• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಂದೆಯ ಕೊನೆಯ ದಿನಗಳನ್ನು ನೆನೆದ ಗಿರೀಶ್ ಕಾರ್ನಾಡ್ ಪುತ್ರ

|

ಬೆಂಗಳೂರು, ಜೂನ್ 13: ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್(81) ಅವರ ಕೊನೆಯ ದಿನಗಳ ನೆನಪನ್ನು ಅವರ ಪುತ್ರ ರಘು ಕಾರ್ನಾಡ್ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡ್ ಅವರು ಜೂನ್ 10, ಸೋಮವಾರದಂದು ಇಹಲೋಕ ತ್ಯಜಿಸಿದರು. ನಾಟಕಕಾರರಾಗಿ, ನಟರಾಗಿ, ಸಾಹಿತಿಯಾಗಿ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಾರ್ನಾಡ್ ಅವರ ಅಗಲಿಕೆಗೆ ಅವರ ಅಭಿಮಾನಿಗಳು ಮರುಗಿದ್ದಾರೆ.

ಗಿರೀಶ್ ಕಾರ್ನಾಡ್ ಅವರಲ್ಲಿ ಚಿಂತಕನೂ ಇದ್ದ, ರಾಜಕಾರಣಿಯೂ ಇದ್ದ

ತಂದೆಯ ಕೊನೆಯ ದಿನಗಳ ಬಗ್ಗೆ ಮತ್ತು ಅವರೊಂದಿಗಿನ ಒಡನಾಟದ ಬಗ್ಗೆ ಪುತ್ರ ರಘು ಕಾರ್ನಾಡ್ ಅವರು ಮಾಡಿದ ಫೇಸ್ ಬುಕ್ ಪೋಸ್ಟ್ ನ ಸಾರಾಂಶ ಇಲ್ಲಿದೆ.

Raghu Karnad, Girish Karnads son remembers last days of his father

"ಸೋಫಾ ಮೇಲೆ ಕುಳಿತುಕೊಂಡು ವಿಸ್ಕಿಯ ಗ್ಲಾಸ್ ಹಿಡಿದು, ಇತಿಹಾಸ, ದಂತಕತೆ, ಹಾಡು, ತತ್ವಜ್ಞಾನ, ಜಾನಪದ ಕತೆಗಳನ್ನು ಉಲಿಯುತ್ತಿದ್ದ ನನ್ನ ತಂದೆಯ ಚಿತ್ರ ನನ್ನ ಮನಸ್ಸಿನಲ್ಲಿ ಬೇರೂರಿದೆ. ನಾನು ಪ್ರೀತಿಸುವ ವ್ಯಕ್ತಿ ಅವರು. ಹಿಂದಿನ ವಾರ ನಾನು ಮತ್ತು ನನ್ನ ಸಹೋದರಿ ಇಬ್ಬರೂ ಸ್ನೇಹಿತರೊಬ್ಬರ ಮದುವೆಯ ಸಲುವಾಗಿ ನಮ್ಮ ಮನೆಯಲ್ಲೇ ಇದ್ದೆವು. ರಾತ್ರಿ ಶನಿವಾರ ಅವರು ಆರ್ಶಿಯಾ ಸತ್ತರ್ ಗೆ ಸಂದರ್ಶನ ನೀಡಿ ಮುಗಿಸಿದ್ದರು. ಭಾನುವಾರ ಸಂಜೆ ನಾವೆಲ್ಲರೂ ಟೆರೇಸ್ ಗೆ ಹೋಗಿ ಕೆಲ ಸಮಯ ಕಳೆದೆವು. ನಾನು ಅವರಿಗೆ ಫಿಸಿಯೋ ಥೆರಪಿ ಮಾಡಿಸಿದೆ, ನನ್ನ ಸಹೋದರಿ ಅವರ ಉಗುರುಗಳನ್ನು ಕತ್ತರಿಸಿದಳು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುತ್ತ ನಾವು ಕಳವಳ ವ್ಯಕ್ತಪಡಿಸಿದ್ದೆವು. ಆದರೆ ಅತ್ಯಂತ ದುಃಖದ ವಿಚಾರವೆಂದರೆ ಸೋಮವಾರ ಬೆಳಿಗ್ಗೆ ಅವರು ಮೃತರಾದರು"

ಗಿರೀಶ್ ಕಾರ್ನಾಡ್ ಅವರ 'ತಲೆದಂಡ' ನಾಟಕ ಕೈಗೆತ್ತಿಕೊಂಡಾಗ...

"ಅಂದಿನಿಂದ ಅಪ್ಪನಿಗೆ ಶ್ರದ್ಧಾಂಜಲಿ ಎಂಬಂತೆ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಕೊಂಕಣಿ, ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಗಳು ಸುರಳಿಸುತ್ತುತ್ತಿವೆ. ಅವರ ಅಗಲಿಕೆಯ ನಂತರ ನೀವೆಲ್ಲ ಕಳಿಸಿದ ಸಂದೇಶ, ಸಾಂತ್ವನದ ನುಡಿ, ಪ್ರೀತಿಗೆ ನಾವು ಋಣಿ. ತಂದೆಯವರ ಬದುಕು ಮತ್ತು ಕೃತಿಗಳಿಂದ ನೀವೆಷ್ಟು ಪ್ರಭಾವಿತರಾಗಿದ್ದೀರಿ ಎಂಬುದು ನಮಗೆ ಇದರಿಂದ ಅರಿವಾಗಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ

"ಅವರ ಬದುಕು ಅವರ ಗುರುಗಳು, ಶಿಕ್ಷಕರು, ಬಮಧುಗಳು, ಒಡಹುಟ್ತಿದವರು, ಸ್ನೇಹಿತರು, ನಿರ್ದೇಶಕರು, ವಿದ್ಯಾರ್ಥಿಗಳು, ನಟರು, ಓದುಗರು, ವಿರೋಧಿಗಳು... ಎಲ್ಲರಿಂದಲೂ ಶ್ರೀಮಂತವಾಗಿದೆ. ಅವರ ಕೊನೆಯ ದಿನಗಳಲ್ಲಿ ಅಂಥ ಹಲವು ಹೆಸರುಗಳನ್ನು ನಾನು ಕೇಳಿದ್ದೇನೆ. ಒಬ್ಬ ಅಸಾಧಾರಣಿ ವ್ಯಕ್ತಿಯ ಬದುಕಿನ ಪಯಣದಲ್ಲಿ ಜೊತೆಯಾದ ಆ ಎಲ್ಲರಿಗೂ ನನ್ನ ಧನ್ಯವಾದಗಳು"

-ರಘು ಕಾರ್ನಾಡ್

English summary
Raghu Karnad, late Girish Karnad's son remembers last days of his father by a facebook post. Jnanapith awardee, actor, writer Girish Karnad passed on on June 10 due to age old illness. He was 81.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X