ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ಹಗರಣ: ಡಿವೈಎಸ್ಪಿ ಮನೆಯಲ್ಲಿ ಸಿಕ್ಕಿದೆ ಮಹತ್ವದ ಸಿಡಿ

|
Google Oneindia Kannada News

ಬೆಂಗಳೂರು, ಮೇ15: ಪಿಎಸ್‌ಐ ಅಕ್ರಮ ನೇಮಕಾತಿಯ ಕಿಂಗ್ ಪಿನ್ ಡಿವೈಎಸ್ಪಿ ಶಾಂತಕುಮಾರ್ ಮನೆಯನ್ನು ಸಿಐಡಿ ಅಧಿಕಾರಿಗಳು ಜಾಲಾಡಿದ್ದರು. ಆಡುಗೋಡಿಯಲ್ಲಿರುವ ಮನೆಯಲ್ಲಿ ಒನ್ ಟೈಂ ಲಾಕ್ ಹಾಗೂ ಸಿಡಿ ಪತ್ತೆಯಾಗಿದೆ. ಶಾಂತಕುಮಾರ್ ಮನೆಯಲ್ಲಿ ಸಿಕ್ಕ ಈ ವಸ್ತುಗಳು ನೇಮಕಾತಿ ಹಗರಣದ ವಿಚಾರವನ್ನು ಬಹಿರಂಗ ಪಡಿಸುತ್ತಿದೆ.

ಪೊಲೀಸ್ ನೇಮಕಾತಿ ಹಗರಣದಲ್ಲಿ ಅಕ್ರಮ ಎಸಗಿರೋ ಡಿವೈಎಸ್ಪಿ ಶಾಂತಕುಮಾರ್ ಜೈಲು ಸೇರುವುದು ಖಚಿತವಾಗಿದೆ. ಆದರೆ ಇದೀಗ 12 ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಶಾಂತಕುಮಾರ್‌ನ ಅಶಾಂತಿಗೆ ಕಾರಣರಾಗಿದ್ದಾರೆ. ಇಷ್ಟು ದಿನ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ತಿಂದುಂಡು ತೇಗಿದ್ದ ಶಾಂತಕುಮಾರ್‌ಗೆ ಅಶುಭ ಶುರುವಾಗಿದೆ.

ಪಿಎಸ್‌ಐ ಹಗರಣ: ಸಿಐಡಿಯಿಂದ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಬಂಧನ ಪಿಎಸ್‌ಐ ಹಗರಣ: ಸಿಐಡಿಯಿಂದ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಬಂಧನ

ಮೇ 14ರಂದು ಶಾಂತಕುಮಾರನ ಆಡುಗೋಡಿ ಮನೆಯನ್ನು ಪರಿಶೀಲಿಸಿದ ಸಿಐಡಿ ಅಧಿಕಾರಿಗಳಿಗೆ 5 ಒನ್ ಟೈಂ ಲಾಕ್ ಕೇಬಲ್‌ಗಳು ದೊರೆತಿವೆ. ಈ ಒನ್ ಟೈಮ್ ಲಾಕ್‌ ಪಿಎಸ್‌ಐ ಎಕ್ಸಾಂ ಬರೆದ ಅಭ್ಯರ್ಥಿಗಳ ಓಎಂಆರ್ ಶೀಟ್ ಇಡುವ ಟ್ರಂಕ್‌ಗೆ ಅಳವಡಿಸಲಾಗಿರುತ್ತದೆ.

PSI Recruitment Scam : Importent cd found in dysp shanthakumar home

ಈ ಒನ್ ಟೈಮ್ ಲಾಕ್‌ ಬೇರೆ ಯಾರೂ ತೆಗೆದುಕೊಂಡು ಬಳಸುವಂತಿಲ್ಲ. ಆದರೆ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಓಎಂಆರ್ ಇರೋ ಟ್ರಂಕ್‌ನ ಒನ್ ಟೈಂ ಲಾಕ್‌ ಅನ್ನು ಬ್ರೇಕ್ ಮಾಡಿದ್ದ. ನಂತರ ಪಿಎಸ್ಐ ಹುದ್ದೆಗೆ ಸೆಲೆಕ್ಟ್ ಮಾಡಿಸೋ ಅಭ್ಯರ್ಥಿಗಳ ಓಎಂ ಆರ್ ಶೀಟ್ ತಿದ್ದಿ ಮತ್ತೆ ಅದೇ ಟ್ರಂಕ್ ನಲ್ಲಿ ಓಎಂಆರ್ ಶೀಟ್ ಇಟ್ಟು ಒನ್ ಟೈಂ ಲಾಕ್ ಮತ್ತೆ ಹಾಕುವ ಕೆಲಸವನ್ನು ಮಾಡಲಾತ್ತು ಎಂಬ ವಿಚಾರ ಸಿಐಡಿ ಅಧಿಕಾರಿಳಿಗಳಿಗೆ ತಿಳಿದು ಬಂದಿದೆ.

ಪಿಎಸ್‌ಐ ಅಕ್ರಮ: ಸಿಐಡಿ ವಶದಲ್ಲಿರುವ ಅಭ್ಯರ್ಥಿಯ ಸಹೋದರ ಆತ್ಮಹತ್ಯೆ ಪಿಎಸ್‌ಐ ಅಕ್ರಮ: ಸಿಐಡಿ ವಶದಲ್ಲಿರುವ ಅಭ್ಯರ್ಥಿಯ ಸಹೋದರ ಆತ್ಮಹತ್ಯೆ

ಇನ್ನು ಒನ್ ಟೈಮ್ ಲಾಕ್ ಅನ್ನು ಯಾವ ರೀತಿಯಲ್ಲಿ ಬಳಸಲಾಗುತ್ತಿತ್ತು. ಯಾವ ಪರೀಕ್ಷೆಗಲ್ಲಿನ ಹಗರಣಗಳಿಗೆ ಬಳಸಲಾಗುತ್ತಿದೆ? ಎಂಬದುದರ ಬಗ್ಗೆ ಸಿಐಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

PSI Recruitment Scam : Importent cd found in dysp shanthakumar home

ನೂರಾರು ಸಿಡಿಗಳು; ಡಿವೈಎಸ್ಪಿ ಶಾಂತಕುಮಾರ್‌ ಮನೆಯಲ್ಲಿ ನೂರಾರು ಸಿಡಿಗಳು ಕೂಡ ಲಭ್ಯವಾಗಿದೆ. ಆ ಸಿಡಿಯಲ್ಲಿ 2009 ಬ್ಯಾಚ್‌ನಿಂದ ಹಿಡಿದು ಇಲ್ಲಿಯವರೆಗೆ ಕರೆದ ಎಲ್ಲಾ ಬ್ಯಾಚ್‌ನ ಡೀಲಿಂಗ್ ಪಿಎಸ್ಐ ಕ್ಯಾಂಡಿಡೇಟ್‌ಗಳ ರೋಲ್ ನಂಬರ್‌ಗಳು ಆ ಸಿಡಿಯಲ್ಲಿವೆಯಂತೆ.

ಈಗಾಗಲೇ ಆ ಸಿಡಿಗಳನ್ನ ವಶಕ್ಕೆ ಪಡೆದು ಸಿಐಡಿ ಟೀಂ ಎಲ್ಲಾ ಸ್ಟೋರೇಜ್‌ಗಳನ್ನ ಹಾರ್ಡ್ ಡಿಸ್ಕ್‌ಗೆ ಪಡೆದು ಹಿಂದೆ ಆಯ್ಕೆಯಾದ ಅಭ್ಯರ್ಥಿಗಳ ಬುಡವನ್ನು ಅಲುಗಾಡಿಸುವಂತಹ ಕೆಲಸವನ್ನು ಮಾಡಲಿದ್ದಾರಂತೆ.

ಇನ್ನುಳಿದಂತೆ ಶಾಂತಕುಮಾರ್‌ನ ರೈಟ್ ಹ್ಯಾಂಡ್ ಅಂತಾನೇ ಕರೆಸಿಕೊಂಡಿರೋ ಸಿಎಆರ್ ಮುಖ್ಯ ಪೇದೆ ಶ್ರೀಧರನ ಮನೆಯಲ್ಲೂ 16 ಲಕ್ಷದಷ್ಟು ಹಣ ಸಿಕ್ಕಿದ್ದು ಹೆಚ್ಚಿನ ವಿಚಾರಣೆಯನ್ನು ಸಿಐಡಿ ಮಾಡುತ್ತಿದೆ.

PSI Recruitment Scam : Importent cd found in dysp shanthakumar home

ಡಿವೈಎಸ್ಪಿ ಮನೆಯಲ್ಲಿ ಸಿಕ್ಕಿರುವ ಸಿಡಿಯಿಂದಾಗಿ ಈಗಾಲೇ ಅಕ್ರಮವನ್ನು ಎಸಗಿ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆದಿರುವ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ತಮ್ಮ ಬ್ಯಾಚ್‌ನಲ್ಲಿ ನಡೆದ ಅಕ್ರಮಗಳು ಎಲ್ಲಿ ಹೊರ ಬೀಳಲಿವೆಯೇ. ಅಕ್ರಮ ಎಲ್ಲಿ ಬಯಲಾಗಲಿದೆಯೋ?. ಸಿಐಡಿ ತನಿಖೆಗೆ ಕರೆಯಬಹುದಾ ಎಂಬ ಆತಂಕದಲ್ಲಿ ಹಲವಾರು ಜನರು ಇದ್ದಾರೆ ಎನ್ನುತ್ತಿದ್ದಾರೆ ಸಿಐಡಿ ಅಧಿಕಾರಿಗಳು.

ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ತನಿಖೆ ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು. ಈಗ ಸಿಕ್ಕಿ ಬಿದ್ದಿರುವ ತಂಡವೇ ಹಲವು ಪರೀಕ್ಷೆಗಳಲ್ಲಿ ಅಕ್ರಮ ಎಸಗಿರೋದು ಗೊತ್ತಾಗುತ್ತಿದೆ. ಇನ್ನು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳಿಗೆ ನಡುಕ ಹುಟ್ಟಿರುವುದಂತೂ ಸುಳ್ಳಲ್ಲ.

Recommended Video

ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada

English summary
PSI Recruitment scam : Bengaluru cid unit searched dysp shanthakumar house. Importent cd and other document found in house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X