ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕದ ಸಂತ್ರಸ್ತರಿಗೆ ರಾಗೀಗುಡ್ಡ ಕಾರ್ಯಕರ್ತರ 'ದೇವರು ಮೆಚ್ಚುವ ಕೆಲಸ'

|
Google Oneindia Kannada News

ಬೆಂಗಳೂರು, ಆಗಸ್ಟ್ 29: 'ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದೇ, ದೇವರು ಮೆಚ್ಚುವ, ಮಾನವೀಯತೆಯ ಕೆಲಸ ಎನ್ನುವಂತೆ', ನಗರದ ರಾಗೀಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಕಾರ್ಯಕರ್ತರು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಮಿಡಿದಿದ್ದಾರೆ.

ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಹನಕ್ಕೆ, ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಕ, ಅದನ್ನು, ಚಾಮರಾಜಪೇಟೆಯಲ್ಲಿರುವ ಕೇಶವಕೃಪಾ ಕಚೇರಿಗೆ ಗುರುವಾರ ಸಂಜೆ (ಆ 29) ಕಳುಹಿಸಿಕೊಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ವ್ಯಾಪ್ತಿಯಲ್ಲಿ ಈ ಪರಿಹಾರ ಸಾಮಗ್ರಿಗಳು ವಿತರಣೆಗೊಳ್ಳಲಿದೆ.

ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್

ಉತ್ತರ ಕರ್ನಾಟಕದ ಭಾಗದಲ್ಲಿನ ಕಂಡು ಕೇಳರಿಯದ ವರುಣನ ರುದ್ರನರ್ತನ ಮತ್ತು ಕೊಯ್ನಾ ಅಣೆಕಟ್ಟಿನ ಕ್ರೈಸ್ಟ್ ಗೇಟ್ ತೆರವಿನ ನಂತರ, ಈ ಭಾಗದಲ್ಲಿನ ಜನತೆ, ಪ್ರವಾಹಕ್ಕೆ ಮನೆಮಠ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದರು.

Ragigudda Volunteers Sends Flood Relief Materials North Karnataka Region

ಈ ಭಾಗದ ಜನರ ಕಷ್ಟಕ್ಕೆ ಪ್ರವಾಹೋಪಾದಿಯಲ್ಲಿ ಸ್ಪಂದಿಸಿದ್ದ ಕರ್ನಾಟಕದ ಜನತೆ, ಹಲವು ರೂಪದಲ್ಲಿ ನೆರವಿನ ಹಸ್ತ ಚಾಚಿದ್ದರು. ಅದರಂತೇ, ರಾಗೀಗುಡ್ಡದ ಆಂಜನೇಯ ಸ್ವಾಮಿ ದೇವಾಲಯದ ಕಾರ್ಯಕರ್ತರು, ಅಥಣಿ ಭಾಗಕ್ಕೆ ತುರ್ತಾಗಿ ಬೇಕಾಗಿರುವಂತಹ ಸಾಮಗ್ರಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್

ಇನ್ನೂರು ಕಂಬಳಿ, ಐವತ್ತಕ್ಕೂ ಹೆಚ್ಚು ಹೊದಿಕೆ, ಪುರುಷರ, ಮಹಿಳೆಯರ ಮತ್ತು ಮಕ್ಕಳ ಒಡ ಉಡುಪುಗಳು, ಇಪ್ಪತ್ತು ಮೂಟೆಯಷ್ಟು ಜಾನುವಾರುಗಳ ಆಹಾರ ಸೇರಿದಂತೆ, ಪರಿಹಾರ ಸಾಮಗ್ರಿಗಳು, ಕೆಲವು ದಿನಗಳಲ್ಲಿ ಅಥಣಿ ತಲುಪಲಿದೆ.

ರಾಜ್ಯ ಸರಕಾರದ ಆಡಳಿತದ ವ್ಯಾಪ್ತಿಯಲ್ಲಿ ಬರುವ ನೌಕರರು, ಪ್ರಾಧ್ಯಾಪಕರ ಒಂದು ದಿನದ ಸಂಬಳ, ವಾಣಿಜ್ಯೋದ್ಯಮಿಗಳು ಸೇರಿದಂತೆ, ಖಾಸಗಿ ಸಂಸ್ಥೆಗಳು, ಶಾಲಾ ಕಾಲೇಜುಗಳು, ಹತ್ತು ಹಲವಾರು ಸಂಘಟನೆಗಳು, ವಿವಿಧ ರೂಪಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ ಕೊಡುತ್ತಿದ್ದಾರೆ.

English summary
The Voulnteers of Sri Ragigudda Anjaneya Swamy Temple, Sends Flood Relief Materials to Athani (North Karnataka Region) contains Blanket, Cattle Feed etc.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X