ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಕಾಶ್ ಕಂಬತ್ತಳ್ಳಿಗೆ ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆಯ 'ಪುಸ್ತಕ ಸಂಸ್ಕೃತಿ' ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಮೇ 14: ಅಂಕಿತ ಪುಸ್ತಕದ ಮಾಲೀಕರಾದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆಯು ನೀಡುವ 'ಪುಸ್ತಕ ಸಂಸ್ಕೃತಿ' ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯ ಪ್ರದಾನ ಸಮಾರಂಭವು ಮೇ ಹದಿನೈದನೇ ತಾರೀಕಿನ ಬುಧವಾರದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ ನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ನಡೆಯಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪ್ರಕಾಶ್ ಕಂಬತ್ತಳ್ಳಿ ಅವರು ಈ ಗೌರವಕ್ಕೆ ಪಾತ್ರರಾಗಿರುವ ಬಗ್ಗೆ ಲೇಖಕ- ಪತ್ರಕರ್ತ ಜೋಗಿ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. "750ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆ ನೀಡುವ ಪುಸ್ತಕ ಸಂಸ್ಕೃತಿ ಪ್ರಶಸ್ತಿ ಬಂದಿದೆ. ನಾಳೆ, ಮೇ 15ರ ಬುಧವಾರ ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರದಾನ.

Pustaka Sanskruti award for Ankita Pustakas Prakash Kambattalli

"ಅವರು ಪ್ರಕಟಿಸಿದ ಪುಸ್ತಕಗಳಿಗೆ, ಅದರ ಲೇಖಕರಿಗೆ ಅದೆಷ್ಟೋ ಪ್ರಶಸ್ತಿ ಸಂದಿರಬಹುದು. ಆದರೆ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರುವ ಪ್ರಕಾಶ್ ಅವರಿಗೆ ಬಂದಿರುವ ಪ್ರಶಸ್ತಿ ಅರ್ಹ ಮನ್ನಣೆ. ಅವರಿಗೆ ಅಭಿನಂದನೆ". ಗಾಂಧೀಬಜಾರಿನಲ್ಲಿ ಇರುವ ಅಂಕಿತ ಪುಸ್ತಕದ ಮಳಿಗೆ ಹಾಗೂ ಅದರ ಪ್ರಕಾಶನ ರಾಜ್ಯದಾದ್ಯಂತ ಹೆಸರು ಪಡೆದಿದೆ. ಸದಭಿರುಚಿಯ, ಗುಣಮಟ್ಟದ ಪ್ರಕಾಶನಕ್ಕೂ ಸಂಸ್ಥೆ ಹೆಸರಾಗಿದೆ.

English summary
Ankita Pustaka's Prakash Kambaattalli got an award of Pustaka Sanskruti by Shanthaveri Gopala Gowda Vichara samsthe. Award ceremony on 15th May, 2019 in Bangalore Kannada Sahitya parishad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X