• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವರತನ್ ಜ್ಯುವೆಲ್ಲರ್ಸ್ ಶೋರೂಂ ಉದ್ಘಾಟಿಸಿದ ಪುನೀತ್

By Mahesh
|

ಬೆಂಗಳೂರು, ಸೆ. 24: ಸಿಲಿಕಾನ್ ಸಿಟಿಯ ಆಭರಣ ಪ್ರಿಯರಿಗೆ ಇದೊಂದು ಸಂತಸದ ವಿಚಾರ. ಕಳೆದ ಹಲವಾರು ದಶಕಗಳಿಂದ ನಗರದ ಮನೆ ಮಾತಾಗಿರುವ ನವರತನ್ ಜ್ಯುವೆಲರ್ಸ್ ಇದೀಗ ರಾಜಾಜಿನಗರದಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ.

ಗ್ಯಾಲರಿ: ನವರತ್ನ್ ಜ್ಯುವೆಲ್ಲರ್ಸ್ ಉದ್ಘಾಟಿಸಿದ ಪುನೀತ್

ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಆಭರಣದ ಖನಿ ಎನಿಸಿರುವ ನವರತನ್ ಹಲವು ದಶಕಗಳಿಂದ ಕರ್ನಾಟಕ ಮತ್ತು ದೇಶದ ಜನರ ಮೆಚ್ಚಿನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹೊಸ ಮಳಿಗೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಟ ಮತ್ತು ನಿರ್ಮಾಪಕ ರಾಕ್‍ ಲೈನ್ ವೆಂಕಟೇಶ್ ಮತ್ತು ಮಹಾಲಕ್ಷ್ಮಿ ಲೇಔಟ್ ನ ಶಾಸಕರಾದ ಗೋಪಾಲಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಹೊಸ ಶೋರೂಂಗೆ ಯಶಸ್ಸು ಕೋರಿದರು.

ಅತ್ಯದ್ಭುತವಾದ ಫಳಫಳ ಹೊಳೆಯುವಂತಹ ಚಿನ್ನಾಭರಣಗಳನ್ನು ನಿಮ್ಮದಾಗಿಸುವ ಕನಸನ್ನು ನನಸು ಮಾಡಿಕೊಳ್ಳುವ ನಿಮ್ಮ ಬಹುದಿನದ ಬಯಕೆಯನ್ನು ಈಡೇರಿಸಲು ಈ ನವರತನ್ ಶೋರೂಂ ಸಿದ್ಧವಾಗಿದೆ.

ಹೊಸ ಅನುಭವವನ್ನು ಪಡೆಯಿರಿ

ಹೊಸ ಅನುಭವವನ್ನು ಪಡೆಯಿರಿ

ನವರತನ್ ಸ್ಟೋರ್‍ನಲ್ಲಿರುವ ಎಲ್ಲಾ ಆಭರಣಗಳು ಕರಕುಶಲತೆಯ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಶ್ರೀಮಂತವಾದ ಸಂಸ್ಕೃತಿ ಮತ್ತು ಪಾರಂಪರಿಕ ಶೈಲಿಯನ್ನು ಹೊಂದಿವೆ. ನಮ್ಮ ಉನ್ನತೀಕರಣಗೊಳಿಸಿದ ಗ್ರಾಹಕ ಸೇವೆಗಳ ಮೂಲಕ ಗ್ರಾಹಕರು ಈ ಹೊಸ ನವರತನ್ ಶೋರೂಂನಲ್ಲಿ ವ್ಯಕ್ತಿಗತವಾದ ಹೊಸ ಅನುಭವವನ್ನು ಪಡೆಯಲಿದ್ದಾರೆ.

ಡೈಮಂಡ್ ಆಭರಣಗಳು

ಡೈಮಂಡ್ ಆಭರಣಗಳು

8000 ಚದರಡಿ ವಿಸ್ತೀರ್ಣದಲ್ಲಿ ಆರಂಭವಾಗಿರುವ ಈ ಶೋರೂಂನಲ್ಲಿ ಮನಮೋಹಕ ನೆಕ್ ಪೀಸ್ ಮತ್ತು ಓಲೆಗಳು, ಅಂದಚೆಂದದ ಉಂಗುರಗಳು, ಸ್ಟೈಲಿಶ್ ಬಳೆಗಳು ಮತ್ತು ಬ್ರೇಸ್‍ಲೆಟ್‍ಗಳು, ಸಾಂಪ್ರದಾಯಿಕ ಟೆಂಪಲ್ ಚಿನ್ನದ ಆಭರಣಗಳು, ಪ್ರಮಾಣೀಕೃತ ಡೈಮಂಡ್ ಆಭರಣಗಳು ಎಲ್ಲರನ್ನೂ ಮನಮೋಹಕಗೊಳಿಸಲಿವೆ.

ವೈಯಕ್ತಿಕವಾಗಿ ಪ್ರತಿನಿಧಿಗಳು

ವೈಯಕ್ತಿಕವಾಗಿ ಪ್ರತಿನಿಧಿಗಳು

ಚಿನ್ನಾಭರಣ, ಡೈಮಂಡ್, ಪ್ಲಾಟಿನಂ ಮತ್ತು ಬೆಳ್ಳಿಯ ಆಭರಣಗಳನ್ನು ರಾಜಾಜಿನಗರದ ಈ ನವರತನ್ ಶೋರೂಂ ಹೊಂದಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತಹ ಆಭರಣಗಳನ್ನು ಪೂರೈಸಲಿದೆ.

ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನಿಗೂ ವೈಯಕ್ತಿಕವಾಗಿ ಪ್ರತಿನಿಧಿಗಳು ಅಟೆಂಡ್ ಮಾಡಲಿದ್ದು, ಗ್ರಾಹಕರು ತಮಗೊಪ್ಪುವ ಆಭರಣ ಖರೀದಿ ಪ್ರಕ್ರಿಯೆ ಮುಗಿಸುವವರೆಗೂ ತಾಳ್ಮೆ ಮತ್ತು ಬದ್ಧತೆಯಿಂದ ಸೇವೆಯನ್ನು ನೀಡಲಿದ್ದಾರೆ.

ಎಂ.ಗೌತಮ್ ಚಂದ್

ಎಂ.ಗೌತಮ್ ಚಂದ್

'ಈ ಮಳಿಗೆಯಲ್ಲಿ ಗ್ರಾಹಕರು ವಿಶ್ವಶ್ರೇಷ್ಠವಾದ ಎಲ್ಲಾ ಬಗೆಯ ವಜ್ರಾಭರಣಗಳನ್ನು ಇಲ್ಲಿ ಖರೀದಿಸಬಹುದಾಗಿದೆ. ಒಂದಕ್ಕಿಂತ ಒಂದು ಆಭರಣ ವಿಶಿಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯುವಂತಿವೆ. ಅತ್ಯುತ್ತಮವಾದ ವಿನ್ಯಾಸ, ಮಹಿಳೆಯರಿಗೆ ಒಪ್ಪುವಂತಹ ಆಕರ್ಷಣೆಯ ಆಭರಣಗಳು ಇಲ್ಲಿವೆ' ಎಂದು ನವರತನ್ ‍ನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಗೌತಮ್ ಚಂದ್ ತಿಳಿಸಿದರು.

ಹೊಸ ಶೋರೂಂ ವಿಳಾಸ

ಹೊಸ ಶೋರೂಂ ವಿಳಾಸ

ನಂ: 120, 12 ನೇ ಅಡ್ಡರಸ್ತೆ, 2 ನೇ ಹಂತ

ವೆಸ್ಟ್ ಆಫ್ ಕಾರ್ಡ್ ರೋಡ್

ಮಹಾಲಕ್ಷ್ಮಿಪುರಂ ಅಂಚೆ

ರಾಜಾಜಿನಗರ

ಬೆಂಗಳೂರು

ಚಿತ್ರದಲ್ಲಿ ನವರತ್ನ್ ಜ್ಯುವೆಲ್ಲರ್ಸ್ ಕಡೆಯಿಂದ ಪುನೀತ್ ರಾಜ್ ಕುಮಾರ್ ದಂಪತಿಗೆ ಉಡುಗೊರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Power Star Puneeth RajKumar Inaugurated Navarathn Jewellers New Store in Rajajinagar. Actor & Producer Rockline Venkatesh, & Managing Director, Navrathan M. Gautham Chand, Managing Director, Navrathan Were Present on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more