ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಯೋಗಿಗೆ ಪಿಂಕ್ ಸ್ಲಿಪ್, ವೈರಲ್ ಆಗಿದೆ ಆಡಿಯೋ ತುಣುಕು

By Prasad
|
Google Oneindia Kannada News

ಬೆಂಗಳೂರು, ಜುಲೈ 08 : ಕಾಸ್ಟ್ ಕಟ್ಟಿಂಗ್, ಪಿಂಕ್ ಸ್ಲಿಪ್ ನಂಥ ಪಿಡುಗು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ, ಟೈಫೈಡ್ ಜ್ವರಗಳಿಗಿಂತ ಭೀಕರವಾಗಿ ಆವರಿಸಿಕೊಂಡಿವೆ. ಈ ರೋಗಗಳಿಗೆ ಚಿಕಿತ್ಸೆಯಾದರೂ ಇದೆ, ಆದರೆ ಕೆಲಸದಿಂದ ಇದ್ದಕ್ಕಿದ್ದಂತೆ ತೆಗೆಯುವ ಪಿಡುಗಿಗೆ ಯಾವುದೇ ಮದ್ದು ಕಾಣಿಸುತ್ತಿಲ್ಲ.

ಹಲವಾರು ಕಂಪನಿಗಳಲ್ಲಿ ಖರ್ಚುವೆಚ್ಚ ತಗ್ಗಿಸುವ ನೆಪದಲ್ಲಿ ಹೋಲ್ ಸೇಲ್ ಆಗಿ ಉದ್ಯೋಗಿಗಳಿಂದ ರಾಜೀನಾಮೆ ಪಡೆಯಲಾಗುತ್ತಿದೆ. ಕೆಲವು ಕಂಪನಿಗಳು ಇದನ್ನು ಅಲ್ಲಗಳೆಯುತ್ತಿವೆಯಾದರೂ, ಓರ್ವ ಜಾಣ ಉದ್ಯೋಗಿ ಇಂಥ ಕಂಪನಿಗಳಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ.

ಮೈಕ್ರೋಸಾಫ್ಟ್ ನಿಂದ ಸುಮಾರು 3000 ಉದ್ಯೋಗ ಕಡಿತ!ಮೈಕ್ರೋಸಾಫ್ಟ್ ನಿಂದ ಸುಮಾರು 3000 ಉದ್ಯೋಗ ಕಡಿತ!

Quit or get terminated : Audio clip goes viral on social media

ಹೀಗೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಒಂದು ಆಡಿಯೋ ತುಣುಕು ಆ 'ಟೆಕ್' ಕಂಪನಿಯ ಹುಳುಕು ಮತ್ತು ಬಂಡವಾಳವನ್ನು ಬಯಲು ಮಾಡಿದೆ. ಈ ಆಡಿಯೋ ಈಗ ಎಲ್ಲೆಲ್ಲೂ ವೈರಲ್ ಆಗಿದ್ದು, ಉದ್ಯೋಗಿಗಳನ್ನು ಕಂಪನಿಗಳು ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು ಹೊರಹಾಕಿದೆ. ಆ ಆಡಿಯೋ ತುಣುಕಿನಲ್ಲಿ ಮಾತುಗಳು ಹೀಗೆ ಆರಂಭವಾಗುತ್ತವೆ...

ಉದ್ಯೋಗಿ ಬಳಿ ಉದ್ದೋಉದ್ದಕ್ಕೆ ಕ್ಷಮೆ ಕೇಳಿದ ಟೆಕ್ ಮಹೀಂದ್ರಉದ್ಯೋಗಿ ಬಳಿ ಉದ್ದೋಉದ್ದಕ್ಕೆ ಕ್ಷಮೆ ಕೇಳಿದ ಟೆಕ್ ಮಹೀಂದ್ರ

"ಕಂಪನಿಯಲ್ಲಿ ಕಾಸ್ಟ್ ಆಪ್ಟಿಮೈಸೇಷನ್ ನಡೆಯುತ್ತಿದೆ. ರಾಜೀನಾಮೆ ಪಡೆಯುತ್ತಿರುವವ ಉದ್ಯೋಗಿಗಳ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆ. ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ನೀವಾಗಿಯೇ ರಾಜೀನಾಮೆ ನೀಡಿದರೆ, ನಿಮ್ಮನ್ನು ಗೌರವಯುತವಾಗಿ ಕಳಿಸಿಕೊಡಲಾಗುತ್ತದೆ. ಇಲ್ಲದಿದ್ದರೆ, ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಹೀಗಾದರೆ ನಿಮಗೆ ಯಾವ ಲಾಭವೂ ಸಿಗುವುದಿಲ್ಲ..."

ಟಾಟಾ ಮೋಟಾರ್ಸ್​ ನಿಂದ 1500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ಟಾಟಾ ಮೋಟಾರ್ಸ್​ ನಿಂದ 1500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ಹೀಗೆ ಕಂಪನಿಯ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿ ಉದ್ಯೋಗಿಗೆ ಒತ್ತಿಒತ್ತಿ ಹೇಳುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ. ಉದ್ಯೋಗಿ ನನಗೆ ಮಾನವೀಯತೆಯ ದೃಷ್ಟಿಯಿಂದ ಸ್ವಲ್ಪವಾದರೂ ಕಾಲಾವಕಾಶ ನೀಡಬೇಕು ಎಂದು ಗೋಗರೆದರೂ ಆ ಮಹಿಳೆ ಕೇಳಲಿಲ್ಲ. ನಾನು ಮೇಲಿನ ಅಧಿಕಾರಿಯನ್ನು ಭೇಟಿಯಾಗಲಾದರೂ ಅವಕಾಶ ನೀಡಿ ಎಂದರೂ ಆ ಮಹಿಳೆ ಸೊಪ್ಪು ಹಾಕಲಿಲ್ಲ.

ಇದು ಕಂಪನಿಯ ಹಿರಿಯ ಅಧಿಕಾರಿಗಳ ನಿರ್ಧಾರ, ನನ್ನ ನಿರ್ಧಾರವಲ್ಲ. ಕಂಪನಿಯ ಎಂಡಿ, ಸಿಇಓರಂಥವರೇ ಈ ನಿರ್ಧಾರ ತೆಗೆದುಕೊಂಡ ಮೇಲೆ ಯಾರನ್ನು ಹೋಗಿ ಭೇಟಿಯಾದರೆ ಏನು ಪ್ರಯೋಜನ ಎಂದು ಆ ಮಹಿಳೆ ಉದ್ಯೋಗಿಯನ್ನು ದಬಾಯಿಸಿ ಕಳಿಸಿದ್ದಾಳೆ. ಆ ಕಂಪನಿಯ ಸಿಇಓ ನಂತರ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ! ಇದ್ಯಾವ ನ್ಯಾಯ ಹೇಳಿ?

English summary
An audio clip recorded by an employee, who was asked to quit immediately or get terminated as part of company's optimization program, has gone viral on social media. The tech company CEO has apologized later for the way the employees were terminated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X