ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ರಾಜ್ ಗೋಕಾಕ್ ಚಳವಳಿ ಮೆಲುಕು ಹಾಕಿದ ಪುನೀತ್ ರಾಜ್‌ಕುಮಾರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಕರ್ನಾಟಕದ ಏಕೀಕರಣದ ರುವಾರಿ ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡ ಹೋರಾಟದ ದಿನಗಳ ಕುರಿತು ಪುತ್ರ ನಟ ಪುನೀತ್ ರಾಜ್‌ಕುಮಾರ್ ಮೆಲುಕು ಹಾಕಿದ್ದಾರೆ.

80ರ ದಶಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ರಾಜ್ಯದ ಉದ್ದಗಲಕ್ಕೂ ವರನಟ ಡಾ. ರಾಜ್‌ಕುಮಾರ್ ಸಂಚರಿಸಿ ಹಲವಾರು ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಪರಿಯನ್ನು ಪುತ್ರ ಪುನೀತ್ ಸ್ಮರಿಸಿದ್ದಾರೆ.

 ಸಂಪಿಗೆ ವೃತ್ತಕ್ಕೆ ಗೋಕಾಕ್ ಚಳವಳಿ ಸ್ಮರಣಾರ್ಥ ವೃತ್ತ ನಾಮಕರಣ ಸಂಪಿಗೆ ವೃತ್ತಕ್ಕೆ ಗೋಕಾಕ್ ಚಳವಳಿ ಸ್ಮರಣಾರ್ಥ ವೃತ್ತ ನಾಮಕರಣ

ಈ ಕುರಿತು ವಿಡಿಯೋ ತುಣುಕೊಂದನ್ನು ಬಿಡುಗಡೆಗೊಳಿಸಿರುವ ಅವರು ಡಾ.ರಾಜ್‌ಕುಮಾರ್ ಹೋರಾಟದ ದಿನಗಳು ಹಾಗೂ ಅವರು ಇತರ ನಟರು ಹಾಗೂ ಹೋರಾಟಗಾರರಿಗೆ ತುಂಬಿದ ಸ್ಫೂರ್ತಿಯನ್ನು ತಾವು ಕಣ್ಣಾರೆ ಕಂಡಿರುವುದು ತಮ್ಮ ಪುಣ್ಯಯಂದು ಬಣ್ಣಿಸಿದ್ದಾರೆ.

Puneeth Rajkumar recalls Dr.Raj in Gokak movement

ಗೋಕಾಕ್ ಚಳವಳಿಯ ಹೋರಾಟವನ್ನು ಮತ್ತೆ ನೆನಪಿಸುವ ನಿಟ್ಟಿನಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಗೋಕಾಕ್ ಚಳವಳಿ ಮಾದರಿಯ ಸಮಾರಂಭವನ್ನು ಏರ್ಪಡಿಸಿರುವ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ತಾವೂ ಕೂಡ ಪಾಲ್ಗೊಳ್ಳುತ್ತಿದ್ದು ಕನ್ನಡಿಗರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಕೇವಲ ಕರ್ನಾಟಕದಲ್ಲಿ ಹುಟ್ಟಿದವರು ಮಾತ್ರ ಕನ್ನಡಿಗರಲ್ಲ , ಕರ್ನಾಟಕದಲ್ಲಿ ನೆಲೆಸಿ ಕನ್ನಡವನ್ನು ಕಲಿತು ಇತರೆ ಭಾಷಿಕರೂ ಕೂಡ ಕನ್ನಡಿಗರಾಗಿರುವ ಕ್ರಮವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

 ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ

ಪುನೀತ್ ಅವರು ಗೋಕಾಕ್ ಚಳವಳಿ ಮಾದರಿಯ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪುನೀತ್ ಅವರನ್ನು ಮಲ್ಲೇಶ್ವರ ಶಾಸಕ ಸಿಎನ್ ಅಶ್ವತ್ಥನಾರಾಯಣ ಸ್ವಾಗತಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

English summary
Renown Kannada actor Puneeth Rajkumar has recalled his father Dr.Rajkumar's participation and how led Gokak movement in 1980's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X