ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುನೀತ್ ಉದ್ಘಾಟಿಸಿದ ಅಪ್ಪಾಜಿ ಪ್ರತಿಮೆ ನೋಡಿ ರಾಘಣ್ಣ ಭಾವುಕ..!

|
Google Oneindia Kannada News

ಬೆಂಗಳೂರು, ಜೂನ್ 22: ಬೆಂಗಳೂರು ಹಲವು ಕಡೆಗಳಲ್ಲಿ ಡಾ. ರಾಜ್ ಕುಮಾರ್‌ ಪುತ್ಥಳಿಗಳನ್ನು ನೋಡಬಹುದು. ನಟ ಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ಪಾರ್ಕ್‌ಗಳಲ್ಲಿ, ಸರ್ಕಲ್‌ಗಳಲ್ಲಿ , ಆಟೋ ನಿಲ್ದಾಣ ಸೇರಿದಂತೆ ಹಲವಾರು ಕಡೆ ಪ್ರತಿಷ್ಟಾಪಿಸಿ ಅಭಿಮಾನಿಗಳು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ. ಗಿರಿನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಸ್ಥಾಪಿತವಾಗಿದ್ದ ಪುತ್ಥಳಿಯನ್ನು ರಾಘವೇಂದ್ರ ರಾಜ್ ಕುಮಾರ್‌ರವರು ವೀಕ್ಷಿಸಿದರು. ಈ ವೇಳೆ ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳು ಹರ್ಷಗೊಂಡರು.

ಹೊಸ ಸಿನಿಮಾದ ಚಿತ್ರಿಕರಣಕ್ಕೆ ರಾಘವೇಂದ್ರ ರಾಜ್ ಕುಮಾರ್ ಗಿರಿನಗರದ ಸ್ವಾಮಿ ವಿವೇಕಾನಂದ ಪಾರ್ಕ್ ಸಮೀಪಕ್ಕೆ ತೆರಳಿದ್ದರು. ಈ ವೇಳೆ ಡಾ. ರಾಜ್ ಕುಮಾರ್ ಪುತ್ಥಳಿಯನ್ನು ಅಭಿಮಾನಿಗಳು ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಅಭಿಮಾನಿಗಳ ಪ್ರೀತಿಯ ಅಭಿಮಾನಕ್ಕೆ ಬರಲು ಒಪ್ಪಿದ ರಾಘಣ್ಣ ಗಿರಿನಗರದಲ್ಲಿರುವ ಪಾರ್ಕಿಗೆ ಹೋಗಿದ್ದಾರೆ. ಡಾ. ರಾಜ್ ಕುಮಾರ್ ಪುತ್ಥಳಿಯನ್ನು ನೋಡಿ ತುಂಬಾ ಸುಂದರವಾಗಿದೆ ಎಂದು ಹೇಳಿದ್ದಾರೆ.

ಗಿರಿನಗರ ಪಾರ್ಕಿನಲ್ಲಿ ಸ್ಥಾಪಿಸಿದ್ದ ಡಾ. ರಾಜ್‌ಕುಮಾರ್ ಪುತ್ಥಳಿಯನ್ನು ರಾಘಣ್ಣ ನೋಡುವ ಸಂದರ್ಭದಲ್ಲಿ ಅಭಿಮಾನಿಗಳು ಬಂದು ರಾಘಣ್ಣನನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಅಭಿಮಾನಿಗಳು ರಾಜ್ ಕುಮಾರ್ ಪುತ್ಥಳಿಯ ಮುಂದೆಯೇ ನಿಂತು ಫೋಟೋಗೆ ತೆಗೆಸಿಕೊಂಡು ಸಂತಸಪಟ್ಟಿದ್ದಾರೆ.

ನಮ್ಮ ಮೇಲಿನ ಅಭಿಮಾನ ಮರೆಯುವುದಿಲ್ಲ

ನಮ್ಮ ಮೇಲಿನ ಅಭಿಮಾನ ಮರೆಯುವುದಿಲ್ಲ

ಇನ್ನು ಡಾ. ರಾಜ್ ಕುಮಾರ್ ಪುತ್ಥಳಿಯ ಸಮೀಪದಲ್ಲಿಯೇ ಸಂಕಲ್ಪ ಡಾ. ರಾಜ್ ಕುಮಾರ್ ಅಭಿಮಾನಿಗಳ ಸೇವಾ ಸಂಘ ಪುನೀತ್ ರಾಜ್ ಕುಮಾರ್ ದೊಡ್ಡದಾದ ಫೋಟೋವನ್ನು ಸಹ ಹಾಕಲಾಗಿದೆ. ತನ್ನ ಸಹೋದರನ ಫೋಟೋವನ್ನು ಕಂಡು ರಾಘಣ್ಣ ಕೆಲ ಕ್ಷಣ ಭಾವುಕರಾದರು. ಇದೇ ವೇಳೆ ನಮ್ಮ ತಂದೆ ನಮ್ಮ ಮೇಲೆ ನೀವೆಲ್ಲಾ ಇಟ್ಟಿರುವ ಅಭಿಮಾನ ನಾವೆಂದು ಮರೆಯುವುದಿಲ್ಲ ಎಂದ ರಾಘಣ್ಣ.

2016ರಲ್ಲಿ ಡಾ.ರಾಜ್ ಕುಮಾರ್‌ರ ಪ್ರತಿಮೆ ಸ್ಥಾಪನೆ

2016ರಲ್ಲಿ ಡಾ.ರಾಜ್ ಕುಮಾರ್‌ರ ಪ್ರತಿಮೆ ಸ್ಥಾಪನೆ

ಗಿರಿನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ 2016ರಲ್ಲಿ ಡಾ. ರಾಜ್ ಕುಮಾರ್‌ರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸಂಸದರಾಗಿದ್ದ ಅನಂತ್ ಕುಮಾರ್ ನೇತೃತ್ವದಲ್ಲಿ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್‌ರನ್ನು ಆಹ್ವಾನಿಸಲಾಗಿತ್ತು. ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿ ಪುತ್ಥಳಿಯನ್ನು ಅನಾವರಣವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇನ್ನು ಪುನೀತ್ ರಾಜ್ ಕುಮಾರ್ ಬಂದು ಹೋಗಿದ್ದ ಸಮಯದಲ್ಲಿ ಸಂಘದ ಸದಸ್ಯರು ತೆಗೆದಿದ್ದ ಫೋಟೋಗಳನ್ನು ಒಂದು ಫ್ರೇಮ್ ಮಾಡಿ ಡಾ. ರಾಜ್ ಕುಮಾರ್ ಪುತ್ಥಳಿಯ ಸಮೀಪದಲ್ಲಿ ಇಡಲಾಗಿದೆ.

ರಾಜ್ ಕುಟುಂಬದ ಮೂವರು ಸಹೋದರರು ಪುತ್ಥಳಿ ವೀಕ್ಷಣೆ

ರಾಜ್ ಕುಟುಂಬದ ಮೂವರು ಸಹೋದರರು ಪುತ್ಥಳಿ ವೀಕ್ಷಣೆ

ಶಿವರಾಜ್ ಕುಮಾರ್ ಸಹ ಗಿರಿನಗರದ ಸ್ವಾಮಿ ವಿವೇಕಾನಂದ ಉದ್ಯಾನವನಕ್ಕೆ ಆಗಮಿಸಿ ಡಾ. ರಾಜ್ ಕುಮಾರ್ ಪುತ್ಥಳಿಯನ್ನು ವೀಕ್ಷಿಸಿದ್ದರು. ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ್ದ ಶಿವಣ್ಣ ಪುತ್ಥಳಿಯನ್ನು ವೀಕ್ಷಿಸಿ ಹೋಗಿದ್ದರು. ರಾಘಣ್ಣ ಸಹ ಪುತ್ಥಳಿಯನ್ನು ವೀಕ್ಷಿಸಿರುವುದರಿಂದ ಡಾ. ರಾಜ್ ಕುಮಾರ್ ಪುತ್ಥಳಿಯನ್ನು ಉದ್ಘಾಟಿಸಿದ ಪುನೀತ್ ರಾಜ್ ಕುಮಾರ್ , ಪುತ್ಥಳಿಯನ್ನು ವೀಕ್ಷಿಸಿದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸಹೋದರರೆಲ್ಲಾ ಈ ಪುತ್ಥಳಿಯನ್ನು ವೀಕ್ಷಿಸಿ ಚೆನ್ನಾಗಿದೆ ಎಂದು ತಿಳಿಸಿರುವುದು ವಿಶೇಷವಾಗಿದೆ.

ಸಂಘದ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದೇನು

ಸಂಘದ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದೇನು

ಗಿರಿನಗರದ ಸ್ವಾಮಿ ವಿವೇಕಾನಂದ ಪಾರ್ಕ್ ಇದೇ ವೇಳೆ ಸಂಸ್ಥೆಯ ವತಿಯಿಂದ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಗೌರವಿಸಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ "" ನಾವೆಲ್ಲರು ಡಾ. ರಾಜ್ ಕುಮಾರ್‌ ಮತ್ತು ಅವರ ಕುಟುಂಬದ ಅಭಿಮಾನಿಗಳು ಈ ಪುತ್ಥಳಿಯನ್ನು 2016 ರಲ್ಲಿ ಸ್ಥಾಪಿಸಲಾಯಿತು. ಪುನೀತ್ ರಾಜ್ ಕುಮಾರ್‌ ಪುತ್ಥಳಿಯ ಅನಾವರಣಕ್ಕೆ ಬಂದಿದ್ದರು. ಶಿವಣ್ಣ ಸಹ ಈ ನಡುವೆಯೇ ಬಂದು ಹೋಗಿದ್ದರು. ಇದೀಗ ರಾಘಣ್ಣ ಬಂದಿರುವುದು ಸಂತಸ ತಂದಿದೆ. ಡಾ.ರಾಜ್ ಹೆಸರಿರನ್ನು ಉಳಿಸಲು ಉದ್ಯಾನವನದಲ್ಲಿ ನಿತ್ಯ ಯೋಗಾಭ್ಯಾಸವನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

Recommended Video

ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada

English summary
Raghavendra Rajkumar saw Dr Rajkumar Statue at Swami Vivekananda Park in Girinagar in bengaluru while shooting for his new movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X