ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್: ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ್ದ ನಟಿ ರಾಗಿಣಿ!

|
Google Oneindia Kannada News

ಬೆಂಗಳೂರು, ಸೆ. 04: ಬಹುಶಃ ವಿಪರ್ಯಾಸ ಎಂದರೆ ಇದೇ ಇರಬೇಕು. ಕೆಲ ಹೊತ್ತಿನ ಹಿಂದೆ ಡ್ರಗ್ಸ್ ಆರೋಪದ ವಿಚಾರವಾಗಿ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿರುವ ನಟಿ ರಾಗಿಣಿ ದ್ವಿವೇದಿ ಅವರು ನಾನ್ ಕಮ್ಯುನಿಕೇಬಲ್ ಡ್ರಗ್ಸ್ ಅವೇರ್‌ನೆಸ್ ಫೋರಂ ಮೂಲಕ ಶಾಲಾ‌ ಮಕ್ಕಳಲ್ಲಿ, ಸಮುದಾಯದಲ್ಲಿ ಮಾದಕವಸ್ತುಗಳ ಕುರಿತು ಜಾಗೃತಿ ಮೂಡಿಸುವ ಸ್ವಯಂ ಸೇವೆ ಕೆಲಸ ಮಾಡುತ್ತಿದ್ದರು.

Recommended Video

ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Oneindia Kannada

ಅದಕ್ಕಿಂತ ಕುತೂಹಲದ ವಿಚಾರವೆಂದರೆ ಇದೇ ವಿಚಾರವಾಗಿ ಸ್ಟಾರ್ ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ಬಿಜೆಪಿ ನಾಯಕರನ್ನೂ ಕೂಡಾ ಭೇಟಿಯಾಗಿ ಚರ್ಚೆ ನಡೆಸಿದ್ದರು. ಕೋವಿಡ್‌ನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ವೇಳೆಯಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟಿದ್ದ ರಾಗಿಣಿ, ಡ್ರಗ್ಸ್ ವಿರೋಧಿ ಅಭಿಯಾನದ ಕುರಿತು ಸುದೀರ್ಘ ಮಾತುಕತೆ ನಡೆಸಿದ್ದರು.

Ragini Dwivedi met BJP leaders during lockdown and discussed about anti-drugs campaign

ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ದ್ವಿವೇದಿ ಬಂಧನ ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ದ್ವಿವೇದಿ ಬಂಧನ

ಈ ಹಿಂದೆ ಶಾಲಾ‌ ಮಕ್ಕಳಲ್ಲಿ ಡ್ರಗ್ಸ್ ಜಾಗೃತಿ ಮೂಡಿಸುವ ಕುರಿತು ರಾಜ್ಯ ಬಿಜೆಪಿ ಘಟಕ ಬೃಹತ್ ಅಭಿಯಾನವನ್ನು ನಡೆಸಿತ್ತು. ಡ್ರಗ್ಸ್ ಕುರಿತು ನಿರ್ಣಾಯಕ ಹೋರಾಟವನ್ನು ಬಿಜೆಪಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ರಾಗಿಣಿ ಅವರು, ಜಾಗೃತಿ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಪಡೆದಿದ್ದರು. ತಾವೂ ಕೂಡ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದಾಗಿ ರಾಗಿಣಿ ಹೇಳಿದ್ದರು. ಹೀಗಾಗಿ ಅಂದು ಚರ್ಚೆ ವೇಳೆ ಬಿಜೆಪಿ ನಡೆಸಿದ್ದ ಅಭಿಯಾನದ ಬಗ್ಗೆ ಬಿಜೆಪಿ ನಾಯಕರು ಮಾಹಿತಿ ನೀಡಿದ್ದರು. ಅದಾಗಿ ಈಗ ಹಲವು ದಿನಗಳು ಮಾತ್ರ ಕಳೆದಿವೆ. ಮಾದಕವಸ್ತು ನಂಟಿನ ಆರೋಪದ ಹಿನ್ನೆಲೆಯಲ್ಲಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

Ragini Dwivedi met BJP leaders during lockdown and discussed about anti-drugs campaign

ನಟಿ ರಾಗಿಣಿ ದ್ವಿವೇದಿ 3 ದಿನ ಸಿಸಿಬಿ ಪೊಲೀಸರ ವಶಕ್ಕೆ ನಟಿ ರಾಗಿಣಿ ದ್ವಿವೇದಿ 3 ದಿನ ಸಿಸಿಬಿ ಪೊಲೀಸರ ವಶಕ್ಕೆ

ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಯ ಬಳಿಕ ಅವರನ್ನು ಸ್ಟೇಟ್ ಹೋಮ್‌ನಲ್ಲಿ ಇರಿಸಲಿದ್ದಾರೆ. ನಾಳೆ ವಿಚಾರಣೆ ಮುಂದುವರೆಯಲಿದೆ. ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ಮೂಲಕ ಇಡೀ ವ್ಯವಸ್ಥೆಯನ್ನು ಯಾಮಾರಿಸಲು ಪ್ರಯತ್ನಿಸಿದ್ದರಾ ಎಂದು ಬಿಜೆಪಿ ವಲಯದಲ್ಲಿಯೇ ಗುಸುಗುಸು ಸುದ್ದಿ ಹರಿದಾಡುತ್ತಿದೆ.

English summary
Ironically, this should be the case. Actress Ragini Dwivedi, who was arrested by police on drug charges some time ago, was working on a voluntary campaign to raise awareness about drug abuse in school children and the community through the Non Communicable Drugs Awareness Forum. Know more here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X