ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌ಎಸ್‌ಎಲ್‌ಸಿ. ಪಿಯುಸಿ ಪರೀಕ್ಷೆಗೆ ಪ್ರತ್ಯೇಕ ಮಂಡಳಿ ರಚನೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಮಾರ್ಚ್ 29: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಪ್ರತ್ಯೇಕ ಮಂಡಳಿ ರಚನೆ ಮಾಡುವ ಮೂಲಕ ನಿರ್ದೇಶಕರ ಹುದ್ದೆಯನ್ನು ಆಯುಕ್ತರ ಹುದ್ದೆಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಮರುಜೀವ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗಳಿಗೆ ಪ್ರತ್ಯೇಕ ನಿರ್ದೇಶಕರಿದ್ದಾರೆ. ಅಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪ್ರತ್ಯೇಕ ಆಯುಕ್ತರೂ ಇದ್ದಾರೆ, ಇದಲ್ಲದೆ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಇಲಾಖೆ ವಿಚಾರಕ್ಕೆ ಬಂದಲ್ಲಿ ಪರೀಕ್ಷೆ ಹಾಗೂ ಆಡಳಿತಾತ್ಮಕ ವಿಷಯಗಳನ್ನು ನಿರ್ದೇಶಕರೇ ನೋಡಿಕೊಳ್ಳಬೇಕಾಗುತ್ತದೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಲೋಪದೋಷ: ವಿದ್ಯಾರ್ಥಿಗಳಿಗೆ ಕೃಪಾಂಕ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಲೋಪದೋಷ: ವಿದ್ಯಾರ್ಥಿಗಳಿಗೆ ಕೃಪಾಂಕ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಆಯುಕ್ತರ ಹುದ್ದೆ ಇರುವಾಗ ಪದವಿಪೂರ್ವ ಶಿಕ್ಷಣ ಹಂತದಲ್ಲಿ ನಿರ್ದೇಶಕರ ಹುದ್ದೆ ಮುಂದುವರೆಸುವುದು ಸರಿಯಲ್ಲ ಎಂಬ ಭಾವನೆ ಸರ್ಕಾರಕ್ಕಿದೆ. ಅಲ್ಲದೆ, ಹಿರಿಯ ಐಎಎಸ್ ಅಧಿಕಾರಿಗಳನ್ನು ನಿರ್ದೇಶಕರ ಹುದ್ದೆಗೆ ನೇಮಿಸುವಾಗ ಶಿಕ್ಷೆ ಎಂಬಬ ಭಾವನೆಯೂ ಐಎಎಸ್ ವಲಯದಲ್ಲಿದೆ.

PU board director post will be upgraded to commissioner soon

ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವ ಸಿದ್ಧತೆ ಪ್ರಕ್ರಿಯೆಯಲ್ಲೇ ನಿರ್ದೇಶಕರು ನಾಲ್ಕೈದು ತಿಂಗಳು ಸಮಯ ವ್ಯರ್ಥ ಮಾಡಬೇಕಾಗುತ್ತದೆ. ಇದರಿಂದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಅಷ್ಟೊಂದು ಗಮನಹರಿಸಲು ನಿರ್ದೇಶಕರಿಗೆ ಸಾಧ್ಯವಾಗುತ್ತಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಲೋಪವನ್ನು ಮನಗಂಡ ಸರ್ಕಾರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಪ್ರತ್ಯೇಕ ಮಂಡಳಿ ಮೂಲಕ ನಡೆಸಿ, ಮಂಡಳಿಯ ನಿರ್ದೇಶಕ ಸ್ಥಾನವನ್ನು ಆಯುಕ್ತರ ಹುದ್ದೆಗೆ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

English summary
Department of public instructions is preparing for up gradation of pre university board director post to commissioner as primary and medium schools have commissioner and director as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X