ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರದಲ್ಲಿ ಗೊಂದಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಧಿಸುವ ಶುಲ್ಕದ ಬಗೆಗೆ ಶಾಲೆಗಳಲ್ಲಿ ಫಲಕದಲ್ಲಿ ಪ್ರದರ್ಶಿಸಬೇಕು ಎಂಬ ಹೊಸ ನಿಯಮ ಜಾರಿಯಾಗುವ ಮುನ್ನವೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂಬುದು ಸಂಸ್ಥೆಗಳ ಬೇಸರಕ್ಕೆ ಕಾರಣವಾಗಿದೆ.

ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ನಿಗದಿ ಮಾಡಿಲ್ಲವಾದರೂ ಆ ವಿಷಯವೇ ತಮಗೆ ಗೊತ್ತಿಲ್ಲ ಎಂಬಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶುಲ್ಕದ ವಿವರವನ್ನು ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸುವಂತೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಖಾಸಗಿ ಶಾಲೆಗಳಿಗೆ ಶೀಘ್ರವೇ ಶುಲ್ಕ ನಿಗದಿ: ಶಾಲಿನಿ ರಜನೀಶ್ ಖಾಸಗಿ ಶಾಲೆಗಳಿಗೆ ಶೀಘ್ರವೇ ಶುಲ್ಕ ನಿಗದಿ: ಶಾಲಿನಿ ರಜನೀಶ್

ಈ ವಿಚಾರ ಇದೀಗ ಖಾಸಗಿ ಶಾಲೆಗಳನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಹೊಸ ಶುಲ್ಕ ನೀತಿ ಜಾರಿಗೆ ಬರುವ ಮೊದಲೇ ಶಾಲೆಗಳು ಪಡೆಯುತ್ತಿರುವ ಪ್ರವೇಶ ಶುಲ್ಕವನ್ನು ಸೂಚನಾಫಲಕಗಳಲ್ಲಿ ಪ್ರಕಟಿಸಬೇಕೆಂಬ ದ್ವಂದ್ವ ನೀತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳ ಮೇಲೆ ಹಾಕುತ್ತಿರುವ ಒತ್ತಡ ಶಾಲೆಗಳನ್ನೀಗ ಗೊಂದಲದಲ್ಲಿ ಸಿಲುಕಿಸಿದೆ.

PVT schools forced to display fees structure

ಆದೇಶ ಹೊರಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಯಾ ರೀತಿ ಶುಲ್ಕ ವಿಧಿಸಬೇಕು? ಎಷ್ಟು ವಿಧಿಸಬೇಕು? ಇದಕ್ಕೆ ಮಾನದಂಡಗಳೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತ್ರ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಶುಲ್ಕ ನಿಗದಿಪಡಿಸಿ ವಿಧಿಸಬಹುದಾದ ಶುಲ್ಕದ ಮೊತ್ತವನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಒತ್ತಡ ಹೇರುತ್ತಿದ್ದಾರೆ.

ಮನಸೋ ಇಚ್ಛೆ ಪ್ರತಿ ವರ್ಷಕ್ಕೆ ಒಂದು ಮಗುವಿಗೆ 500ರೂ.ಗಳಿಂದ 11 ಸಾವಿರ ರೂ.ವರೆಗೆ ಶುಲ್ಕ ನಿಗದಿ ಮಾಡುತ್ತಿದ್ದಾರೆ. ಇದಉ ಗೊಂದಲಕ್ಕೆ ಕಾರಣವಾಗಿದೆ.

ಹಾಗಾದರೆ ಸುತ್ತೋಲೆಯಲ್ಲೇನಿದೆ?: ಮಾನ್ಯತೆ ಹೊಂದಿರುವ ಖಾಸಗಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಸೂಲಿ ಮಾಡಬಹುದಾದ ಶುಲ್ಕವನ್ನು ಶಾಲೆಯ ಸೂಚನಾ ಫಲಕಗಳಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೂ ಮೊದಲೇ ಕಡ್ಡಾಯವಾಗಿ ಪ್ರಕಟಿಸಬೇಕು.

2018-19ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಸಿಬಿಎಸ್ ಇ ಮತ್ತು ಐಸಿಎಸ್ ಇ ಶಾಲೆಗಳು ಪಡೆಯುವ ಶುಲ್ಕದ ವಿವರವನ್ನು ಏ.-15ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

English summary
Private schools in the state have been forced to display the fees structure in the schools even before the new rule was implemented due to model code of conduct during state assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X