ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಲೋಪದೋಷ: ವಿದ್ಯಾರ್ಥಿಗಳಿಗೆ ಕೃಪಾಂಕ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಪ್ರಸ್ತುತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಂಗ್ಲ ಮತ್ತು ಭೌತಶಾಸ್ತ್ರ ಪ್ರಸ್ನೆ ಪತ್ರಿಕೆಯಲ್ಲಿ ಲೋಪದೋಷಗಳಿದ್ದ ಕಾರಣ ಈ ಪ್ರಶ್ನೆಗಳಿಗೆ ಕೃಪಾಂಕ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಆಂಗ್ಲ ಭಾಷೆಯಲ್ಲಿ 2 ಮತ್ತು ಭೌತಶಾಸ್ತ್ರ ವಿಷಯಕ್ಕೆ 6 ಒಟ್ಟಾರೆ 8 ಕೃಪಾಂಕ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಆಂಗ್ಲ ಭಾಷೆಯಲ್ಲಿ ಕೇಳಲಾಗಿರುವ ಕಡ್ಡಾಯ ಪ್ರಶ್ನೆಗೆ 2, ಭೌತಶಾಸ್ತ್ರ ಎಲ್ಲ ವಿದ್ಯಾರ್ಥಿಗಳಿಗೂ ಒಂದು ಕೃಪಾಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳು ಐಚ್ಛಿಕ ಪ್ರಶ್ನೆಗಳಿಗೆ ಉತ್ತರಿಸಿದ್ದರೆ ಮಾತ್ರ ಉಳಿದ ಐದು ಕೃಪಾಂಕ ಸಿಗಲಿದೆ.

ಏಪ್ರಿಲ್ ಕೊನೆಯ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ?ಏಪ್ರಿಲ್ ಕೊನೆಯ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ?

ಕೃಪಾಂಕ ನೀಡುವ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆ ವಿಷಯವಾರು ತಜ್ಞರು ಹಾಗೂ ಪ್ರಶ್ನೆ ಪತ್ರಿಕೆ ರೂಪಿಸಿದ ಸಮಿತಿಯೊಂದಿಗೆ ಸಭೆ ನಡೆಸಿ, ಆಕ್ಷೇಪಣೆಗಳನ್ನು ಪರಿಶೀಲಿಸಿ ಕೊನೆಗೆ 8ಕೃಪಾಂಕ ನೀಡಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಕೃಪಾಂಕ ನೀಡಿರುವ ಪ್ರಶ್ನೆಗಳನ್ನು ಮೌಲ್ಯಮಾಪಕರಿಗೆ ನೀಡುವ ಸ್ಕೀಂ ಆಫ್ ಇವ್ಯಾಲ್ಯುಯೇಷನ್ ನಲ್ಲಿ ಗುರುತು ಹಾಕಲಾಗುತ್ತದೆ.

PU boars sanctions grace marks to English and Physics students

ಅಲ್ಲದೆ, ಸಾರ್ವಜನಿಕರಿಗೂ ತಿಳಿಸಲು ವೆಬ್‌ಸೈಟ್‌ ನಲ್ಲಿ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲು ಇಲಾಖೆ ನಿರ್ಧರಿಸಿದೆ. 2018ರಲ್ಲಿ ದ್ವಿತೀಯ ಪಿಯುಸಿ ಭೌತಶಾಸ್ತ್ರ ಹಾಗೂ ಆಂಗ್ಲಭಾಷೆ ಪರೀಕ್ಷೆಯು ಮಾರ್ಚ್ 1 ಹಾಗೂ ಮಾರ್ಚ್ 17ರಂದು ನಡೆದಿದೆ. ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ತಿದ್ದುಪಡಿ 2017ರ ಮೇ 1ರಿಂದ ಜಾರಿಗೆ ಬಂದಿದೆ. ಇದರ ನಿಯಮ 22(ಬಿ) ಪ್ರಕಾರ ಪೌಲ್ಯಮಾಪನ ಹಂತದಲ್ಲಿ ಕೃಪಾಂಕಗಳನ್ನು ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?

English summary
Pre University Education board has decided to give two grace marks for English and Six for Physics subject which was recently conducted annual exams in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X