ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪೌಲ್ 10 ದಿನ ಪೊಲೀಸ್ ಕಸ್ಟಡಿ

|
Google Oneindia Kannada News

ಬೆಂಗಳೂರು, ಜುಲೈ04: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಸಿಐಡಿ ಪರ ವಾದವನ್ನು ಮಂಡಿಸಿದ ಸರ್ಕಾರಿ ಅಭಿಯೋಜಕರು ಆರೋಪಿತ ಎಡಿಜಿಪಿ ಅಮೃತ್ ಪೌಲ್‌ರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ವಾದಿಸಿದ್ದರು. ನ್ಯಾಯಾಧೀಶರು ಆಮೃತ್ ಪೌಲ್‌ರನ್ನು 10 ದಿನಗಳ ಕಾಲ ಪೊಲೀಸ್ (ಸಿಐಡಿ) ಕಸ್ಟಡಿಗೆ ನೀಡಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದ ಸಂಧರ್ಭದಲ್ಲಿ ನೇಮಕಾತಿ ವಿಭಾಗದ ಎಡಿಡಿಪಿಯಾಗಿದ್ದ ಅಮೃತ್ ಪೌಲ್‌ ಅಕ್ರಮದಲ್ಲಿ ಶಾಮೀಲಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿವಂತೆ ಸಿಐಡಿ ಅದಿಕಾರಿಗಳು ನೋಟೀಸ್ ನೀಡಿದ್ದರು. ನೊಟೀಸ್ ಸ್ವೀಕರಿಸಿದ್ದ ಅಮೃತ್ ಪೌಲ್ ನಾಲ್ಕನೇ ಸಲ ವಿಚಾರಣೆ ಹಾಜರಾಗಿದ್ದರು. ಈ ವೇಳೆ ಮಧ್ಯಾಹ್ನ 1.30ಕ್ಕೆ ಅಮೃತ್ ಪೌಲ್‌ರನ್ನು ಬಂಧಿಸಲಾಗಿತ್ತು.

ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪೌಲ್ ಬಂಧನ ಮುಂದಿನ ತನಿಖೆ ಹೇಗಿರಲಿದೆ?ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪೌಲ್ ಬಂಧನ ಮುಂದಿನ ತನಿಖೆ ಹೇಗಿರಲಿದೆ?

ಅಮೃತ್ ಪೌಲ್ ರನ್ನು 10 ದಿನಗಳ ಕಾಲ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದರಿಂದ ತನಿಖೆ ಬಿರುಸನ್ನು ಪಡೆಯಲಿದೆ. ಪಿಎಸ್‌ಐ ನೇಮಕಾತಿಯ ಹಗರಣದ ಕಿಂಗ್ ಪಿನ್ ಯಾರು. ಅಕ್ರಮದ ಒಳ ಸುಳಿಗಲೇನು ಅನ್ನೋದು ತನಿಖೆಯ ವೇಳೆಯಲ್ಲಿ ತಿಳಿಯಬೇಕಿದೆ. ಅಮೃತ್ ಪೌಲ್‌ರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಿದ್ದಾರೆ.

PSI Recruitment Scam: Court sends ADGP Amrit Paul to 10 days police custody

ಇನ್ನು ಕೋರ್ಟ್‌ನಲ್ಲಿ ಸರ್ಕಾರಿ ವಕೀಲರು ತನಿಖೆಗಾಗಿ 14 ದಿನ ಕಷ್ಟಡಿಗೆ ಬೇಕು ಎಂದು ಕೇಳಿದ ಸಂದರ್ಭದಲ್ಲಿ 20 ನಿಮಿಷ ಕಾಲ ವಿಚಾರಣೆಯನ್ನು ಮುಂದೂಡಲಾಗಿತ್ತು. ಈ ವೇಳೆ ಕೋರ್ಟ್‌ನ ಆವರಣದಿಂದ ಹೊರ ಬಂದಿದ್ದ ಅಮೃತ್ ಪೌಲ್ ಕಣ್ಣೀರು ಹಾಕುತ್ತ ನಿಂತಿದ್ದರು.

PSI ನೇಮಕಾತಿ ಹಗರಣ: ಮಾಜಿ ಎಡಿಜಿಪಿ ಅಮೃತ್ ಪೌಲ್ ಬಂಧನಕ್ಕೆ ಏನು ಕಾರಣ?PSI ನೇಮಕಾತಿ ಹಗರಣ: ಮಾಜಿ ಎಡಿಜಿಪಿ ಅಮೃತ್ ಪೌಲ್ ಬಂಧನಕ್ಕೆ ಏನು ಕಾರಣ?

ಪಿಎಸ್‌ಐ ಹಗರಣದಲ್ಲಿ ಸಿಕ್ಕಿಬಿದ್ದ ಮೊದಲ ಐಪಿಎಸ್ ಅಧಿಕಾರಿ

ಪಿಎಸ್‌ಐ ಹಗರಣದಲ್ಲಿ ಸಿಕ್ಕಿಬಿದ್ದರುವ ಮೊದಲ ಐಪಿಎಸ್ ಅಧಿಕಾರಿಯಾಗಿದ್ದ. ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಕ್ರಮಕ್ಕೆ ಸಹಕಾರವನ್ನು ನೀಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸಾಕ್ಷ್ಯಾಧಾರಗಳು ಅಮೃತ್ ಪೌಲ್‌ರನ್ನು ಆರೋಪಿಯ ಸ್ಥಾನದಲ್ಲಿ ತಂದು ನಿಲ್ಲಿಸಿದ್ದು ಐಪಿಎಸ್ ಅಧಿಕಾರಿಗಳಿಗೆ ಅವಮಾನ ಆತಂತಾಗಿದೆ. ಗೃಹಸಚಿವರು ಐಪಿಎಸ್ ಅಧಿಕಾರಿ ಬಂಧನವನ್ನು ಖಚಿತ ಪಡಿಸುವ ವೇಳೆ ಉಪ್ಪು ತಿಂದರು ನೀರನ್ನು ಕುಡಿಯಲೇಬೇಕು ಎಂದಿ ಹೇಳಿದ್ದಾರೆ.

PSI Recruitment Scam: Court sends ADGP Amrit Paul to 10 days police custody

ಪೊಲೀಸ್ ಕಸ್ಟಡಿ ಅವಧಿಯಲ್ಲಿ ಜಾಮೀನು ಸಿಗುವುದಿಲ್ಲ

ಎಡಿಜಿಪಿಗೆ ಅಮೃತ್ ಪೌಲ್‌ಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿರುವುದರಿಂದ ತನಿಖೆಗೆ ಸಾಕಷ್ಟು ಸಮಯಾವಕಾಶ ಸಿಕ್ಕಂತಾಗಿದೆ. ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಆರೋಪಿ ಎಡಿಜಿಪಿ ಅಮೃತ್ ಪೌಲ್‌ಗೆ ಜಾಮೀನು ಸಹ ಸಿಗುವುದಿಲ್ಲ. ಇದರಿಂದ ತಾವಿದ್ದ ಸಿಐಡಿ ಕಚೇರಿಯಲ್ಲೇ ಆರೋಪಿ ಸ್ಥಾನದಲ್ಲಿ ಕುಳಿತು ತನಿಖೆಯನ್ನು ಎದುರಿಸಬೇಕಾದು ದುಸ್ಥಿತಿ ಅಮೃತ್ ಪೌಲ್‌ಗೆ ಬಂದಿದೆ. ಇದಕ್ಕೆ ಅಲ್ವಾ ಹೇಳೋದು ಮಾಡಿದ್ದುಣ್ಣೋ ಮಹರಾಯ ಅಂತ..

English summary
PSI Recruitment Scam: Senior IPS officer ADGP Amrit Paul arrested by CID police today. Court sends ADGP Amrit Paul to 10 days police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X