ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಅಶೋಕ್‌ಗೆ ಸತತ ನಿರಾಸೆ ನೀಡುತ್ತಿರುವ ಬಿಜೆಪಿ ಹೈಕಮಾಂಡ್‌

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ಯಡಿಯೂರಪ್ಪ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಂದಿನಿಂದಲೂ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್‌ಗೆ ನಿರಾಸೆಯ ಮೇಲೆ ನಿರಾಸೆಗಳು ಆಗುತ್ತಲೇ ಇದೆ.

ಡಿಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿ ಆಗಿದ್ದ ಆರ್.ಅಶೋಕ್ ಅವರನ್ನು ಡಿಸಿಎಂ ಹುದ್ದೆಯಿಂದ ದೂರವಿಟ್ಟು, ಅವರ ಬದಲಿಗೆ ಅವರದೇ ಜಾತಿಯ ಅಶ್ವತ್ಥನಾರಾಯಣ್ ಅವರನ್ನು ಡಿಸಿಎಂ ಮಾಡಲಾಯಿತು. ಆ ಮೂಲಕ ಆರ್.ಅಶೋಕ್‌ಗೆ ಬದಲಿ ಒಕ್ಕಲಿಗ ನಾಯಕನನ್ನು ಮುನ್ನೆಲೆಗೆ ತರಲು ಬಿಜೆಪಿ ಯತ್ನಿಸಿತು.

ಖಾತೆ ಹಂಚಿಕೆ ವಿಷಯದಲ್ಲೂ ಸಹ, ಗೃಹ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿ ಅಶೋಕ್‌ಗೆ ಕಂದಾಯ ಸಚಿವ ಸ್ಥಾನ ನೀಡಲಾಗಿದೆ. ಈಗ ಉಸ್ತುವಾರಿ ಸಚಿವ ಸ್ಥಾನದಲ್ಲಿಯೂ ಅಶೋಕ್ ನಿರಾಸೆ ಅನುಭವಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?

ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅಶೋಕ್‌ಗೆ ಮತ್ತೆ ನಿರಾಸೆ ಆಗಿದ್ದು, ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಜೊತೆಗೆ ಪ್ರಭಾರಿಯಾಗಿ ಮಂಡ್ಯವನ್ನು ನೀಡಲಾಗಿದೆ.

ಚಿನ್ನದ ಮೊಟ್ಟೆ ಇಡುವ ಕೋಳಿ ಬೆಂಗಳೂರು ನಗರ

ಚಿನ್ನದ ಮೊಟ್ಟೆ ಇಡುವ ಕೋಳಿ ಬೆಂಗಳೂರು ನಗರ

ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ ಪಕ್ಷದ ಒಳಗೆ ನಡೆಯುತ್ತಿತ್ತು. ಆರ್.ಅಶೋಕ್ ಅವರು ಪೈಪೋಟಿಯ ಮುಂಚೂಣಿಯಲ್ಲಿದ್ದರು. ಬೆಂಗಳೂರು ಉಸ್ತುವಾರಿ ಸ್ಥಾನವನ್ನು ಅವರಿಗೆ ನೀಡಲಾಗುತ್ತದೆ ಎನ್ನಲಾಗಿತ್ತು, ಆದರೆ ಹಾಗಾಗಿಲ್ಲ.

ತೆಲಂಗಾಣ ಸಂಪುಟ ವಿಸ್ತರಣೆ : 6 ಮಂದಿ ಸಚಿವರ ಸೇರ್ಪಡೆತೆಲಂಗಾಣ ಸಂಪುಟ ವಿಸ್ತರಣೆ : 6 ಮಂದಿ ಸಚಿವರ ಸೇರ್ಪಡೆ

ಬೆಂಗಳೂರು ನಗರ ಉಸ್ತುವಾರಿ ಯಡಿಯೂರಪ್ಪ ಬಳಿ

ಬೆಂಗಳೂರು ನಗರ ಉಸ್ತುವಾರಿ ಯಡಿಯೂರಪ್ಪ ಬಳಿ

ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನವನ್ನು ಯಡಿಯೂರಪ್ಪ ಅವರು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಆ ಮೂಲಕ ಪಕ್ಷದ ಒಳಗೆ ಏಳಬಹುದಾಗಿದ್ದ ಸಂಭಾವ್ಯ ಅಸಮಾಧಾನವನ್ನು ತಡೆಯುವ ಯತ್ನ ಮಾಡಿದ್ದಾರೆ. ಆದರೆ ಇದು ಆರ್.ಅಶೋಕ್ ಕಣ್ಣು ಕೆಂಪಗಾಗಿಸಿದೆ.

ಶ್ರೀರಾಮುಲು ಪಾಲಿಗಿಲ್ಲ ಬಳ್ಳಾರಿ ಉಸ್ತುವಾರಿ

ಶ್ರೀರಾಮುಲು ಪಾಲಿಗಿಲ್ಲ ಬಳ್ಳಾರಿ ಉಸ್ತುವಾರಿ

ಶ್ರೀರಾಮುಲು ಅವರೂ ಸಹ ಉಸ್ತುವಾರಿ ಸಚಿವ ನೇಮಕ ಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಸಿದ್ದಾರೆ. ರಾಮುಲು ಬಯಸಿದ್ದ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನ ಅವರಿಗೆ ದೊರೆತಿಲ್ಲ ಬದಲಿಗೆ ಅವರಿಗೆ ರಾಯಚೂರು ನೀಡಲಾಗಿದೆ.

ರೇಣುಕಾಚಾರ್ಯ ಕೇಳಿದ್ದು ಸಚಿವ ಸ್ಥಾನ ಆದರೆ ಸಿಕ್ಕಿದ್ದು ಬೇರೆರೇಣುಕಾಚಾರ್ಯ ಕೇಳಿದ್ದು ಸಚಿವ ಸ್ಥಾನ ಆದರೆ ಸಿಕ್ಕಿದ್ದು ಬೇರೆ

ಡಿಸಿಎಂ ಲಕ್ಷ್ಮಣ ಸವದಿಗೂ ಬೇಸರ

ಡಿಸಿಎಂ ಲಕ್ಷ್ಮಣ ಸವದಿಗೂ ಬೇಸರ

ಅದೃಷ್ಟದ ಡಿಸಿಎಂ ಲಕ್ಷ್ಮಣ ಸವದಿಗೂ ಈ ಪಟ್ಟಿಯಿಂದ ಬೇಸರವಾಗಿದೆ ಎನ್ನಲಾಗಿದೆ. ಸವದಿ ಅವರಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಬೇಕಾಗಿತ್ತು. ಆದರೆ ಅವರಿಗೆ ಬಳ್ಳಾರಿ ಉಸ್ತುವಾರಿಯನ್ನು ನೀಡಲಾಗಿದೆ.

English summary
R Ashok has not been appointed as Bengaluru city in charge minister. Bengaluru city portfolio is kept by Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X