ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್‌ಎಲ್‌ವಿ-ಸಿ50ರಿಂದ ಸಂವಹನ ಉಪಗ್ರಹ ಸಿಎಂಎಸ್-01 ಉಡಾವಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಸಂವಹನ ಉಪಗ್ರಹ ಸಿಎಂಎಸ್-01 ಅನ್ನು ಒಳಗೊಂಡಿರುವ ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್‌ವಿ-ಸಿ50) ಡಿಸೆಂಬರ್ 17ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಇಸ್ರೋ ಶುಕ್ರವಾರ ತಿಳಿಸಿದೆ.

'ಪಿಎಸ್‌ಎಲ್‌ವಿ-ಸಿ50ಯು ಪಿಎಸ್‌ಎಲ್‌ವಿ 52ನೇ ಯೋಜನೆಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್‌ಡಿಎಸ್‌ಸಿ) ಎರಡನೆಯ ಉಡಾವಣಾ ಘಟಕದಿಂದ ಸಿಎಂಎಸ್-01ಅನ್ನು ಉಡಾವಣೆ ಮಾಡಲಾಗುವುದು. ಇದಕ್ಕೆ ಡಿಸೆಂಬರ್ 17ರ ಮಧ್ಯಾಹ್ನ 3.41ಕ್ಕೆ ತಾತ್ಕಾಲಿಕ ಸಮಯ ನಿಗದಿಗೊಳಿಸಲಾಗಿದೆ. ಉಡಾವಣೆಯ ಸಮಯವು ಹವಾಮಾನದ ಪರಿಸ್ಥಿತಿಗಳಿಗೆ ಅನುಗುಣವಾಗಿ ಇರಲಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಯಶಸ್ವಿ ಉಡಾವಣೆಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಯಶಸ್ವಿ ಉಡಾವಣೆ

ಸಿಎಂಎಸ್-01 ಒಂದು ಸಂವಹನ ಉಪಗ್ರಹವಾಗಿದ್ದು, ತರಂಗಾಂತರ ಸ್ಪೆಕ್ಟ್ರಮ್‌ನ ವಿಸ್ತೃತ ಸಿ ಬ್ಯಾಂಡ್‌ನಲ್ಲಿ ಸೇವೆಗಳನ್ನು ಒದಗಿಸಲು ಸಹಾಯ ಮಾಡಲಿದೆ. ವಿಸ್ತೃತ ಸಿ-ಬ್ಯಾಂಡ್ ಭಾರತದ ಮುಖ್ಯಭೂಮಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಸಂವಹನಕ್ಕೆ ನೆರವಾಗುತ್ತದೆ.

PSLV-C50 To Launch Communication Satellite CMS-01 On Dec 17 From Sriharikota

ನರಕದಂತಹ ಗ್ರಹ ಪತ್ತೆಹಚ್ಚಿದ ಭಾರತ ಮೂಲದ ವಿಜ್ಞಾನಿಗಳು ನರಕದಂತಹ ಗ್ರಹ ಪತ್ತೆಹಚ್ಚಿದ ಭಾರತ ಮೂಲದ ವಿಜ್ಞಾನಿಗಳು

ಸಿಎಂಎಸ್-01 ಭಾರತದ 42ನೇ ಸಂವಹನ ಉಪಗ್ರಹವಾಗಿದೆ. ಪಿಎಸ್‌ಎಲ್‌ವಿ-ಸಿ50ಯು ಪಿಎಸ್‌ಎಲ್‌ವಿಯ ಎಕ್ಸ್‌ಎಲ್‌ ಸಂರಚನೆಯ 22ನೇ ವಾಹನವಾಗಿದೆ. ಜತೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಎಸ್‌ಎಚ್‌ಎಆರ್‌ನಿಂದ ಉಡಾವಣೆಯಾಗುತ್ತಿರುವ 77ನೇ ಉಡ್ಡಯನ ವಾಹನವಾಗಲಿದೆ.

English summary
ISRO said PSLV-C50 will launch communication satellite CMS-01 on December 17 from Satish Dhawan Space Centre at Sriharikota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X