ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣಾ ಉಗಮ ಸ್ಥಾನದಲ್ಲಿ ಎಂಬಿ ಪಾಟೀಲ ಪೂಜೆ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಜೂನ್ 3: ಎಲ್ಲ ಆಕ್ಷೇಪ, ವಿಮರ್ಶೆ, ಟೀಕೆಗಳ ಮಧ್ಯೆಯೂ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ಕೃಷ್ಣಾ ನದಿ ಉಗಮ ಸ್ಥಾನವಿರುವ ಮಹಾಬಲೇಶ್ವರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮೊದಲಿಗೆ ಇಲ್ಲಿ ಪೂಜೆ ಸಲ್ಲಿಸುವುದಕ್ಕಾಗಿಯೇ ಹತ್ತು ಲಕ್ಷ ರುಪಾಯಿ ಹಣವನ್ನು ನೀರಾವರಿ ಇಲಾಖೆಯಿಂದ ಮೀಸಲಿಡಲು ನಿರ್ಧರಿಸಲಾಗಿತ್ತು.

ಕಾವೇರಿ ಉಗಮ ಸ್ಥಾನವಾದ ಭಾಗಮಂಡಲ ಹಾಗೂ ಕೃಷ್ಣಾ ಉಗಮ ಸ್ಥಾನಗಳಲ್ಲಿ ಪೂಜೆ ಸಲ್ಲಿಸುವುದಕ್ಕೆ ಹಾಗೂ ಪರ್ಜನ್ಯ ಜಪಕ್ಕಾಗಿ ತಲಾ ಹತ್ತು ಲಕ್ಷ ರುಪಾಯಿಯಂತೆ ಮೀಸಲಾಗಿ ಇಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಬೇಕು ಎಂದಿದ್ದ ಈ ಕಾರ್ಯಕ್ರಮದ ಬಗ್ಗೆಯೇ ಅಪಸ್ವರ ಎದ್ದಿತ್ತು.[ಕೃಷ್ಣಾ-ಕಾವೇರಿ ಪೂಜೆ ಖರ್ಚು- ವೆಚ್ಚದ ಬಗ್ಗೆ ಎಂಬಿ ಪಾಟೀಲ್ ಸ್ಪಷ್ಟನೆ]

Puja performed by minister MB Patil at Krishna river on Friday

ಇಷ್ಟು ಹಣವನ್ನು ಸರಕಾರ ಏಕೆ ಖರ್ಚು ಮಾಡಬೇಕು ಎಂದು ಚರ್ಚೆ ಹುಟ್ಟುಹಾಕಿತ್ತು. ಅಂತಿಮವಾಗಿ ತಾವು ಹಾಗೂ ತಮ್ಮ ಸ್ನೇಹಿತರ ಹಣವನ್ನು ಹಾಕಿ ಸಚಿವರಾದ ಎಂಬಿ ಪಾಟೀಲ್ ಶುಕ್ರವಾರ ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲೊಂದು ಫೋಟೋ ಹಾಕಿ, ವಿಮರ್ಶೆಗೆ ಸ್ವಾಗತ ಎಂದು ಕೂಡ ಅವರು ಹೇಳಿದ್ದಾರೆ.

English summary
Karnataka water resource minister MB Patil performed puja at Krishna river on Friday, prayer for good rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X