ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್‌ವೈ ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳದಿದ್ದಕ್ಕೆ ಆರ್ ಶಂಕರ್ ಏನಂದ್ರು?

|
Google Oneindia Kannada News

ಬೆಂಗಳೂರು, ಆಗಸ್ಟ್ 20: ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಏನೂ ಇಲ್ಲ ನಮ್ಮ ವಿಚಾರಣೆ ಕೋರ್ಟ್ ನಲ್ಲಿ ಇರುವುದರಿಂದ ನಮಗೆ ಕೊಟ್ಟಿಲ್ಲ ಅಷ್ಟೇ ಎಂದು ಪಕ್ಷೇತರ ಶಾಸಕ ಆರ್ ಶಂಕರ್ ಸಮಾಧಾನ ಪಟ್ಟುಕೊಂಡಿದ್ದಾರೆ.

ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವರು ತಮಗೆ ಸಚಿವ ಸ್ಥಾನ ಸಿಗದಿರುವ ಕುರಿತು ನೇರವಾಗಿ ಹೇಳಿಕೊಳ್ಳದೇ ಇದ್ದರೂ, ಉಳಿದ ಶಾಸಕರ ಜೊತೆ ಸಭೆ ನಡೆಸಿದ್ದಾರೆ.

ಬಿಜೆಪಿ ಅತೃಪ್ತ ಶಾಸಕರ ರಹಸ್ಯ ಸಭೆ: ಬಂಡಾಯದ ಮುನ್ಸೂಚನೆ? ಬಿಜೆಪಿ ಅತೃಪ್ತ ಶಾಸಕರ ರಹಸ್ಯ ಸಭೆ: ಬಂಡಾಯದ ಮುನ್ಸೂಚನೆ?

ಶಾಸಕರ ಜೊತೆ ಚರ್ಚೆ ನಡೆಸಿರುವ ಕುರಿತು ಮಾತನಾಡಿರುವ ಆರ್ ಶಂಕರ್ ನಾವುಗಳು ಆಗಾಗ ಟೀ ಕಾಫಿಗೆ ಭೇಟಿ ಮಾಡುತ್ತೇನೆ, ಇವತ್ತು ಶಾಸಕರ ಪ್ರಮಾಣವಚನ ಇತ್ತು ಅದಕ್ಕೆ ಎಲ್ಲಾ ಬೆಂಗಳೂರಿಗೆ ಬಂದಿದ್ದರು, ಇವತ್ತು ಅದಕ್ಕೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

R Shankar Is Not Included In The Cabinet What We Said

ಇನ್ನೊಂದು ಕಡೆ ಬಿಜೆಪಿಯ ಅತೃಪ್ತ ಶಾಸಕರು ಸಭೆ ನಡೆಸಿದ್ದು ಇದು ಬಂಡಾಯದ ಮುನ್ಸೂಚನೆಯೇ ಎನ್ನುವ ಅನುಮಾನ ಕಾಡಿದೆ.ಮಾಜಿ ಸಚಿವ ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ, ಉಮೇಶ್ ಕತ್ತಿ ಇನ್ನೂ ಕೆಲವು ಶಾಸಕರು ರೇಸ್ ವ್ಯೂ ಹೊಟೆಲ್‌ನಲ್ಲಿ ಇಂದು ಭೇಟಿಯಾಗಿ ಎರಡು ಗಂಟೆ ಮಾತುಕತೆ ನಡೆಸಿದ್ದಾರೆ.

ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಪ್ಪಚ್ಚು ರಂಜನ್, ಬಸನಗೌಡ ಪಾಟೀಲ್ ಯಾತ್ನಾಳ್, ಎಸ್.ಅಂಗಾರ, ಪೂರ್ಣಿಮಾ ಶ್ರೀನಿವಾಸ್ ಇನ್ನೂ ಕೆಲವರು ಯಡಿಯೂರಪ್ಪ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಯಡಿಯೂರಪ್ಪ ಅವರು ಮಾತ್ರ ಇನ್ನೂ ಐದು ಸಚಿವ ಸ್ಥಾನ ಖಾಲಿ ಇದೆ ನೋಡೋಣ ಎಂದಿದ್ದಾರೆ.

English summary
R Shankar Says There is nothing upset about not having a ministerial position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X