ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.19 ರಾಜ್ಯದೆಲ್ಲೆಡೆ ಪಲ್ಸ್ ಪೋಲಿಯೋ ಕಾರ್ಯಕ್ರಮ

By Prasad
|
Google Oneindia Kannada News

ಬೆಂಗಳೂರು: ಜ, 18 : ಪಾಲಕರೆ ನೆನಪಿನಲ್ಲಿಡಿ. ನೀವು ಬಡವರಿರಲಿ ಶ್ರೀಮಂತರಿರಲಿ, ನಿಮ್ಮ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜ.19ರಂದು ಭಾನುವಾರದಂದು ತಪ್ಪದೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಿ. ಈ ಎರಡು ಅಮೃತಬಿಂದುಗಳು ಮಕ್ಕಳಿಗೆ ಅಂಗವೈಕಲ್ಯತೆ ಬರದಂತೆ ತಡೆಯಬಲ್ಲವು.

ಪ್ರಪಂಚದಿಂದ ಪೋಲಿಯೋ ನಿರ್ಮೂಲನೆ ಮಾಡುವ ಮುಖ್ಯ ಉದ್ದೇಶದಿಂದ ದೇಶದ್ಯಾಂತ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಭಾನುವಾರ ಜ. 19ರಂದು ರಾಜ್ಯದೆಲ್ಲೆಡೆ ಹಮ್ಮಿಕೊಳ್ಳಲಾಗಿದೆ. 1994ರಿಂದಲೇ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಯೋಜನೆ ಆರಂಭಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ನಗರದಲ್ಲಿ 5 ವರ್ಷದೊಳಗಿನ ಸರಿ ಸುಮಾರು 5 ಲಕ್ಷ 70 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಉದ್ದೇಶ ಹೊಂದಲಾಗಿದೆ. ಕ್ರಿಯಾ ಯೋಜನೆಯನುಸಾರ ಇದಕ್ಕಾಗಿ 1,920 ಬೂತ್‌ಗಳ ಕಾರ್ಯಚರಣೆಯ ಸ್ಥಳಗಳನ್ನು ಗುರುತಿಸಲಾಗಿದ್ದು, 8,000ಕ್ಕೂ ಅಧಿಕ ಲಸಿಕೆ ಹಾಕುವ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

Pulse Polio immunisation programme on 19th January

ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬಹುದು. ಖಾಸಗಿ ಆಸ್ಪತ್ರೆ, ಶಾಲೆ ಮತ್ತು ಕಾಲೇಜುಗಳಲ್ಲಿಯೂ ಲಸಿಕೆ ಹಾಕುವ ಸಿಬ್ಬಂದಿಗಳು ಇರುತ್ತಾರೆ. ಹಿಂದೊಮ್ಮೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿದ್ದರೂ ಈ ಬಾರಿ ಮತ್ತು ಲಸಿಕೆ ಹಾಕಿಸಬೇಕು. ಜೊತೆಗೆ ಸಿಬ್ಬಂದಿಗಳು ಮನೆಮನೆಗೂ ತೆರಳಿ ಲಸಿಕೆ ಹಾಕಲಿದ್ದಾರೆ. ಇದರ ಪ್ರಯೋಜನ ಜನರು ಪಡೆಯಬಹುದು.

384 ಜನರ ಮೇಲ್ವಿಚಾರಣೆಯಲ್ಲಿ ಈ ಲಸಿಕೆ ಹಾಕುವವರು ಕಾರ್ಯನಿರ್ವಹಿಸಲಿದ್ದು, ಇವರು ಯಾವ ಮಕ್ಕಳಿಗೂ ತಪ್ಪದಂತೆ ಲಸಿಕೆ ಹಾಕುವ ಕೆಲಸವನ್ನು ನಿರ್ವಹಿಸಲಿದ್ದಾರೆ. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ 5 ವರ್ಷದ ಎಲ್ಲಾ ಮಕ್ಕಳಿಗೆ ಈ ಬಾರಿಯೂ ಪೋಲಿಯೋ ಲಸಿಕೆ ಹಾಕಿಸಲು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ವಾರ್ತಾ, ಮೂಲಭೂತ ಸೌಕರ್ಯಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರುಗಳು ಜನವರಿ 19ರಂದು ಬೆಳಿಗ್ಗೆ 8 ಗಂಟೆಗೆ ಶಿವಾಜಿನಗರದ ಗೌಸಿಯಾ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

English summary
Pulse Polio immunisation programme is organized by Karnataka govt on 19th January, Sunday. All the parents should take their kid below 5 years age to nearest health centre. Vaccinating all children under the age of five years is must.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X