• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ

|

ಬೆಂಗಳೂರು, ಅ, 27 : 2014ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಒಟ್ಟು 22 ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಎಲ್ಲ 2ನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿದ 22 ರಜಾ ದಿನಗಳು ದೊರೆಯಲಿವೆ. ಆದರೆ, ಮೂರು ಸರ್ಕಾರಿ ರಜೆ ಭಾನುವಾರ ಬಂದಿರುವುದರಿಂದ ನೌಕರರಿಗೆ ನಿರಾಸೆಯಾಗಿದೆ.

ಜ.14- ಈದ್‌ ಮಿಲಾದ್‌, ಜ.15- ಸಂಕ್ರಾಂತಿ, ಫೆ.27- ಶಿವರಾತ್ರಿ, ಮಾ.31- ಯುಗಾದಿ, ಏ.14- ಅಂಬೇಡ್ಕರ್‌ ಜಯಂತಿ, ಏ.18- ಗುಡ್‌ ಫ್ರೈಡೆ, ಮೇ 1- ಕಾರ್ಮಿಕ ದಿನಾಚರಣೆ, ಮೇ 2- ಬಸವ ಜಯಂತಿ, ಜು.29- ರಂಜಾನ್‌, ಆ.15- ಸ್ವಾತಂತ್ರ್ಯ ದಿನಾಚರಣೆ, ಆ.29- ಗಣೇಶ ಚೌತುರ್ಥಿ, ಸೆ.24- ಮಹಾಲಯ ಅಮವಾಸ್ಯೆ, ಅ.2- ಗಾಂಧಿ ಜಯಂತಿ, ಅ.3- ಆಯುಧ ಪೂಜೆ, ಅ.4- ವಿಜಯ ದಶಮಿ, ಅ.8- ವಾಲ್ಮೀಕಿ ಜಯಂತಿ, ಅ.22- ನರಕ ಚತುರ್ದಶಿ, ಅ.24- ದೀಪಾವಳಿ, ನ.1- ರಾಜ್ಯೋತ್ಸವ, ನ.4- ಮೊಹರಂ, ನ.8- ಕನಕದಾಸ ಜಯಂತಿ, ಡಿ.25- ಕ್ರಿಸ್‌ಮಸ್‌ ರಜಾದಿನಗಳಾಗಿವೆ.

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ 26-01-2014 ಗಣರಾಜ್ಯೋತ್ಸವ, 13-04-2014 ಮಹಾವೀರ ಜಯಂತಿ, ಮತ್ತು 05-10-2014ರ ಬಕ್ರೀದ್, ರಜಾ ದಿನಗಳನ್ನೊಳಗೊಂಡಿರುವುದಿಲ್ಲ. ಆದ್ದರಿಂದ ಈ ಬಾರಿ ಸರ್ಕಾರಿ ನೌಕರರಿಗೆ ಮೂರು ರಜೆಗಳು ನಷ್ಟವಾಗಿವೆ.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ದಿನಾಂಕ:18-10-2014 ಶನಿವಾರ ತುಲಾ ಸಂಕ್ರಮಣ ಆಚರಿಸಲು ಮತ್ತು ದಿನಾಂಕ:07-12-2014 ಭಾನುವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2014ರ ರಜಾಪಟ್ಟಿ ಹೀಗಿದೆ
ಕ್ರ. ಸಂ ದಿನಾಂಕ ವಾರ ಸಾರ್ವತ್ರಿಕ ರಜಾ
1 14-01-2014 ಮಂಗಳವಾರ
ಈದ್ ಮಿಲಾದ್ 2 15-01-2014 ಬುಧವಾರ ಸಂಕ್ರಾತಿ ಹಬ್ಬ
3 27-02-2014 ಗುರುವಾರ ಮಹಾಶಿವರಾತ್ರಿ 4 31-03-2014 ಸೋಮವಾರ ಚಂದ್ರಮಾನ ಯುಗಾದಿ 5 14-04-2014 ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ 6 18-04-2014 ಶುಕ್ರವಾರ ಗುಡ್ ಫ್ರೈಡೆ 7 01-05-2014 ಗುರುವಾರ ಕಾರ್ಮಿಕ ದಿನಾಚರಣೆ 8 02-05-2014 ಶುಕ್ರವಾರ ಬಸವಜಯಂತಿ 9 29-07-2014 ಮಂಗಳವಾರ ಖುತುಬ್-ಎ-ರಂಜಾನ್ 10 15-08-2014 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ 11 29-08-2014 ಶುಕ್ರವಾರ ವರಸಿದ್ಧಿ ವಿನಾಯಕ ವ್ರತ 12 24-09-2014 ಬುಧವಾರ ಮಹಾಲಯ ಅಮವಾಸ್ಯೆ 13 02-10-2014 ಗುರುವಾರ ಗಾಂಧೀ ಜಯಂತಿ 14 03-10-2014 ಶುಕ್ರವಾರ ಮಹಾನವಮಿ ಆಯುಧಪೂಜೆ 15 04-10-2014 ಶನಿವಾರ ವಿಜಯ ದಶಮಿ 16 08-10-2014 ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ 17 22-10-2013 ಬುಧವಾರ ನರಕ ಚತುರ್ದಶಿ 18 24-10-2014 ಶುಕ್ರವಾರ ದೀಪಾವಳಿ 19 01-11-2014 ಶನಿವಾರ ಕನ್ನಡ ರಾಜ್ಯೋತ್ಸವ 20 04-11-2014 ಮಂಗಳವಾರ ಮೊಹರಂ ಕಡೇ ದಿನ 21 08-11-2014 ಶನಿವಾರ ಕನಕದಾಸ ಜಯಂತಿ 22 25-12-2014
ಗುರುವಾರ ಕ್ರಿಸ್‌ಮಸ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
List of public holidays declared by Karnataka government for the year 2014. Karnataka govt has also declared list of restricted holidays. government employees get 22 holidays in year 2014. Have a fantastic year ahead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more