ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವೇಕರ್‌ನಿಂದ ಬೆಂಗಳೂರಿನ ಆಸ್ಪತ್ರೆಗಳಿಗೆ 10,000 ಓಟ್‌ಮೀಲ್ಸ್‌ ವಿತರಣೆ

|
Google Oneindia Kannada News

ಬೆಂಗಳೂರು, ಜೂ 24, 2021: ಸ್ಥಳೀಯ ಆರೋಗ್ಯ ಸಮುದಾಯದ ಸ್ಫೂರ್ತಿ, ಧೈರ್ಯ ಮತ್ತು ಬದ್ಧತೆಗೆ ಗೌರವ ಸೂಚಿಸಲು ಮುಂದಾಗಿರುವ ಕ್ವೇಕರ್, ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ 10,000 ಓಟ್‌ಮೀಲ್ಸ್ ಅನ್ನು ವಿತರಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಉಪಸ್ಥಿತಿಯಲ್ಲಿ ಓಟ್‌ಮೀಲ್‌ಗಳನ್ನು ಆಸ್ಪತ್ರೆಗೆ ವಿತರಿಸಲಾಯಿತು.

ವೈದ್ಯರು, ದಾದಿಯರು ಮತ್ತು ಸಂಪೂರ್ಣ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಸಮುದಾಯದ ಪ್ರತಿಯೊಬ್ಬ ಸದಸ್ಯರು ಹಲವಾರು ಕುಟುಂಬಗಳನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ವಿಶೇಷ ಉಪಕ್ರಮದ ಮೂಲಕ, ಕ್ವೇಕರ್, ಸ್ಥಳೀಯ ಆರೋಗ್ಯ ಸಮುದಾಯಕ್ಕೆ ಭರವಸೆ ಮತ್ತು ಶಕ್ತಿಭರಿತ ಆಹಾರ ಒದಗಿಸುವ ಮೂಲಕ ತನ್ನ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, "ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಸೇವೆ ಮಾಡಲು ಆರೋಗ್ಯ ಸಮುದಾಯವು ಪಟ್ಟುಬಿಡದೆ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ, ನಮ್ಮ ಮುಂಚೂಣಿಯ ಯೋಧರಿಗೆ ಸಹಾಯ ಮಾಡಲು ಬೆಂಗಳೂರಿನ ಸ್ಥಳೀಯ ಆಸ್ಪತ್ರೆಗಳಿಗೆ 10,000 ಓಟ್ಸ್‌ ಮೀಲ್‌ಗಳನ್ನು ಒದಗಿಸಿದ್ದಕ್ಕಾಗಿ ಕ್ವೇಕರ್ ಅವರನ್ನು ಪ್ರಶಂಸಿಸುತ್ತೇನೆ" ಎಂದರು.

Quaker India provides 10,000 meals to Frontline Warriors

ಪೆಪ್ಸಿಕೋ ಇಂಡಿಯಾದ ಮಾರ್ಕೆಟಿಂಗ್ - ಫುಡ್ಸ್ ನ ಹಿರಿಯ ನಿರ್ದೇಶಕ ಅನ್ಶುಲ್ ಖನ್ನಾ, '' ಈ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ, ಆರೋಗ್ಯ ಸಮುದಾಯ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ. ನಮ್ಮ ಕುಟುಂಬಗಳನ್ನು ರಕ್ಷಿಸಿ ಮತ್ತು ನಮ್ಮ ಸಮುದಾಯಗಳನ್ನು ಸುರಕ್ಷಿತವಾಗಿರಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಕ್ವೇಕರ್ ಅವರ ಈ ಉಪಕ್ರಮದ ಮೂಲಕ, ಪೆಪ್ಸಿಕೋ ಇಂಡಿಯಾ, ಬೆಂಗಳೂರಿನ ಸ್ಥಳೀಯ ಆರೋಗ್ಯ ಸಮುದಾಯದ ನಿಸ್ವಾರ್ಥ ಸೇವೆ ಮತ್ತು ಧೀರ ಮನೋಭಾವವನ್ನು ಶ್ಲಾಘಿಸುತ್ತೇವೆ. ದೇಶಾದ್ಯಂತದ ಆಸ್ಪತ್ರೆಗಳಿಗೆ ಪೌಷ್ಠಿಕಾಂಶ ಮತ್ತು ಶಕ್ತಿ ತುಂಬಿದ ಆರೋಗ್ಯಕರ ಓಟ್ಸ್ ಅನ್ನು ಒದಗಿಸುವ ಮೂಲಕ, #SalitingOurHeroes ಆರೋಗ್ಯ ವೃತ್ತಿಪರರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ. ಇದು "ನೈಜ ಸದೃಢತೆಗಾಗಿ ಆಹಾರ" ಎಂಬ ಘೋ಼ಷವಾಕ್ಯ ಒಳಗೊಂಡಿದೆ" ಎಂದರು.

Recommended Video

ದ್ವಿಪಥ ರೈಲ್ವೇ ಕಾಮಗಾರಿ ಪರಿಶೀಲಿಸಿದ ಸಿಎಂ, ಸಚಿವ ಆರ್.ಅಶೋಕ್ | Oneindia Kannada

English summary
Quaker India provides 10,000 meals to local hospitals of Bengaluru to assist our Frontline Warriors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X