• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಎಸ್‌ಐ ನೇಮಕಾತಿ ಅಕ್ರಮ: ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಕೆಪಿಸಿಸಿ ನಾಯಕರ ಆಗ್ರಹ

|
Google Oneindia Kannada News

ಬೆಂಗಳೂರು, ಮೇ 2 : ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿ ಸಚಿವ ಅಶ್ವಥ್ ನಾರಾಯಣ ಅವರ ರಾಜೀನಾಮೆಗೆ ಆಗ್ರಹಿಸಿದರು. ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವಥ್ ನಾರಾಯಣರವರ ಸಹೋದರ ಸತೀಶ್ ಕೈವಾಡವಿರುವ ಬಗ್ಗೆ ಆರೋಪಿಸಿರುವ ಕಾಂಗ್ರೆಸ್ ಎಚ್ ಎಂ ರೇವಣ್ಣ, ವಿಎಸ್ ಉಗ್ರಪ್ಪ, ಮತ್ತು ಮಾಜಿ ಸಂಸದ ಚಂದ್ರಪ್ಪರವರು ಸಚಿವ ಅಶ್ವಥ್ ನಾರಾಯಣರವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ‌ ವಾಗ್ದಾಳಿ

"ನಮ್ಮ ಪ್ರಧಾನಿಯವರು ನಾ ಕಾವೂಂಗಾ ನಾ ಕಾನೇ ದೂಂಗ ಆಂತಾರೆ ಹೇಳ್ತಾರೆ. ನಾನು ಕೇಳ್ತೇನೆ ಮೋದಿ ಎಲ್ಲಿದ್ಯಪ್ಪಾ.? ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನಿಮ್ಮ ಪಕ್ಷದ ಯತ್ನಾಳ್ ಅವರೇ ಹೇಳಿದ್ದಾರೆ. ಪ್ರಧಾನಿಯವರೇನು ನಿದ್ರೆ ಮಾಡ್ತಿದ್ದಾರಾ? ಕೆಂಪಣ್ಣ ಪತ್ರ ಬರೆದು ವರ್ಷವಾಗುತ್ತಾ ಬಂತು, ಸಂತೋಷ್ ಪಾಟೀಲ್ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ್ರು ಆದರೂ ಪ್ರಧಾನಿಯವರು ಎಚ್ಚೆತ್ತುಕೊಳ್ಳಲಿಲ್ಲ. ರಾಜ್ಯದ ಭ್ರಷ್ಟಾಚಾರದ ಪಾಲನೆಯಾಗ್ತಿದೆ ಪ್ರಧಾನಿ ಕಚೇರಿಯಿಂದಲೇ ಆಗ್ತಿದೆ. ಯತ್ನಾಳ್ ಕೆಪಿಎಸ್ ಸಿ ಬಗ್ಗೆಯೂ ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮ: ಮಾಗಡಿಯೋರು ಗಂಡಸ್ರು, ರಾಮನಗರದವ್ರು ಹೆಂಗಸ್ರು..ಪಿಎಸ್‌ಐ ನೇಮಕಾತಿ ಅಕ್ರಮ: ಮಾಗಡಿಯೋರು ಗಂಡಸ್ರು, ರಾಮನಗರದವ್ರು ಹೆಂಗಸ್ರು..

ಸದಸ್ಯರಾಗ ಬೇಕಾದರೆ 5 ಕೋಟಿ ಕೊಡಬೇಕು, ಚೇರ್ಮನ್ ಆಗೋಕೆ 10 ಕೋಟಿ ಕೊಡಬೇಕು. ಇದರ ಬಗ್ಗೆ ಮಾಜಿ ಸಿಎಂಗಳನ್ನ ಕೇಳಿ ಅಂದಿದ್ದಾರೆ. ಯತ್ನಾಳ್ ನೀವು ಮಾಜಿ‌ ಕೇಂದ್ರ ಸಚಿವರು ರಾಜ್ಯದ ಸಿಎಂ ಆಗಬೇಕೆಂದು ಹೊರಟವರು. ನಿಮಗೆ ಗೊತ್ತಿದ್ದರೆ ಯಾಕೆ ದೂರು ನೀಡಲಿಲ್ಲ, ಇಲ್ಲಾ ಯತ್ನಾಳ್ ಹೇಳಿದ ಮೇಲೆ ಯಾಕೆ ಕೇಸ್ ಮಾಡಲಿಲ್ಲ ಪೊಲೀಸರಾದ್ರೂ ಕೇಸ್ ದಾಖಲಿಸಬಹುದಿತ್ತು'' ಎಂದು ಹೇಳಿದರು.

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವಾಗಿದೆ. ಮಾಗಡಿ ದರ್ಶನ್ ಗೌಡ ವಿರುದ್ದ ಅಕ್ರಮ ಕೇಳಿ ಬಂದಿದೆ. ಪ್ರಭಾವಿ ಸಚಿವರ ಸಹೋದರನನ್ನು ತನಿಖೆಗೆ ಕರೆದಿದ್ದಾರೆ. ಆಗ ಪ್ರಭಾವಿ ಸಚಿವರು ಕರೆ ಮಾಡಿ ಒತ್ತಡ ಹಾಕ್ತಾರೆ. ರಾಮನಗರ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ರಿಂದ ಒತ್ತಡ ಬಂದಿದೆ. ನಾಗರಾಜ್, ಸೌಮ್ಯ ಅರೆಸ್ಟ್ ಮಾಡಲಾಯ್ತು ನಿಮ್ಮ ಅಟ್ಯಿಟ್ಯೂಡ್ ನೋಡಿದರೆ ಸಂಶಯ ಬರ್ತಿದೆ. ಇದರಲ್ಲಿ ನಿಮ್ಮ ಪಾತ್ರವೂ ಇರಬಹುದು. ಮಾಗಡಿಯಲ್ಲಿ ಮೂರರಿಂದ ಐದು ಜನ ರ್‍ಯಾಂಕ್ ಬಂದಿದ್ದಾರೆ. ಅಶ್ವಥ್ ನಾರಾಯಣ್ ಸಹೋದರ ಸತೀಶ್‌ಗೆ ಲಿಂಕ್ ಇದೆ ಎಂದು ಮಾಗಡಿ ಜನ ಹೇಳ್ತಿದ್ದಾರೆ. ನಾನೊಬ್ಬ ವಕೀಲ ಕೂಡ ಹೌದು ಅಶ್ವಥ್ ನಾರಾಯಣ್ ಕಡೆಯೂ ಬೆರಳು ತೋರಿಸ್ತಿದೆ. ಗಂಡಸ್ತನದ ಬಗ್ಗೆ ಮಾತನಾಡಿದ್ರಿ , ನಿಮಗೆ ತಾಕತ್, ಧಂ ಇದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಲಿ. ನೈತಕತೆ ಇದ್ದರೆ ಸಚಿವ ಸ್ಥಾನಕ್ಕೆ ಡಾ. ಅಶ್ವಥ್ ನಾರಾಯಣ್ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

PSI Recruitment Scam: Congress Leaders Demands Resignation of Minister CN Ashwath Narayan

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿಕೆ

ರಾಜ್ಯದ ವಿದ್ಯಾಮಾನ ನೋಡಿದರೆ ಆಶ್ಚರ್ಯವಾಗುತ್ತಿದೆ, ಭ್ರಷ್ಟಾಚಾರ ಅಂದ್ರೆ ಕರ್ನಾಟಕ ಅನ್ನುವಂತಾಗಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದವರೇ ಹೇಳ್ತಿದ್ದಾರೆ. ಮುಖ್ಯಮಂತ್ರಿಗಳು ಮೌನಿಬಾಬಾ ಆಗಿದ್ದಾರೆ. ಯಾವ ಕ್ರಮವನ್ನೂ‌ ತೆಗೆದುಕೊಳ್ತಿಲ್ಲ. ಯತ್ನಾಳ್ ಆರೋಪ ಮಾಡಿದ್ರೂ ಕ್ರಮವಿಲ್ಲ, ವಿಶ್ವನಾಥ್ ಆರೋಪ ಮಾಡಿದ್ರೂ ಕ್ರಮವಿಲ್ಲ, ಈಗ ಪಿಎಸ್ ಐ ನೇಮಕಾತಿಯಲ್ಲೂ ಅಕ್ರಮ ಆದ್ರೂ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ ಹೆಚ್.ಎಂ.ರೇವಣ್ಣ ಆರೋಪಸಿದರು.

Breaking; ಪಿಎಸ್‌ಐ ನೇಮಕಾತಿ ಹಗರಣ; ಕಿಂಗ್‌ಪಿನ್ ಸಿಐಡಿಗೆ ಶರಣು Breaking; ಪಿಎಸ್‌ಐ ನೇಮಕಾತಿ ಹಗರಣ; ಕಿಂಗ್‌ಪಿನ್ ಸಿಐಡಿಗೆ ಶರಣು

ಸಿಐಡಿ ದರ್ಶನ್ ಗೌಡ ವಿಚಾರಣೆಗೆ ಕರೆಯುತ್ತೆ, ಮಾಗಡಿಯ ದರ್ಶನ್ ಗೌಡನನ್ನ ಕರೆಯುತ್ತಾ? ಎಂದು ಪ್ರಶ್ನಿಸಿದರು. ನಂತರ ಅವನನ್ನ ಬಿಡುಗಡೆ ಮಾಡಿದ್ದಾರೆ. ಯಾವ ಒತ್ತಡಕ್ಕೆ ಮಣಿದು ಬಿಡುಗಡೆ ಮಾಡಿದ್ರು ದರ್ಶನ್ ಗೌಡ ಪ್ರಮುಖ ಆರೋಪಿಯಾಗ್ತಾನೆ. ತಾಕತ್ತಿರುವ ಸಚಿವರು ಭಾಗಿಯಾಗಿದ್ದಾರೆ. ಸತೀಶ್ ಅನ್ನುವವರಿಗೆ ಅವರು ಹಣ ಕೊಟ್ಟಿದ್ದಾರಂತೆ ಲ್ಯಾಪ್ ಟಾಪ್‌ನಲ್ಲಿ ಅವ್ಯವಹಾರ ಆಗಿದೆ. ಅದರಲ್ಲಿದ್ದ ಉನ್ನತ ಶಿಕ್ಷಣ ಸಚಿವರು ಭಾಗಿಯಾಗಿದ್ದಾರೆ. ಗಂಡಸ್ತನದ ಬಗ್ಗೆ ಮಾತನಾಡಿದ ಸಚಿವರು ರಾಮನಗರದ ಸಭೆಗಳಲ್ಲಿ‌ ಭಾಗವಹಿಸಿದ್ದವರು. ಆ ಸಚಿವರ ಭಾಗಿ ಇದರಲ್ಲಿದೆ

ಉತ್ತಮ ತನಿಖೆಯಾಗಬೇಕು ಇಲ್ಲದೇ ಹೋದರೆ ತನಿಖೆ ಹಳ್ಳಹಿಡಿಯಲಿದೆ ಎಂದು ಮಾಧ್ಯಗೋಷ್ಠಿಯಲ್ಲಿ ಹೆಚ್ ಎಂ ರೇವಣ್ಣ ಹರಿಹಾಯ್ದರು.

ಹಿರಿಯ ನ್ಯಾಯವಾದಿ ಚಂದ್ರಮೌಳಿ ಆಗ್ರಹ

ಕೆಪಿಎಸ್‌ಸಿ ಯಲ್ಲಿ ಅಕ್ರಮ ನಡೆಯುತ್ತೆ, ಚಾರ್ಜ್ ಶೀಟ್ ಆಯ್ತು ತನಿಖೆಯೂ ಆಯ್ತು, ಇವತ್ತು ಪಿಎಸ್ ಐ ಅಕ್ರಮ ಹೊರಬಿದ್ದಿದೆ. ತನಿಖೆ ನಡೆಯುವಾಗ ಯಾರೂ ಇಂಟರ್ ಫಿಯರ್ ಆಗಬಾರದು ಕೋರ್ಟ್ ಕೂಡ ಮಧ್ಯಪ್ರವೇಶಿಸುವಂತಿಲ್ಲ.

ಚಾರ್ಜ್ ಶೀಟ್ ಮಾಡಿದ ನಂತರ ಕೋರ್ಟ್ ಎಂಟ್ರಿಯಾಗುತ್ತೆ ಇದನ್ನ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ ಆದರೆ ಈಗ ರಾಜ್ಯದಲ್ಲಿ ಆಗ್ತಿರೋದು ಏನು ತನಿಖೆಗೆ ಕರೆತರ್ತಾರೆ ಬಿಟ್ಟು ಕಳಿಸ್ತಾರೆ. ಫಿಸಿಕಲ್ ಟೆಸ್ಟ್ ನಲ್ಲೂ ಅಕ್ರಮವಾಗಿದೆ, 545 ಭ್ರಷ್ಟ ಅಧಿಕಾರಿಗಳನ್ನು ಠಾಣೆಗೆ ತಂದು ಕೂರಿಸಿದ್ರೆ ಹೇಗೆ? ಈಗ ರಮೇಶ್ ಜಾರಕಿಹೊಳಿ ಕೇಸ್ ಹಳ್ಳ ಹಿಡಿಯಿತು, ಈಶ್ವರಪ್ಪ ಕೇಸ್ ಏನಾಯ್ತು? ಶೀಘ್ರದಲ್ಲೇ ಬಿ ರಿಪೋರ್ಟ್ ಸಿಗಲಿದೆ. ಹಾಗಾಗಿ ತನಿಖೆಗೆ ಯಾರು ಮಧ್ಯಪ್ರವೇಶಿಸಬಾರದು, ನಿಸ್ಪಕ್ಷಪಾತವಾಗಿ ತನಿಖೆಯಾಗಬೇಕು. ಸುಮೋಟು ಅಡಿ ಕೇಸ್ ದಾಖಲಿಸಬೇಕು ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಹಿರಿಯ ನ್ಯಾಯವಾದಿ ಚಂದ್ರಮೌಳಿಯವರು ಆಗ್ರಹಿಸಿದರು.

ಕಾಂಗ್ರೆಸ್ ನಾಯಕರು ಸಚಿವ ಡಾ. ಅಶ್ವಥ್ ನಾರಾಯಣರವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದು. ಪಿಎಸ್ಐ ಅಕ್ರಮದ ತನಿಖೆಯಿಂದಾಗಿ ಇನ್ಯಾವ ರಾಜಕಾರಣಿಗಳ ಹೆಸರನ ತಳುಕು ಹಾಕಿಕೊಳ್ಳುವುದೋ ಕಾದು ನೋಡಬೇಕಿದೆ.

English summary
PSI Recruitment scam: Congress leaders demand resignation of Minister CN Ashwath Narayan. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X