ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Police shoot out :ಹುಡುಗಿ ಜತೆ ಸಿನಿಮಾಗೆ ಹೋದವ ಕೊಲೆ: ಇಬ್ಬರ ಕಾಲಿಗೆ ಗುಂಡೇಟು

|
Google Oneindia Kannada News

ಬೆಂಗಳೂರು, ಮಾ. 09: ಅವನು ತನ್ನ ಹುಡುಗಿ ಜತೆ ಸಿನಿಮಾಗೆ ಹೋಗಿದ್ದ. ಇಬ್ಬರೂ ಜತೆಯಲ್ಲಿ ಕೂತು ಸಿನಿಮಾ ನೋಡಿ ವಾಪಸು ಮನೆಗೆ ತೆರಳಿದ್ದರು. ಹುಡುಗಿಯನ್ನು ಬಿಟ್ಟು ಮನೆಗೆ ಹೋಗುವಷ್ಟರಲ್ಲಿ ಆತನನ್ನು ಮೂವರು ಹುಡುಗರು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಎಸ್ಕೇಪ್ ಆಗಿದ್ದವರನ್ನು ಹುಡುಕಾಡಿ ಪೊಲೀಸರು ಬೆಳಗಿನ ಜಾವ ಗುಂಡು ಹಾರಿಸಿ ಕೈಗೆ ಕೋಳ ತೊಡಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದಿರುವ ಪೊಲೀಸ್ ಶೂಟೌಟ್ ಅಸಲಿ ಸ್ಟೋರಿಯಿದು.

ಅವನು ಇನ್ನೂ ಚಿಗುರು ಮೀಸೆ ಹುಡಗ. ಹೆಸರು ಮಹಮದ್ ಉಸ್ಮಾನ್. ಕೆಜಿನಗರದಲ್ಲಿ ವಾಸವಾಗಿದ್ದ. ನಿನ್ನೆ ತನ್ನ ಗೆಳತಿಯ ಜತೆ ಮಹಮದ್ ಉಸ್ಮಾನ್ ಸಿನಿಮಾಗೆ ಹೋಗಿದ್ದ. ವಾಪಸು ಹುಡುಗಿಯನ್ನು ಕರೆತಂದು ಮನೆಗೆ ಬಿಟ್ಟಿದ್ದ. ಆ ಬಳಿಕ ಕೆ.ಜಿ. ನಗರದಲ್ಲಿರುವ ಮನೆಗೆ ಹೋಗುವಾಗ ಪರಿಚಿತ ಮೋಹಿನ್ ಅಡ್ಡಗಟ್ಟಿ ಕಿರಿಕ್ ಮಾಡಿದ್ದಾನೆ. ಹುಡುಗಿಯ ಜತೆ ಸಿನಿಮಾಗೆ ಹೋಗಿದ ವಿಚಾರವಾಗಿ ಇಬ್ಬರು ಜಗಳ ಮಾಡಿಕೊಂಡಿದ್ದಾರೆ.

ಇಬ್ಬರು ಕಾದಾಡುವಾಗ ನಾಲ್ವರು ಯುವಕರು ಎಂಟ್ರಿಕೊಟ್ಟಿದ್ದಾರೆ. ಮೊದಲೇ ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದ ಮೋಹಿನ್‌ಗೆ ಈ ನಾಲ್ಕು ಹುಡುಗರು ಸಾತ್ ಕೊಟ್ಟಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಮಹಮದ್ ಉಸ್ಮಾನ್ ನನ್ನು ಕೊಲೆ ಮಾಡಿದ್ದಾರೆ.

Pulikeshi Nagar Police Shoot Out on Murder Accuses in Baiyappanahalli

ಉಸ್ಮಾನ್ ಕೊಲೆಯಾದ ಬಳಿಕ ಐವರು ಆರೋಪಿಗಳು ಎಸ್ಕೇಪ್ ಆಗಿದ್ದರು. ಉಸ್ಮಾನ್ ಕೊಲೆ ಬಗ್ಗೆ ಪುಲಿಕೇಶಿನಗರ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕುತ್ತಿದ್ದರು. ಬೈಯಪ್ಪನಹಳ್ಳಿ ಬಳಿ ಇಬ್ಬರು ಆರೋಪಿಗಳು ಇರುವ ಬಗ್ಗೆ ಪೊಲೀಸರಿಗೆ ರಾತ್ರೋ ರಾತ್ರಿ ಮಾಹಿತಿ ಸಿಕ್ಕಿದೆ. ಬೆಳಗಿನ ಜಾವ ಪಿಎಸ್ಐ ಆನಂದ್ ಮತ್ತು ರುಮಾನ್ ನೇತೃತ್ವದ ತಂಡ ಬಂಧಿಸಲು ಹೋದಾಗ, ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪಿಎಸ್ಐ ರುಮಾನ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೂ ಬಗ್ಗದೇ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೊಲೀಸರು ಇಬ್ಬರು ಆರೋಪಿಗಳಿಗೆ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.

Pulikeshi Nagar Police Shoot Out on Murder Accuses in Baiyappanahalli

ಸಯ್ಯದ್ ಮೊಹಿನ್ ಮತ್ತು ಅದ್ನಾನ್ ಖಾನ್ ಕಾಲುಗಳಿಗೆ ಗುಂಡೇಟು ಬಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬುಧವಾರ ಬೆಳಗಿನ ಜಾವ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ನೀಡಿದ ಮಾಹಿತಿ ಮೇರೆಗೆ ಉಸ್ಮಾನ್‌ನನ್ನು ಕೊಚ್ಚಿ ಕೊಲೆ ಮಾಡಿದ್ದ ಇತರೆ ಮೂವರು ಆರೋಪಿಗಳಾದ ಅರ್ಬಾಜ್, ಮಜರ್, ಸೈಯದ್ ಸಾಕಿಬ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಹುಡುಗಿ ವಿಚಾರವಾಗಿ ವ್ಯಕ್ತಿಯನ್ನು ಕೊಲೆ ಮಾಡಿದ ಒಂದೇ ದಿನದಲ್ಲಿ ಐವರು ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ

Recommended Video

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಏನ್ ಹೇಳುತ್ತೆ?? | Oneindia Kannada

English summary
Bengaluru: Pulikeshi Nagar Police Open fire on 2 Murder Accuses in Baiyappanahalli. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X