ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶನಿವಾರವೂ ನಡೆಯಲಿದೆ ಕಾರ್ತಿಕ್ ಗೌಡ ವಿಚಾರಣೆ

|
Google Oneindia Kannada News

ಬೆಂಗಳೂರು, ಸೆ. 13 : ಆರ್‌.ಟಿ.ನಗರ ಪೊಲೀಸರ ಮುಂದೆ ಹಾಜರಾಗಿದ್ದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಅವರ ವಿಚಾರಣೆ ಶುಕ್ರವಾರ ರಾತ್ರಿ ಎಂಟು ಗಂಟೆಯ ತನಕ ನಡೆದಿದೆ. ಶನಿವಾರವೂ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರ್ತಿಕ್ ಗೌಡ ತನ್ನನ್ನು ಮದುವೆಯಾಗಿದ್ದು ದೈಹಿಕ ಸಂಬಂಧವನ್ನು ಬೆಳೆಸಿದ್ದ, ಈಗ ಮತ್ತೊಂದು ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ತನಗೆ ವಂಚಿಸಿದ್ದಾರೆ ಎಂದು ನಟಿ ಮೈತ್ರಿಯಾಗೌಡ ಆರ್.ಟಿ.ನಗರ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಅತ್ಯಾಚಾರ, ವಂಚನೆ ಮತ್ತು ಅಪಹರಣ ಪ್ರಕರಣ ದಾಖಲಾಗಿತ್ತು.

Karthik Gowda

ಆದರೆ, ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಕಾರ್ತಿಕ್ ಗೌಡ ಶುಕ್ರವಾರ ಬೆಳಗ್ಗೆ ಆರು ಗಂಟೆಗೆ ಆರ್.ಟಿ.ನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ತನಿಖಾಧಿಕಾರಿ ಎಸಿಪಿ ಓಂಕಾರಯ್ಯ ಅವರು ಕಾರ್ತಿಕ್‌ ಗೌಡ ಹಾಜರಾಗುತ್ತಿದ್ದಂತೆ ಮೊದಲು ಜಾಮೀನು ಪ್ರಕ್ರಿಯೆಯನ್ನು ಮುಗಿಸಿ, ವಿಚಾರಣೆ ಆರಂಭಿಸಿದರು. [ಕಾರ್ತಿಕ್ ಗೌಡ ಏಕಾಏಕಿ ಪ್ರತ್ಯಕ್ಷ, ಸೀದಾ ಆಸ್ಪತ್ರೆಗೆ]

ವೈದ್ಯಕೀಯ ಪರೀಕ್ಷೆ : ಬೆಳಗ್ಗೆ 7.30ರ ವರೆಗೆ ಕಾರ್ತಿಕ್‌ ನನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸಿದರು. ನಂತರ 11 ಗಂಟೆ ವೇಳೆಗೆ ಕಾಡುಗೊಂಡನಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ 12.30ರ ಸುಮಾರಿಗೆ ಮಡಿವಾಳದ ವಿಚಾರಣಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. [ಘಾಟಿಯಲ್ಲಿ ಡಾಟಿ ಅವರ 'ಸೊಸೆ' ಮೈತ್ರಿಯಾ ಗೌಡ]

ಮಡಿವಾಳದ ಕೆಎಸ್‌ಆರ್‌ಪಿ ಅತಿಥಿ ಗೃಹದ ಪಕ್ಕದಲ್ಲಿರುವ ಎಫ್‌ಎಸ್‌ಎಲ್ ವಿಚಾರಣಾ ಕೇಂದ್ರಕ್ಕೆ ಕಾರ್ತಿಕ್‌ ಗೌಡ ಅವರನ್ನು ಕರೆದುಕೊಂಡ ಬಂದ ತನಿಖಾಧಿಕಾರಿಗಳ ತಂಡ ರಾತ್ರಿ 8 ಗಂಟೆಯವರೆಗೂ ವಿಚಾರಣೆ ನಡೆಸಿ ಹೇಳಿಕೆಯನ್ನು ಪಡೆದಿದ್ದಾರೆ. ತನಿಖಾಧಿಕಾರಿಗಳು ಕೇಳಿದ 25 ಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ವಕೀಲರ ಸಹಾಯದಿಂದ ಕಾರ್ತಿಕ್ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.

ಮೈತ್ರಿಯಾ ಪರಿಚಯವಿತ್ತು : ವಿಚಾರಣೆ ವೇಳೆ ಮೈತ್ರಿಯಾ ಗೌಡ ಅವರು ನನಗೆ ಪರಿಚಯವಿತ್ತು. ಆದರೆ, ಅದರ ಆಚೆಗೆ ಯಾವ ಸಂಬಂಧವೂ ಇರಲಿಲ್ಲ. ಮೈತ್ರಿಯಾ ಗೌಡ ತಾನಾಗೇ ನನಗೆ ಕರೆ ಮಾಡುತ್ತಿದ್ದರು. ಮಂಗಳೂರಿಗೆ ನಾನೇನು ಕರೆದಿರಲಿಲ್ಲ. ಅವರು ಗೆಳೆಯರ ಜೊತೆ ಪಾರ್ಟಿಗೆ ಬಂದಿದ್ದು ನನಗೆ ತಿಳಿದಿತ್ತು ಎಂದು ಕಾರ್ತಿಕ್ ಗೌಡ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

English summary
Union Railway minister D.V.Sadananda Gowda’s son Karthik Gowda appeared before the R.T.Nagar police on Friday for questioning in connection with a case where he has been accused of cheating and rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X