ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್: ಆರ್ ಅಶೋಕ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಬಿಬಿಎಂಪಿಯು ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಿದೆ. ಬೆಂಗಳೂರು ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ದೊರೆತಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

10 ಸಾವಿರಕ್ಕಿಂತ ಕಡಿಮೆ ನೀರನ್ನು ಬಳಸುವವರಿಗೆ ಒಂದು ವರ್ಷ ಉಚಿತ ನೀರು., ಎರಡೂವರೆ ಲಕ್ಷ ಕುಟುಂಬಕ್ಕೆ ಸದುಪಯೋಗವಾಗಲಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ, ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

ಕೊರೊನಾ: ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ ರಾಹುಲ್ ಗಾಂಧಿಕೊರೊನಾ: ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ ರಾಹುಲ್ ಗಾಂಧಿ

ಅನಂತ್ ಕುಮಾರ್ ಹೆಸರಲ್ಲಿ ಲ್ಯಾಪ್‌ಟಾಪ್ ನೀಡಲು 15 ಕೋಟಿ. ಕೊರೋನಾ ವೈರಸ್ ತಡೆಗಟ್ಟಲು ಮೊದಲಬಾರಿ ಹಣ ಮೀಸಲಿಡಲಾಗಿದೆ. ಬೆಂಗಳೂರಿನ ಎಂಟು ಭಾಗಗಳಲ್ಲಿ ಸ್ವಾಗತ ಕಮಾನು ನಿರ್ಮಾಣ. ಮಡಿವಾಳರಿಗೆ ವಾಶಿಂಗ್ ಮೆಶಿನ್ ನೀಡಲಾಗುತ್ತಿದೆ ಎಂದು ಹೇಳಿದರು.

R Ashok Statement On BBMP Budget

1. 2.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗುವಂತೆ 10 ಸಾವಿರ ಲೀ.ವರೆಗೆ ಉಚಿತವಾಗಿ ನೀರು ಸರಬರಾಜು.

2. ದಿವಂಗತ ಅನಂತಕುಮಾರ್ ಹೆಸರಿನಲ್ಲಿ ಪ್ರತಿ ವಾರ್ಡ್‌ನ 15 ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಗೆ ಸ್ತು.

3. ಬಿಬಿಎಂಪಿ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟಕ್ಕೆ ಅವಕಾಶ ಮತ್ತು ಇದಕ್ಕಾಗಿ 2.85 ಕೋಟಿ ರೂ. ಮೀಸಲು.

4. ಪಾಲಿಕೆಯ ಎಲ್ಲ ಶಾಲಾ- ಕಾಲೇಜು ಶಿಕ್ಷಕರಿಗೆ ಏಕರೂಪದ ಸಮವಸ್ತ್ರ ಜಾರಿಗೆ ಒಪ್ಪಿಗೆ.

5. ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಉಚಿತವಾಗಿ ಅಂಚೆ ಮೂಲಕ ಜನರಿಗೆ ತಲುಪಿಸಲು ಕ್ರಮ

6.. ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಹಾಗೂ ದಾಸರಹಳ್ಳಿ ವಲಯದಲ್ಲಿ ಹೊಸದಾಗಿ ಪಾಲಿಕೆಯ ಶಾಲೆ ನಿರ್ಮಾಣಕ್ಕೆ ಹತ್ತು ಕೋಟಿ ರೂ. ನಿಗದಿ.

7. ಬನ್ನೇರುಘಟ್ಟ ರಸ್ತೆಯಲ್ಲಿ ಪಂಡಿತ್ ದೀನದಯಾಳು ಉಪಾಧ್ಯಾಯರ ಹೆಸರಿನಲ್ಲಿ 25 ಐಸಿಯು ಹಾಸಿಗೆ ಸಾಮರ್ಥ್ಯದ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ.

ಪಾದರಾಯನಪುರ ಘಟನೆಗೆ ಯಾರ್ಯಾರ ಪ್ರತಿಕ್ರಿಯೆ ಏನು? ಇಲ್ಲಿವೆ ಹೇಳಿಕೆಗಳು!ಪಾದರಾಯನಪುರ ಘಟನೆಗೆ ಯಾರ್ಯಾರ ಪ್ರತಿಕ್ರಿಯೆ ಏನು? ಇಲ್ಲಿವೆ ಹೇಳಿಕೆಗಳು!

ಸಂಪನ್ಮೂಲ ಕ್ರೂಢೀಕರಣಕ್ಕೆ ಕ್ರಮ:

1. ಬಿ ಖಾತ ಆಸ್ತಿಗಳನ್ನ ಎ ಖಾತ ಮಾಡಲು ನಿರ್ಧಾರ.

2. ಹೊಸ ಆಸ್ತಿಗಳನ್ನ ಖಾತ ನಖಲು ಮತ್ತು ಖಾತ ದೃಢೀಕರಣ ಗಣಕೀಕರಣ.

3. ವರ್ಷಕ್ಕೂ ಅಧಿಕವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ರೆ ಕಚೇರಿಯ ಋಣಭಾರ ಪತ್ರದಲ್ಲಿ ನಮೂದು.

4. ಬಾಕಿ ಇರುವ ಸುಧಾರಣ ಶುಲ್ಕ ಅಂದಾಜು 300 ಕೋಟಿ ವಸೂಲಿಗೆ ಕ್ರಮ.

5. ಉದ್ದಿಮೆ ಪರವಾನಗಿ ಸರಳೀಕರಣ ಮಾಡುವುದು.

6. ನಗರದಲ್ಲಿರುವ ಹೋಟೆಲ್‌ಗಳನ್ನು ಎ.ಬಿ.ಸಿ.ಡಿ ಮಾದರಿಯಲ್ಲಿ ವರ್ಗೀಕರಣಗೊಳಿಸುವುದು.

ಆರೋಗ್ಯ ಸುಧಾರಣಾ ಕ್ರಮಗಳು:

1. ಕೊರೋನಾ ವೈರಸ್ ನಿಯಂತ್ರಣಗೊಳಿಸಲು 49.50 ಕೋಟಿ ಮೀಸಲು.

2. ಗೋ ಶಾಲೆಗಳಿಗೆ ಮೇವು ಒದಗಿಸಲು 50ಲಕ್ಷ.

3. ಜನನ ಮತ್ತು ಮರಣ ಪ್ರಮಾಣದ ಪತ್ರಗಳನ್ನ ಉಚಿತವಾಗಿ ನೀಡುವುದು.

4. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ 20 ಕೋಟಿ ವೆಚ್ಚದಲ್ಲಿ ಮಕ್ಕಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ.

5. ಉಚಿತವಾಗಿ ಡಯಾಲಿಸಿಸ್ ಸೇವೆ, ನಿರ್ವಹಣೆಗೆ 16 ಕೋಟಿ.

6. ಲಿಂಕ್ ವರ್ಕರ್ಸ್‌ಗಳಿಗೆ ಪ್ರತಿ ತಿಂಗಳು ಸಾವಿರ ರೂ ಸಂಭಾವನೆ ಹೆಚ್ಚಳ.

7. ಹೊಸ ವಲಯಗಳಲ್ಲಿ ನಾಯಿ ಕೆನಲ್ ಸ್ಥಾಪನೆಗೆ 5 ಕೋಟಿ ಮೀಸಲು.

8. ಕೊರೊನಾ ನಿಯಂತ್ರಣಕ್ಕೆ ಪ್ರತಿ ವಾರ್ಡ್ ಗೆ 25 ಲಕ್ಷ ರೂ. ಅನುದಾನ

9. ಪತ್ರಕರ್ತರಿಗೆ ಆರೋಗ್ಯ ದೃಷ್ಟಿಯಿಂದ ‌ಅಪಘಾತ ವಿಮೆಗೆ 15 ಲಕ್ಣ ರೂ. ಅನುದಾನ ನಿಗದಿ.

English summary
First Time In A History BBMP Presented Video Conference Said Minister R Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X