ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನ ಟೋಯಿಂಗ್ ವಿಚಾರವಾಗಿ ಜಟಾಪಟಿ

|
Google Oneindia Kannada News

ಬೆಂಗಳೂರು, ಜು.31: ನೋ ಪಾರ್ಕಿಂಗ್ ಫಲಕ ಇಲ್ಲದ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡಿದ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಜಟಾಪಟಿ ನಡೆದಿದೆ. ಹಲ್ಲೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಯಲಹಂಕ ನ್ಯೂಟೌನ್ ಸಮೀಪ ಸುತ್ತಾಡಿದ್ದ ಸಂಚಾರ ಪೊಲೀಸರಿದ್ದ ಟೋಯಿಂಗ್ ವಾಹನ ನೋ ಪಾರ್ಕಿಂಗ್ ನಾಮ ಫಲಕ ಇಲ್ಲದ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದರು. ಇದನ್ನು ಸಾರ್ವಜನಿಕರು ಪ್ರಶ್ನಿಸಿದ್ದರು. ನೋ ಫಾರ್ಕಿಂಗ್ ಫಲಕ ವಿಲ್ಲದ ಜಾಗದಲ್ಲಿ ವಾಹನ ಎತ್ತದಂತೆ ಸಾರ್ವಜನಿಕರು ತಿಳಿಸಿದ್ದರು.

ಸಾರ್ವಜನಿಕರ ಮಾತಿನ ಬಗ್ಗೆ ತಲೆ ಕೆಡೆಸಿಕೊಳ್ಳದ ಟೈಗರ್ ವಾಹನ ಸಿಬ್ಬಂದಿ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡಿದ್ದರು. ಈ ವಿಚಾರವಾಗಿ ಸಾರ್ವಜನಿಕರ ಹಾಗೂ ಟೋಯಿಂಗ್ ಸಿಬ್ಬಂದಿ ನಡುವೆ ವಾಗ್ವಾದ ತಿರುಗಿ ವಿಕೋಪಕ್ಕೆ ತಿರುಗಿದೆ. ಆಕ್ರೋಶ ಗೊಂಡ ಸಾರ್ವಜನಿಕರಿಬ್ಬರು ಟೋಯಿಂಗ್ ವಾಹನ ಮೇಲೇರಿ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಬಾಗಲೂರಿನ ನಿವಾಸಿ ಸಿವಿಲ್ ಇಂಜಿನಿಯರ್ ವಿಜಯ್ ಕುಮಾರ್ ಟೋಯಿಂಗ್ ವಾಹನ ಕೀ ಕಸಿದುಕೊಂಡಿದ್ದಾರೆ. ಕೊಡಿಗೇನಹಳ್ಳಿ ನಿವಾಸಿ ರಾಜೇಶ್ ಟೋಯಿಂಗ್ ವಾಹನ ಹತ್ತಿ ಹೆಲ್ಮೆಟ್ ನಿಂದ ಸಿಬ್ಬಂಧಿಗೆ ಹಲ್ಲೆ ಮಾಡಿದ್ದಾರೆ.

Bengaluru: Public Attack with Helmet on Towing Staff in Yelahanka New Town; Video Goes Viral

ನಾಮ ಫಲಕವಿಲ್ಲದ ಜಾಗದಲ್ಲಿ ಪೊಲೀಸರು ವಾಹನ ಟೋಯಿಂಗ್ ಮಾಡಿದ ಬಗ್ಗೆ ಸಾರ್ವಜನಿಕರಿಗೆ ಸಮುಜಾಯಿಷಿ ನಿಡಬೇಕಿತ್ತು. ಸಿಕ್ಕ ಸಿಕ್ಕಲ್ಲಿ ವಾಹನ ಟೋಯಿಂಗ್ ಮಾಡುತ್ತಾರೆ. ಕಾನೂನು ಕೇಳಿದರೆ ರಶೀದಿ ಹರಿಯುತ್ತಾರೆ. ತಪ್ಪಾಯ್ತ ಅಂದವರ ಬಳಿ ಟೋಯಿಂಗ್ ಖರ್ಚು ಎಂದೇಳಿ ಐದನೂರು ರೂಪಾಯಿ ವಸೂಲಿ ಮಾಡುತ್ತಾರೆ. ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡದೇ ನಿಲ್ಲಿಸಿದ ಕಡೆಯಲ್ಲಿ ತೆಗೆದುಕೊಂಡು ಹೋಗಿ ದಂಡ ಕಟ್ಟಿ ಅನ್ನುವ ಪರಿಪಾಠ ಯಲಹಂಕದಲ್ಲಿ ಜಾಸ್ತಿಯಾಗಿದೆ ಎಂದು ಯಲಹಂಕ ನ್ಯೂಟೌನ್ ನಿವಾಸಿ ಅನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇಬ್ಬರ ಬಂಧನ:

Recommended Video

ಡಿ ಕೆ ಶಿವಕುಮಾರ್ ಎದುರೇ ಕಾರ್ಯಕರ್ತರ ಕಿತ್ತಾಟ | Oneindia kannada

ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಯಕಹಂಕ ನ್ಯೂಟೌನ್ ಪೊಲೀಸರು ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಹಲ್ಲೆ ಮಾಡಿದ ಇಬ್ಬರನ್ನು ಬಂಧಿಸಿಸಲಾಗಿದ ಎಂದು ಯಲಹಂಕ ನ್ಯೂಟೌನ್ ಪೊಲೀಸರು ತಿಳಿಸಿದ್ದಾರೆ. ಬಾಗಲೂರಿನ ನಿವಾಸಿ ಸಿವಿಲ್ ಇಂಜಿನಿಯರ್ ವಿಜಯ ಕುಮಾರ್ ಹಾಗೂ ಕೊಡಿಗೇನಹಳ್ಳಿ ನಿವಾಸಿ ರಾಜೇಶ್ ಬಂಧಿತ ಆರೋಪಿಗಳು. ಟೈಗರ್ ವಾಹನದ ಕೀ ಕಸಿದುಕೊಂಡು ವಿಜಯ್ ಕುಮಾರ್ ತೊಂದರೆ ನೀಡಿದ್ದರು. ಕೊಡಿಗೇನಹಳ್ಳಿ ನಿವಾಸಿ ರಾಜೇಶ್ ಹೆಲ್ಮೆಟ್ ನಿಂದ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ.

English summary
Clash between public and twoing staff on towing vehicles which are not in no parking place, public attack with helmet on towing staff in Yelahanka New Town; Video Goes Viral on Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X