• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಘವೇಶ್ವರ ಭಾರತಿ ಶ್ರೀಗಳಿಗೆ ನೋಟಿಸ್ ಜಾರಿ

By Mahesh
|

ಬೆಂಗಳೂರು/ಹೊನ್ನಾವರ,ಸೆ.6 : ರಾಮಚಂದ್ರಾಪುರ ಮಠದ ರಾಮಕಥಾ ಕಲಾವಿದೆ ಪ್ರೇಮಲತಾ ಅವರ ಮಗಳು ಅಂಶುಮತಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಬೆಂಗಳೂರಿನ ಗಿರಿನಗರ ಪೋಲೀಸರು ನೋಟಿಸ್ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆವಿಗೂ ಶ್ರೀಗಳು ವಿಚಾರಣೆಗೆ ಹಾಜರಾಗಿಲ್ಲದ ಕಾರಣ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೊನ್ನಾವರದ ಕೆಕ್ಕಾರದಲ್ಲಿರುವ ರಘೋತ್ತಮ ಮಠಕ್ಕೆ ಆಗಮಿಸಿದ ಗಿರಿನಗರ ಎಎಸ್ ಪಿ ಸುರೇಶ್ ಬಾಬು ಖುದ್ದು ರಾಘವೇಶ್ವರ ಸ್ವಾಮೀಜಿಗಳನ್ನು ಭೇಟಿಯಾಗಿ ವಾರೆಂಟ್ ನೀಡಿದ್ದಾರೆ. ಸೆಪ್ಟೆಂಬರ್ 10ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ವಾರೆಂಟ್ ನೀಡಲು ಬಂದಿದ್ದ ಪೋಲೀಸರಿಗೆ ಮಠದ ಕಾರ್ಯಕರ್ತರು, ಭಕ್ತರು ವಿರೋಧ ವ್ಯಕಪಡಿಸಿದ್ದರು. ಈ ಸಂದರ್ಭದಲ್ಲಿ ಮಠದ ಬಳಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.[ಭಾರತಿ ಸ್ವಾಮೀಜಿಗೆ ಹವ್ಯಕರ ಬೆಂಬಲ]

ಈ ನಡುವೆ ಕಲಾವಿದರಿಗೆ ಬೆದರಿಕೆ ಒಡ್ಡಿದ ಆರೋಪ ಹೊತ್ತಿರುವ ಪ್ರೇಮಲತಾ ದಂಪತಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿದೆ. ಒಟ್ಟಾರೆ, ಪ್ರೇಮಲತಾ ದಿವಾಕರ್ ಶಾಸ್ತ್ರಿ ಹಾಗೂ ರಾಘವೇಶ್ವರ ಭಾರತಿ ಇಬ್ಬರಿಗೂ ಸೆ.10ರ ಗಡುವು ಸಿಕ್ಕಿದೆ ವಿವರ ಮುಂದೆ ಓದಿ...

ಪ್ರೇಮಲತಾ ಜಾಮೀನು ಅರ್ಜಿ ವಿಚಾರಣೆ

ಪ್ರೇಮಲತಾ ಜಾಮೀನು ಅರ್ಜಿ ವಿಚಾರಣೆ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಹಾಗೂ ರಾಮಕಥಾಕ್ಕೆ ತೆರಳುವ ಕಲಾವಿದರಿಗೆ ಪ್ರಕರಣದ ಆರೋಪಿಗಳಾದ ಪ್ರೇಮಲತಾ ಶಾಸ್ತ್ರಿ ಹಾಗೂ ದಿವಾಕರ್ ಶಾಸ್ತ್ರಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.10ಕ್ಕೆ ಕೋರ್ಟ್ ಮುಂದೂಡಿದೆ. ಎರಡೂ ಕಡೆ ವಾದ ಆಲಿಸಿದ ಜೆಎಂಎಫ್ ಸಿ ನ್ಯಾ. ಎಂ ಹರಿಣಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.

ಶಂಭು ಶರ್ಮಾ ಅರ್ಜಿ ವಜಾ

ಶಂಭು ಶರ್ಮಾ ಅರ್ಜಿ ವಜಾ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹೊಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಅಭಿಯೋಜಕರಿಗೆ ಸಹಾಯಕರಾಗಿ ವಕಾಲತ್ತು ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದ ಶಂಭು ಶರ್ಮಾ ಎಂಬುವವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಗೆ ಆರೋಪಿಗಳ ಪರ ನ್ಯಾಯವಾದಿ ಎಂ.ಎಲ್ ನಾಯ್ಕ್ ಆಕ್ಷೇಪಿಸಿದ್ದರು.

ಜಪ್ತಿ ಮಾಡಿದ ಸಾಧನ ಕೊಡಿಸಿ: ಮಠ

ಜಪ್ತಿ ಮಾಡಿದ ಸಾಧನ ಕೊಡಿಸಿ: ಮಠ

ಆರೋಪಿಗಳಿಂದ ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್ ಸಾಧನಗಳು ಇನ್ನಿತರ ವಸ್ತುಗಳು ಮಠಕ್ಕೆ ಸೇರಿವೆ ಇವನ್ನು ಮಠಕ್ಕೆ ಕೊಡಿಸುವಂತೆ ಅರ್ಜಿ ಹಾಕಲಾಗಿದೆ. ಅದರೆ, ಆರೋಪಿಗಳ ಬಳಿ ಇದ್ದ ಐಫೋನ್, ಲ್ಯಾಪ್ ಟ್ಯಾಪ್ ಸೇರಿದಂತೆ ಇನ್ನಿತರ ಸಾಧನಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಇವನ್ನು ಈ ಹಂತದಲ್ಲಿ ಮಠಕ್ಕೆ ಹಿಂತಿರುಗಿಸುವುದು ಸರಿಯಲ್ಲ್ ಎಂದು ಆರೋಪಿಗಳ ಪರ ವಕೀಲ ಎಂ.ಎಲ್ ನಾಯ್ಕ್ ವಾದಿಸಿದ್ದಾರೆ.

ಸೆ.10 ಯಾರಿಗೆ ಒಲಿವುದು ರಾಮನ ಕೃಪೆ

ಸೆ.10 ಯಾರಿಗೆ ಒಲಿವುದು ರಾಮನ ಕೃಪೆ

ಒಟ್ಟಾರೆ, ಪ್ರೇಮಲತಾ ದಿವಾಕರ್ ಶಾಸ್ತ್ರಿ ಹಾಗೂ ರಾಘವೇಶ್ವರ ಭಾರತಿ ಇಬ್ಬರಿಗೂ ಸೆ.10ರ ಗಡುವು ಸಿಕ್ಕಿದೆ. ರಾಘವೇಶ್ವರ ಭಾರತಿಗಳ ಮೇಲೆ ಐಪಿಸಿ ಸೆಕ್ಷನ್ 354(ಎ) ಹಾಗೂ 506ರ ಅನ್ವಯ ಪ್ರಕರಣ ದಾಖಲಾಗಿದೆ. ಎರಡೂ ಸೆಕ್ಷನ್ ಗಳು ಜಾಮೀನುರಹಿತವಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಲ್ಪಡಿಸಬಹುದಾಗಿದೆ. ಅದರೆ, ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆ ಪಡೆಯಲು ಬಂದ ಪೊಲೀಸರು ಇಂಥ ದಿನ ವಿಚಾರಣೆ ಹಾಜರಾಗತಕ್ಕದ್ದು ಎಂದು ಹೇಳಿ ನೋಟಿಸ್ ನೀಡಿ ತೆರಳಿದ್ದಾರೆ.

ಬೆದರಿಕೆಗೆ ಬಲಿಯಾದ ಶಾಸ್ತ್ರಿ ತಮ್ಮನಿಗೆ ಮುಕ್ತಿ ಸಿಗುವುದೇ?

ಬೆದರಿಕೆಗೆ ಬಲಿಯಾದ ಶಾಸ್ತ್ರಿ ತಮ್ಮನಿಗೆ ಮುಕ್ತಿ ಸಿಗುವುದೇ?

ರಾಮಚಂದ್ರಾಪುರ ಮಠದ ಯಾವ ಭಕ್ತರು ಶ್ಯಾಮಶಾಸ್ತ್ರಿಗಳಿಗೆ ಬೆದರಿಕೆ ಹಾಕಿಲ್ಲ. ಈ ಆತ್ಮಹತ್ಯೆಗೂ ಮಠಕ್ಕೂ ಯಾವುದೇ ಸಂಬಂಧ ಇಲ್ಲ. ಒಬ್ಬ ವ್ಯಕ್ತಿಯ ಮನೆ ಎದುರಿಗೆ ಭಕ್ತರು ಪ್ರತಿಭಟನೆ ಮಾಡುವುದಿಲ್ಲ ಎಂದು ಮಠದ ವಕೀಲರಾದ ಶಂಭುಶಾಸ್ತ್ರಿ ಅವರು ಸ್ಟಷ್ಟನೆ ನೀಡಿದ್ದಾರೆ.

ಅದರೆ, ಅಂತಿಮ ಸಂಸ್ಕಾರಕ್ಕೆ ಹೋಗದಂತೆ ಹವ್ಯಕರನ್ನು ತಡೆ ಹಿಡಿದಿದ್ದು ಯಾರು? ಇಷ್ಟಕ್ಕೂ ಪುತ್ತೂರಿನ ಪೊಲೀಸರು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದು ಏಕೆ? ಬೆದರಿಕೆ ಕರೆ ಒಡ್ಡಿದವರು ಯಾರು? ಶ್ಯಾಮ ಶಾಸ್ತ್ರಿ ಬರೆದಿರುವ ಡೆತ್ ನೋಟ್ ನಲ್ಲಿ ಏನಿದೆ? ಎಲ್ಲವೂ ನಿಗೂಢವಾಗೇ ಉಳಿದಿದೆ. ಸಮಾಜದಲ್ಲಿ ಮೇಲು ಕೀಳು ಎನ್ನದೇ ನ್ಯಾಯ ಎಲ್ಲರಿಗೂ ದೊರೆಯುತ್ತದೆ ಎನ್ನುವುದು ನಿಜವೇ ಕಾದುನೋಡಬೇಕಿದೆ.

English summary
Raghaveshwara Bharathi Seer od Sriramachandrapura Mutt gets notice from Girinagar police in harassment case filed by Premalatha Divakar's daughter Anshumathi. Meanwhile Premalatha's bail plea has been adjourned to Sept.10
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X