ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮುಂದುವರೆಯಲಿದೆ ಮಳೆ ಅಬ್ಬರ, ಜನತೆ ತತ್ತರ

|
Google Oneindia Kannada News

ಬೆಂಗಳೂರು ಮೇ 7: ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನಲ್ಲಿ ಕಳೆದ ವಾರದಿಂದ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ ಎಂದರೆ ತಪ್ಪಾಗಲಾರದು, ಏಕೆಂದರೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಗರದ ಹಲವು ಬಡಾವಣೆಗಳಲ್ಲಿ ಶುಕ್ರವಾರ ಧಾರಾಕಾರವಾಗಿ ಮಳೆಯಾಗಿದ್ದು, ಭಾನುವಾರ ಕೂಡ ಮಳೆಯಾಗಲಿದೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಇದರಿಂದ ಮನೆಯಲ್ಲಿದ್ದ ನೀರನ್ನು ಹೊರಹಾಕುವಲ್ಲಿ ನಿವಾಸಿಗಳ ಪಾಡು
ಹೇಳತೀರಲಾಗಿದೆ.

ಸಂಜೆ 4.30ಕ್ಕೆ ಆರಂಭವಾದ ಮಳೆ ಮುಕ್ಕಾಲು ಗಂಟೆ ಸುರಿಯಿತು. ರಸ್ತೆಗಳ ಮೇಲೆ 2-3 ಅಡಿ ನೀರು ನಿಂತು ಹಲವು ವಾಹನಗಳು ಕೆಟ್ಟುನಿಂತವು. ಹೊಸಕೆರೆಹಳ್ಳಿ ರಸ್ತೆಯ ಪಿಇಎಸ್ ಕಾಲೇಜಿನ ಸಮೀಪದಲ್ಲಿ ಬಿಎಂಟಿಸಿ ಬಸ್‌ ಮೇಲೆ ಮರಬಿದ್ದಿದ್ದು, ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ. ಪ್ರಮುಖ ರಸ್ತೆಗಳಲ್ಲಿರುವ ಮರಗಳ ಮೇಲೆ ಕಂಬಗಳು ಬಿದ್ದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Bengaluru put on Yellow alert as More rain expected: IMD

ಶುಕ್ರವಾರ ಸುರಿದ ಮಳೆಗೆ ರಸ್ತೆಗಳು, ಹಲವು ಬಡಾವಣೆಗಳು ಜಲಾವೃತ್ತಗೊಂಡಿದ್ದು, ರಭಸದ ಗಾಳಿಗೆ ಮರಗಳು ಧರೆಗುಳಿದಿವೆ. ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದರಿಂದ ನಗರದ ಹಲವು ಬಡಾವಣೆಗಳಲ್ಲಿ ನಿವಾಸಿಗಳು ಪರದಾಡಿದರು. 50ಕ್ಕೂ ಹೆಚ್ಚು ಮ್ಯಾನ್ ಹೋಲ್ ಗಳು ಉಕ್ಕಿ ಹರಿದಿದ್ದು, ಇಂದಿರಾನಗರ, ಉತ್ತರಹಳ್ಳಿ ಸೇರಿ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ ಎಂದು ಬಿಬಿಎಂಪಿ ತಿಳಿಸಿದೆ.

Bengaluru put on Yellow alert as More rain expected: IMD

ಯೆಲ್ಲೂ ಆಲರ್ಟ್:

ಚಂಡಮಾರುತವಾಗಿ ಪರಿವರ್ತನೆ ಆಗಲಿದ್ದು, ಮೇ 8 ಭಾನುವಾರ ಮಧ್ಯಾಹ್ನ ವೇಳೆಗೆ ಇನ್ನಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೂ ಅಲರ್ಟ್ ಘೋಷಿಸಿದೆ. ಶುಕ್ರವಾರ ಎಲ್ಲಿ ಎಷ್ಟು ಮಿ.ಮೀ ಮಳೆ: ಎಚ್.ಎಎಲ್ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು 70 ಮಿ.ಮೀ ಮಳೆಯಾಗಿದೆ. ಕೆಂಗೇರಿ 49 ಮಿ.ಮೀ, ಆರ್.ಆರ್.ನಗರ 33 ಮಿ.ಮೀ, ಬಸವನಗುಡಿ 32 ಮಿ.ಮೀ, ವಿದ್ಯಾಪೀಠ 32 ಮಿ.ಮೀ, ಬಾಗಲೂರಿನಲ್ಲಿ 30 ಮಿ.ಮೀ, ನಾಗರಬಾವಿಯಲ್ಲಿ 28 ಮಿ.ಮೀ ಮಳೆಯಾಗಿದೆ.

Recommended Video

Dinesh Karthik ಆಟ ನೋಡಿ RCB ಆಟಗಾರರು ಮಾಡಿದ್ದೇನು | Virat Kohli bows down to DK | Oneindia Kannada

English summary
Bengaluru Rain: IMD forecasts light showers in Bengaluru on Sunday. Many areas put on Yellow Alert, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X