ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಬೆಂಗಳೂರಿನಲ್ಲಿ ಕೊರೊನಾ ಕಟ್ಟಿಹಾಕಲು ಅಶೋಕ್ ಮಾಸ್ಟರ್ ಪ್ಲಾನ್

|
Google Oneindia Kannada News

ಬೆಂಗಳೂರು, ಜುಲೈ 11: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಏಂಟು ವಲಯಗಳನ್ನಾಗಿ ವಿಗಂಡಿಸಿ, ಪ್ರತಿ ವಾರ್ಡ್‌ಗೂ ಒಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ದಕ್ಷಿಣ ವಲಯದ ಕೊವಿಡ್ ಉಸ್ತುವಾರಿ ಆರ್ ಅಶೋಕ್ ಇಂದು ಸಭೆ ನಡೆಸಿದರು.

Recommended Video

Corona ವಿರುದ್ಧ R Ashok ಮಾಸ್ಟರ್ ಪ್ಲಾನ್ | Oneindia Kannada

ದಕ್ಷಿಣ ವಲಯದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ಹೇಗೆ ನಿಯಂತ್ರಿಸಬೇಕು, ಸೋಂಕಿತರ ಚಿಕಿತ್ಸೆ ಕುರಿತಂತೆ ಎದುರಾಗಿರುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬ ವಿಷಯಗಳನ್ನು ಚರ್ಚೆ ಮಾಡಿ, ಹಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ಮುಂದಿನ ದಿನದಲ್ಲಿ ಕೊವಿಡ್ ಕೆಲಸ ಹೇಗಿರಲಿದೆ ಎಂದು ವಿವರಿಸಿದರು. ಮುಂದೆ ಓದಿ....

ಲಾಕ್ಡೌನ್ ನಿಂದ ಕೊರೊನಾ ಕಂಟ್ರೋಲ್ ಮಾಡೋದು ಕನಸಿನ ಮಾತು- ಆರ್ ಅಶೋಕ್ಲಾಕ್ಡೌನ್ ನಿಂದ ಕೊರೊನಾ ಕಂಟ್ರೋಲ್ ಮಾಡೋದು ಕನಸಿನ ಮಾತು- ಆರ್ ಅಶೋಕ್

ಶಾಸಕರು, ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ

ಶಾಸಕರು, ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ

''ನಗರದಲ್ಲಿ ಬೆಡ್ ಸಮಸ್ಯೆ ಎಂಬ ವರದಿಗಳ ಹಿನ್ನೆಲೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲಿ ಬೆಡ್ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಶಾಸಕರು ಮತ್ತು ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ ವಹಿಸಲಾಗುತ್ತದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಎಷ್ಟು ಬೆಡ್ ಲಭ್ಯತೆ, ಆಸ್ಪತ್ರೆ ಬಗ್ಗೆ ಮಾಹಿತಿ ಎಂಎಲ್‌ಎಗೆ ಸಿಗಬೇಕು. ಈ ನಿಟ್ಟಿನಲ್ಲಿ ಮಂಗಳವಾರ ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಯಲಿದೆ'' ಎಂದು ಆರ್ ಅಶೋಕ್ ತಿಳಿಸಿದ್ದಾರೆ.

ಸ್ವಯಂ ಸೇವಕರ ನೇಮಕ

ಸ್ವಯಂ ಸೇವಕರ ನೇಮಕ

''ವಾರ್ಡ್ ವಾರು ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಲಾಗಿದೆ. ವಾರ್ಡ್ ಗಳಲ್ಲಿ ಸೋಂಕು ಪತ್ತೆ ಆದ ಕೂಡಲೇ ಸ್ವಯಂ ಸೇವಕರು ಸೋಂಕಿತರ ಮನೆ, ಬೀದಿಯನ್ನು ಕಂಟೈನ್ಮೆಂಟ್ ಮಾಡ್ತಾರೆ. ಸೋಂಕಿತರ‌ ಮನೆಗಳಿಗೆ ದಿನಸಿ, ಇತರೆ ವಸ್ತುಗಳನ್ನು ಪೂರೈಸ್ತಾರೆ. ಸ್ವಯಂ ಸೇವಕರು ಸ್ವಂತ ವೆಚ್ಚದಲ್ಲಿ ಕರ್ತವ್ಯ ನಿರ್ವಹಿಸಲು ಮುಂದೆ ಬಂದಿದ್ದಾರೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.

ಕೊರೊನಾ ಭ್ರಷ್ಟಾಚಾರ: ರಾಜ್ಯ ಸರ್ಕಾರಕ್ಕೆ 6 ಲೆಕ್ಕ ಕೇಳಿದ ಸಿದ್ದರಾಮಯ್ಯಕೊರೊನಾ ಭ್ರಷ್ಟಾಚಾರ: ರಾಜ್ಯ ಸರ್ಕಾರಕ್ಕೆ 6 ಲೆಕ್ಕ ಕೇಳಿದ ಸಿದ್ದರಾಮಯ್ಯ

ವಲಯವಾರು ಕುರಿತು ಸಿಎಂ ಗೆ ಮಾಹಿತಿ

ವಲಯವಾರು ಕುರಿತು ಸಿಎಂ ಗೆ ಮಾಹಿತಿ

ಕೊರೊನಾ ನಿಯಂತ್ರಣ ವಾರ್ಡ್ ಮಟ್ಟದಿಂದ ಮಾಡ್ತಿದ್ದೇವೆ. ಈ ಬಗ್ಗೆ ಪ್ರತಿದಿನ ದೂರವಾಣಿ ಮೂಲಕ ಸಿಎಂಗೆ ಮಾಹಿತಿ ಕೊಡ್ತೇವೆ. ಪ್ರತಿನಿತ್ಯದ ಮೀಟಿಂಗ್ ಬಗ್ಗೆಯೂ ಮುಖ್ಯಮಂತ್ರಿಗೆ ತಿಳಿಸುತ್ತೇವೆ. ಸಂಸದ ತೇಜಸ್ವಿ ಸೂರ್ಯ ‌ದಕ್ಷಿಣ ವಲಯಕ್ಕೆ ಹೆಲ್ಪ್ ಲೈನ್ ತೆರೆಯಲಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ಶನಿವಾರ ಲಾಕ್ ಡೌನ್ ವಿಚಾರ

ಶನಿವಾರ ಲಾಕ್ ಡೌನ್ ವಿಚಾರ

ಪ್ರಸ್ತುತ ಭಾನುವಾರ ಲಾಕ್‌ಡೌನ್ ಮಾಡಲಾಗುತ್ತಿದೆ. ಭಾನುವಾರದ ಜೊತೆಗೆ ಶನಿವಾರವೂ ಲಾಕ್‌ಡೌನ್ ಆಗಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ''ನಮ್ಮ ವಲಯದಲ್ಲಿ ಲಾಕ್ ಡೌನ್ ಬಗ್ಗೆ ಅಧಿಕಾರಿಗಳು ತಿಳಿಸಿಲ್ಲ. ಸಿಎಂ ಮನಸ್ಸಲ್ಲೂ ಲಾಕ್ ಡೌನ್ ಬಗ್ಗೆ ಇಲ್ಲ. ಸದ್ಯಕ್ಕೆ ಶನಿವಾರ ಲಾಕ್ ಡೌನ್ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ'' ಎಂದಿದ್ದಾರೆ.

ಲೆಕ್ಕ ಕೊಡಿ‌ ಎಂದು ಸಿದ್ದರಾಮಯ್ಯ ಟ್ವೀಟ್ ವಿಚಾರ

ಲೆಕ್ಕ ಕೊಡಿ‌ ಎಂದು ಸಿದ್ದರಾಮಯ್ಯ ಟ್ವೀಟ್ ವಿಚಾರ

ಇನ್ನು ಸಿದ್ದರಾಮಯ್ಯ ಅವರ ಲೆಕ್ಕ ಕೊಡಿ ಅಭಿಯಾನ ಕುರಿತು ಮಾತನಾಡಿದ ಆರ್ ಅಶೋಕ್ ''ಸಿದ್ದರಾಮಯ್ಯ ಒಬ್ರೇ ಅಲ್ಲ ರಾಜ್ಯದಲ್ಲಿ ಯಾರೇ ಲೆಕ್ಕ ಕೇಳಿದ್ರು ನಾವು ಕೊಡ್ತೀವಿ. ನಮ್ ಸರ್ಕಾರದ ಎಲ್ಲ ಲೆಕ್ಕ ಕೊಡ್ತೀವಿ. ಅವರ ಸರ್ಕಾರದಲ್ಲಿ ಅವರು ಏನಾದ್ರೂ ಲೆಕ್ಕ ಕೊಟ್ಟಿಲ್ಲದಿದ್ರೆ, ಅದೇ ಗುಂಗಲ್ಲಿ ನಮಗೂ ಕೇಳ್ತಿದ್ದಾರೆ. ನಾವಂತೂ ಪೈಸೆ ಪೈಸೆ ಲೆಕ್ಕ ಕೊಡ್ತೀವಿ'' ಎಂದಿದ್ದಾರೆ.

ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗಿದೆ

ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗಿದೆ

ಖಾಸಗಿ ಆಸ್ಪತ್ರೆಯಲ್ಲಿ ಸೇವೆಗೆ ಬರಲು ಕೆಲ ವೈದ್ಯ ಸಿಬ್ಬಂದಿ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು 'ದಕ್ಷಿಣ ವಲಯದಲ್ಲಿ ಖಾಸಗಿ ಆಸ್ಪತ್ರೆಯೊಂದರ ಮೂವರು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗಿದೆ. ಫೋರ್ಟೀಸ್ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮೂವರನ್ನು ಸಸ್ಪೆಂಡ್ ಮಾಡಿಸಿದ್ದೇವೆ. ಇನ್ಮುಂದೆ ವೈದ್ಯ ಸಿಬ್ಬಂದಿ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಇನ್ಮುಂದೆ ಕೆಲಸಕ್ಕೆ ಬರದ ವೈದ್ಯ ಸಿಬ್ಬಂದಿಯನ್ನು ಸಸ್ಪೆಂಡ್ ಬದಲು ಬುದ್ಧಿ ಹೇಳಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡ್ತೇವೆ'' ಎಂದು ತಿಳಿಸಿದ್ದಾರೆ.

English summary
Karnataka Minister R Ashok Appoints ward level Volunteers to work against coronavirus in Bangalore South.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X