ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬಾರ್ 1 ಗಂಟೆವರಗೆ ಓಪನ್!

|
Google Oneindia Kannada News

ಬೆಂಗಳೂರು, ಮಾ.1 : ದೇಶದ ಪಬ್ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ರಾತ್ರಿ ಅವಧಿ ಇನ್ನು ಹೆಚ್ಚಾಗಲಿದೆ. ಉದ್ಯಾನ ನಗರಿಯಲ್ಲಿ ಮಧ್ಯರಾತ್ರಿ 1 ಗಂಟೆಯ ವರೆಗೆ ಪಬ್, ಬಾರ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಸದ್ಯ ಶನಿವಾರ ಮತ್ತು ಭಾನುವಾರ ಮಾತ್ರ ಈ ಸೇವೆ ಲಭ್ಯವಿರುತ್ತದೆ.

ಸರ್ಕಾರ ಈ ನಿರ್ಧಾರದ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಕೆಜೆ ಜಾರ್ಜ್, ಕಾರ್ಪೋರೆಟ್ ಸಂಸ್ಥೆಗಳ ಬಹುದಿನಗಳ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾತ್ರಿ ಒಪ್ಪಿಗೆ ನೀಡಿದ್ದು, ಮೊದಲ ಹಂತದಲ್ಲಿ ಶುಕ್ರವಾರ ಮತ್ತು ಶನಿವಾರ ಮಾತ್ರ ಮಧ್ಯರಾತ್ರಿ 1 ಗಂಟೆಯ ವರೆಗೆ ಹೊಟೇಲ್, ಪಬ್, ಬಾರ್, ರೆಸ್ಟೋರೆಂಟ್‌ಗಳನ್ನು ತೆರೆದಿರಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

bar and restaurant

ಮೂರು ತಿಂಗಳ ತನಕ ಪ್ರಾಯೋಗಿಕವಾಗಿ ಈ ಸೇವೆ ಲಭ್ಯವಿರುತ್ತದೆ. ಈ ಹಂತದಲ್ಲಿ ಪರಿಣಾಮಗಳನ್ನು ಪರಿಶೀಲಿಸಿದ ನಂತರ ವಾರದ ಏಳು ದಿನವೂ ತಡರಾತ್ರಿವರೆಗೆ ಸೇವೆಯನ್ನು ವಿಸ್ತರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ. ನಗರ ವ್ಯಾಪ್ತಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳು ರಾತ್ರಿ 1 ಗಂಟೆವರೆಗೂ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಬಿ ಪ್ಯಾಕ್ ಸ್ವಯಂ ಸೇವಾ ಸಂಸ್ಥೆ ಸಿಎಂಗೆ ವರದಿ ನೀಡಿದ್ದನ್ನು ಇಲ್ಲಿ ನೆನೆಪುಮಾಡಿಕೊಳ್ಳಬಹುದಾಗಿದೆ. [ಬೆಂಗಳೂರಿನ ರಾತ್ರಿ 'ಬಾರ್' ಅವಧಿ ಹೆಚ್ಚಾಗಲಿದೆ]

ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಗಲಭೆಯ ಪರಿಣಾಮ ಎಲ್ಲಾ ಹೋಟೆಲ್, ಬಾರ್, ಪಬ್ ಗಳನ್ನು ರಾತ್ರಿ 11 ಗಂಟೆಗೆ ಮಚ್ಚಬೇಕು ಎಂದು ಆದೇಶ ನೀಡಲಾಗಿತ್ತು. ಜೆ.ಎಚ್.ಪಟೇಲ್ ಅವರ ಸರ್ಕಾರ ಈ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸಿತ್ತು.[ಬಾರ್ ಗಳಿಗೆ ಬಂತು ವಸ್ತ್ರ ಸಂಹಿತೆ]

ಕಾಸ್ಮೋಪಾಲಿಟನ್ ಸಂಸ್ಕೃತಿ ಹೊಂದುವ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ಯಾನ ನಗರಿಯಲ್ಲಿ ರಾತ್ರಿ 1 ಗಂಟೆವರೆಗೆ ಹೋಟೆಲ್, ಬಾರ್, ಪಬ್ ಗಳನ್ನು ತೆರೆದಿರುವ ಪ್ರಸ್ತಾವನೆ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಕೇಳಿಬಂದಿತ್ತು. ಸದ್ಯ ಪ್ರಾಯೋಗಿಕವಾಗಿ ಈ ಸೇವೆಗೆ ಸರ್ಕಾರ ಅಸ್ತು ಎಂದಿದೆ. [ಎಷ್ಟು ಹೊತ್ತಿನ ವರೆಗೆ ಪಬ್ ತೆರೆದಿರಬೇಕು]

English summary
The Bangalore city may stop going to bed early. The state government agreed for extending the 11pm deadline for bar and restaurant timings to 1am. For Three months it will applicable for Saturday and Sundays said, home minister KJ George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X