ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಪಿಎಸ್ಐ ನೇಮಕಾತಿ ಹಗರಣ: ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಜುಲೈ27: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಕೋರ್ಟ್‌ಗೆ ಸಿಐಡಿಯಿಂದ ಜುಲೈ 27ರಂದು(ಇಂದು) ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಒಂದನೆ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದೆ‌.

ಕರ್ನಾಟಕದಲ್ಲಿ ಪಿಎಸ್ಐ ನೇಮಕಾತಿ ಹಗರಣ ಭಾರಿ ಸದ್ದು ಮಾಡಿತ್ತು. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸಹ ಹಗರಣದಲ್ಲಿ ಸಿಲುಕಿದ್ದರು. ಕೋಟಿ ಕೋಟಿ ಹಣವನ್ನು ಪಡೆದು ಪಿಎಸ್ಐ ಹುದ್ದೆಯನ್ನು ಬಿಗರಿ ಮಾಡಿದಂತೆ ಪರೀಕ್ಷೆಯಲ್ಲಿ ಅಕ್ರಮವನ್ನು ಎಸಗಲಾಗಿತ್ತು. ನೇಮಕಾತಿ ವಿಭಾಗದ ಕಚೇರಿಯಲ್ಲಿಯೇ ಉತ್ತರದ ಹಾಳೇಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದರು. ಹೊಸ ಹೊಸ ವಿಧಾನಗಳನ್ನು ಬಳಸಿದ್ದರು. ಬ್ಲೂಟೂತ್ ಸೇರಿದಂತೆ ಹೊಸ ವಿಧಾನವನ್ನು ಬಳಕೆಯನ್ನು ಮಾಡಿ ನಕಲನ್ನು ಮಾಡಿ ಪರೀಕ್ಷೆಯನ್ನು ಉತ್ತಮ ಅಂಕವನ್ನು ಗಳಿಸಿ ಸೆಲೆಕ್ಷನ್ ಆಗವ ಹಂತದಲ್ಲಿದ್ದರು. ಅಕ್ರಮದಲ್ಲಿ ಶಾಮೀಲು ಆಗಿದ್ದವರ ಹೆಡೆಮುರಿಯನ್ನು ಕಟ್ಟಲಾಗಿದೆ. ಇದೀಗ ಇವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

3065 ಪುಟಗಳ ಚಾರ್ಜ್ ಶೀಟ್ ನಲ್ಲಿ 202 ವಿಟ್ನೆಸ್‌ಗಳು 330 ದಾಖಲಾತಿಗಳನ್ನು 30 ಜನ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ. ಎಡಿಜಿಪಿ ಅಮ್ರಿತ್ ಪೌಲ್ ಸೇರಿದಂತೆ ಕೆಲ ಆರೋಪಿಗಳನ್ನು ಬಿಟ್ಟು ಉಳಿದ ಅರೋಪಿಗಳ ಮೇಲೆ ಚಾರ್ಶೀಟ್ ಸಲ್ಲಿಸಲಾಗಿದೆ.

PSI Recruitment Scam: CID Submit Chargesheet against Accused For 1st ACMM Court

ಅಮ್ರಿತ್ ಪೌಲ್ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಲು ಸಾಕಷ್ಟು ಕಾಲವಾಕಾಶ ಇದ್ದು ಹೆಚ್ಚಿನ ಮಾಹಿತಿಯನ್ನ ಸಿಐಡಿ ಕಲೆ ಹಾಕ್ತಿದೆ. ಸದ್ಯ ಸಂಪೂರ್ಣ ತನಿಖೆ ಮುಗಿದವರ ವಿರುದ್ದ ಮಾತ್ರ ಈಗ ಚಾರ್ಶೀಟ್ ಸಲ್ಲಿಕೆಯಾಗಿದ್ದು, ಎಫ್ ಐ ಆರ್ ನಲ್ಲಿ ಹೆಸರು ಇದ್ದು ಅರೆಸ್ಟ್ ಆಗದೆ ಇರುವ ಆರೋಪಿಗಳು ಹಾಗು ಕೊನೆ ಹಂತದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳ ವಿರುದ್ದ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿಲ್ಲ.

English summary
PSI Recruitment Scam:CID Officers Submit Chargesheet against 30 Accused For 1st ACMM Court,Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X