ಮಾರ್ಚ್ 18: ಬಹುಕೋಟಿ ವಂಚನೆ ಆರೋಪಕ್ಕೆ ತುತ್ತಾಗಿರುವ

ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪನಿ ವಿರುದ್ಧ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಕೊನೆಗೂ ದೂರು ನೀಡಿದ್ದಾರೆ.

ರಾಹುಲ್ ದ್ರಾವಿಡ್ ಅವರು ತಮಗೆ 4 ಕೋಟಿ ರೂ. ವಂಚಿಸಲಾಗಿದೆ ಎಂದು ಸದಾಶಿವ ನಗರ ಠಾಣೆಗೆ ದೂರು ನೀಡಿದ್ದಾರೆ. ವಿಕ್ರಂ ಕಂಪನಿಯ ವಂಚನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಹೀಗಾಗಿ, ದ್ರಾವಿಡ್ ಅವರು ನೀಡಿದ ದೂರನ್ನು ಬನಶಂಕರಿ ಠಾಣೆ ವರ್ಗಾಯಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ತನಕ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಕ್ರಂ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಶ್ರೀನಾಥ್ ಇಡೀ ವಂಚನೆಯ ಕಿಂಗ್ ಪಿನ್ ಆಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.

ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೂತ್ರಂ ಸುರೇಶ್ ಎಂಬಾತನ ಮೂಲಕ ವಿಕ್ರಂ ಇನ್ವೆಸ್ಟ್‌ಮೆಂಟ್ ಕಂಪನಿಯಲ್ಲಿ 20 ಕೋಟಿ ರು ಹಣ ಹೂಡಿಕೆ ಮಾಡಿದ್ದೆ. ಈ ಪೈಕಿ 16 ಕೋಟಿ ರು ರಿಟರ್ನ್ ಸಿಕ್ಕಿದೆ. 4 ಕೋಟಿ ರು ಇನ್ನೂ ಸಂದಾಯವಾಗಿಲ್ಲ ಎಂದು ದ್ರಾವಿಡ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ದ್ರಾವಿಡ್, ಪಡುಕೋಣೆಯನ್ನು ವಂಚಿಸಿದ್ದ ಐವರು ಪೊಲೀಸರ ಅತಿಥಿ

ರಾಘವೇಂದ್ರ ಶ್ರೀನಾಥ್ ಎಂಬ ವ್ಯಕ್ತಿ 2003 ರಲ್ಲಿ ಯಶವಂತಪುರದಲ್ಲಿ ವಿಕ್ರಂ ಇನ್ವೆಸ್ಟ್‌ಮೆಂಟ್ ಕಂಪನಿ ಎಂಬ ಹೆಸರಿನಲ್ಲಿ ಈ ಅವ್ಯವಹಾರಕ್ಕೆ ಬುನಾದಿ ಹಾಕಿದ್ದ. ಷೇರು ಮಾರಾಟ ವ್ಯವಹಾರ ಮಾಡ್ತೀನಿ ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಹೂಡಿಕೆ ಮಾಡಿದ ಹಣಕ್ಕೆ ಶೇ 10 ರಿಂದ 30 ಪರ್ಸೆಂಟ್ ವರೆಗೆ ಲಾಭಾಂಶ ಕೊಡುವ ಆಮಿಷವೊಡ್ಡಿದ್ದ. ಇದನ್ನು ನಂಬಿದ ನೂರಾರು ಜನ ಈತನ ಬಳಿ ಹಣ ಹೂಡಿಕೆ ಮಾಡಿದ್ದರು.

ವಿಕ್ರಂ ಸಂಸ್ಥೆ ವಿರುದ್ಧ ಕೊನೆಗೂ ದೂರಿತ್ತ ರಾಹುಲ್

ವಿಕ್ರಂ ಸಂಸ್ಥೆ ವಿರುದ್ಧ ಕೊನೆಗೂ ದೂರಿತ್ತ ರಾಹುಲ್

ರಾಘವೇಂದ್ರ ಶ್ರೀನಾಥ್ ಎಂಬ ವ್ಯಕ್ತಿ 2003 ರಲ್ಲಿ ಚ್ ಎಂಬ ಹೆಸರಿನಲ್ಲಿ ಈ ಅವ್ಯವಹಾರಕ್ಕೆ ಬುನಾದಿ ಹಾಕಿದ್ದ. ಷೇರು ಮಾರಾಟ ವ್ಯವಹಾರ ಮಾಡ್ತೀನಿ ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಹೂಡಿಕೆ ಮಾಡಿದ ಹಣಕ್ಕೆ ಶೇ 10 ರಿಂದ 30 ಪರ್ಸೆಂಟ್ ವರೆಗೆ ಲಾಭಾಂಶ ಕೊಡುವ ಆಮಿಷವೊಡ್ಡಿದ್ದ. ಇದನ್ನು ನಂಬಿದ ನೂರಾರು ಜನ ಈತನ ಬಳಿ ಹಣ ಹೂಡಿಕೆ ಮಾಡಿದ್ದರು.

ಷೇರುಮಾರುಕಟ್ಟೆಯಲ್ಲಿ ನೋಂದಣಿಯೇ ಆಗಿರಲಿಲ್ಲ

ಷೇರುಮಾರುಕಟ್ಟೆಯಲ್ಲಿ ನೋಂದಣಿಯೇ ಆಗಿರಲಿಲ್ಲ

ಆರಂಭದಲ್ಲಿ ಜನರಿಗೆ ಲಾಭಾಂಶವನ್ನು ನೀಡಿ ಅವರ ವಿಶ್ವಾಸ ಗಳಿಸಿದ್ದ. ಲಾಭದ ಹಣವನ್ನು ಮತ್ತೆ ಕಂಪನಿಯಲ್ಲೇ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಲಾಭ ಬರುತ್ತೆ ಎಂದು ಜನರನ್ನು ನಂಬಿಸಿದ ಈ ವಂಚಕ ದಾಖಲೆಗಳಲ್ಲಿ ಮಾತ್ರ ಲಾಭ ಹೆಚ್ಚುತ್ತಿರೋದನ್ನ ಜನರಿಗೆ ತೋರಿಸಿ ಹಲವು ವರ್ಷಗಳ ಕಾಲ ನಂಬಿಕೆ ಉಳಿಸಿಕೊಂಡಿದ್ದ. ಆಶ್ಚರ್ಯ ಅಂದ್ರೆ ಷೇರು ವ್ಯವಹಾರ ಮಾಡ್ತೀನಿ ಎಂದು ಕಂಪನಿ ತೆರೆದಿದ್ದ. ಈತನ ಕಂಪನಿ ಷೇರುಮಾರುಕಟ್ಟೆಯಲ್ಲಿ ನೋಂದಣಿಯೇ ಆಗಿರಲಿಲ್ಲ.

ಏಜೆಂಟರುಗಳಿಗೆ 12 ಪರ್ಸೆಂಟ್ ಕಮಿಷನ್

ಏಜೆಂಟರುಗಳಿಗೆ 12 ಪರ್ಸೆಂಟ್ ಕಮಿಷನ್

ಕಂಪನಿಗೆ ಹಣ ಹೂಡಿಕೆ ಮಾಡಲು ಹಲವು ಏಜೆಂಟರನ್ನು ನೇಮಿಸಿಕೊಂಡಿದ್ದ ರಾಘವೇದ್ರ ಶ್ರೀನಾಥ್ ಹೂಡಿಕೆ ಮಾಡಿದ ಹಣದಲ್ಲಿ 12 ಪರ್ಸೆಂಟ್ ಕಮಿಷನ್ ಕೊಡುವುದಾಗಿ ಏಜೆಂಟರನ್ನು ನಂಬಿಸಿದ್ದ. ಈತನ ಮಾತು ಕೇಳಿ ಹಲವು ಏಜೆಂಟರುಗಳು ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿದ್ದರು. ಅದಕ್ಕೆ ಸರಿಯಾಗಿ ಆರೋಪಿ ಏಜೆಂಟರುಗಳಿಗೆ ಕಮಿಷನ್ ಕೂಡ ಕೊಟ್ಟಿದ್ದ. ಕೆಲವು ವರ್ಷ ನಿಯತ್ತಿನಿಂದಲೇ ವ್ಯವಹಾರ ಮಾಡಿ ಹೂಡಿಕೆದಾರರಿಗೆ ಲಾಭದ ಹಣವನ್ನೂ ಕೊಟ್ಟಿದ್ದ. 2010 ರ ನಂತರ ಈತನ ಅದೃಷ್ಟ ಖುಲಾಯಿಸಿತ್ತು.

ಸೆಲೆಬ್ರಿಟಿಗಳಿಗೆ ಪಂಗನಾಮ

ಸೆಲೆಬ್ರಿಟಿಗಳಿಗೆ ಪಂಗನಾಮ

ರಾಹುಲ್ ದ್ರಾವಿಡ್, ಪ್ರಕಾಶ್ ಪಡುಕೋಣೆ ಅಂತಹಾ ಸೆಲೆಬ್ರಿಟಿಗಳಿಗೆ ಪಂಗನಾಮ ಹಾಕಿರುವ ವಿಕ್ರಂ ಇನ್‌ವೆಸ್ಟ್‌ಮೆಂಟ್ ಸಂಸ್ಥೆಯ ವಂಚನೆ ಪ್ರಕರಣವನ್ನು ಸಿಐಡಿಯ ಕಂದಾಯ ಇಲಾಖೆ ವಿಭಾಗ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಈ ಸಂಬಂಧ ಪ್ರಕರಣ ಸಂಬಂಧ ರಾಘವೇಂದ್ರ ಶ್ರೀನಾಥ್ ಮತ್ತು ಆತನ ಸಹಚರರಾದ ನರಸಿಂಹ ಮೂರ್ತಿ(50), ಪ್ರಹ್ಲಾದ್ (48), ನಾಗರಾಜ್ (47) ಮತ್ತು ಸುರೇಶ್ (48) ಅವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ

500 ಕೋಟಿಗೂ ಅಧಿಕ ಹಣವನ್ನು ಹೂಡಿಕೆ

500 ಕೋಟಿಗೂ ಅಧಿಕ ಹಣವನ್ನು ಹೂಡಿಕೆ

ಹೂಡಿಕೆ ಹಣಕ್ಕೆ ಲಾಭಾಂಶ ನೀಡುತ್ತಿರಲಿಲ್ಲವೆಂದು ಇತ್ತೀಚೆಗೆ ಬನಶಂಕರಿ, ಮೈಕೋ ಲೇಔಟ್, ಜಯನಗರ ಸೇರಿ ನಗರದ ವಿವಿಧ ಠಾಣೆಗಳಲ್ಲಿ 250 ಕ್ಕೂ ಹೆಚ್ಚು ದೂರು ದಾಖಲಾಗಿವೆ. ಬಂಧಿತರ ವಿಚಾರಣೆ ವೇಳೆ 1776 ಕ್ಕೂ ಹೆಚ್ಚು ಜನರಿಂದ 500 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿಕೊಂಡಿದ್ದು ತಿಳಿದು ಬಂದಿತ್ತು.ದೊಡ್ಡ ಆರ್ಥಿಕ ಅಪರಾಧ ಇದಾಗಿರುವ ಕಾರಣ ಪ್ರಕರಣವನ್ನು ಸಿಐಡಿಯ ಹಣಕಾಸು ವಿಭಾಗ ವಹಿಸಿಕೊಳ್ಳುವ ಸಾದ್ಯತೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Indian cricketer Rahul Dravid has filed a police complaint against city-based Vikram Investment.The company has duped more than 800 investors of over Rs 500 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more