ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪೌಲ್ ಬಂಧನ ಮುಂದಿನ ತನಿಖೆ ಹೇಗಿರಲಿದೆ?

|
Google Oneindia Kannada News

ಬೆಂಗಳೂರು, ಜು.04: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್‌ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಮೃತ್ ಪೌಲ್‌ರನ್ನು ನಾಲ್ಕನೇ ಸಲ ವಿಚಾರಣೆಗೆ ಕರೆದಿದ್ದ ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಗಿರುವ ಆರೋಪದಲ್ಲಿ ಬಂಧಿಸಲಾಗಿದೆ. ಎಡಿಜಿಪಿಯವನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆಯನ್ನು ತೀವ್ರಗೊಳಿಸಲಿದ್ದಾರೆ.

ನೇಮಕಾತಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಅಮೃತ್‌ ಪೌಲ್ ಅಧಿಕಾರವಧಿಯಲ್ಲಿಯೇ ಪಿಎಸ್ಐ ನೇಮಕಾತಿ ಹಗರಣ ನಡೆದಿತ್ತು. ಎಡಿಜಿಪಿಯಾಗಿ ಅಕ್ರಮ ಎಡಿಜಿಪಿ ತಿಳಿಯದೇ ನಡೆಯಲು ಸಾಧ್ಯವಿಲ್ಲ ಎಂಬ ಗುಮಾನಿ ಉಂಟಾಗಿತ್ತು.

ನೇಮಕಾತಿ ವಿಭಾಗದಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದವರ ವಿಚಾರಣೆ ಮತ್ತು ತನಿಖೆ ತೀವ್ರವಾಗಿ ನಡೆಸಲಾಗಿತ್ತು. ಅಕ್ರಮದಲ್ಲಿ ಶಾಮೀಲಾಗಿದ್ದ ಆರೋಪಿಗಳನ್ನು ಬಂಧಿಸುವ ಕೆಲಸವನ್ನು ಸಹ ಸಿಐಡಿ ಅಧಿಕಾರಿಗಳು ಮಾಡಿದ್ದರು.

ಎಡಿಜಿಪಿಯನ್ನು ನಿರಂತರವಾಗಿ ವಿಚಾರಣೆಯನ್ನು ಮಾಡಿದ ಸಂದರ್ಭದಲ್ಲಿ ಅಕ್ರಮದ ಬಗ್ಗೆ ತಿಳಿದು ಬಂದಿತ್ತು. ಎಡಿಜಿಪಿಯವರು ಪಿಎಸ್‌ಐ ನೇಮಕಾತಿಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯಿಂದ 30 ಲಕ್ಷ ರೂಪಾಯಿಯನ್ನು ಪಡೆದುಕೊಂಡಿರುವ ಆರೋಪಗಳು ಕೇಳಿಬಂದಿದ್ದವು. ಪಿಎಸ್ಐ ಹಗರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಹಲವು ವಿಚಾರವನ್ನು ಬಾಯ್ಬಿಟ್ಟಿದ್ದರು. ಎಡಿಜಿಪಿ ಮೇಲೆಯೇ ನೇರವಾದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇತಿಹಾಸದಲ್ಲೇ ಮೊದಲ ಭಾರೀಗೆ ಎಡಿಜಿಪಿ ರ್ಯಾಕಿಂಗ್ ಅಧಿಕಾರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಓಎಂಆರ್ ಶೀಟ್‌ ತಿದ್ದುಪಡಿ

ಓಎಂಆರ್ ಶೀಟ್‌ ತಿದ್ದುಪಡಿ

ಎಡಿಜಿಪಿ ಅಮೃತ್ ಪೌಲ್ ಕಚೇರಿಯಲ್ಲಿಯೇ ಉತ್ತರ ಪತ್ರಿಕೆಯ ಓಎಂಆರ್ ಶೀಟ್‌ ಅನ್ನು ತಿದ್ದುಪಡಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಅಮೃತ್ ಪೌಲ್‌ರನ್ನು ವಿಚಾರಣೆಗೆ ಒಳಪಡಿಸಲಾಗತ್ತು. ಅಮೃತ್ ಪೌಲ್ ಅಭ್ಯರ್ಥಿಗಳಿಂದ 30 ಲಕ್ಷ ಹಣವನ್ನು ಪಡೆದಿದ್ದಾರೆ ಎಂಬ ಗಂಭೀರ ಆರೋಪಗಳಿಗೂ ತನಿಖೆಯ ವೇಳೆಯಲ್ಲಿ ಕೇಳಲಾಗಿತ್ತು. ಆದರೆ ಅಮೃತ್ ಪೌಲ್ ಯಾವುದಕ್ಕೂ ಸರಿಯಾದ ಉತ್ತರವನ್ನು ನೀಡಿರಲಿಲ್ಲ ಎಂದು ಹೇಳಲಾಗಿದೆ.

ನಾಲ್ಕನೇ ವಿಚಾರಣೆಯಲ್ಲಿ ಅಂದರ್

ನಾಲ್ಕನೇ ವಿಚಾರಣೆಯಲ್ಲಿ ಅಂದರ್

ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಎಡಿಜಿಪಿ ಅಮೃತ್ ಪೌಲ್ ಅವಧಿಯಲ್ಲಿ ನೇಮಕಾತಿ ವಿಭಾಗದಲ್ಲಿ ಭಾರಿ ಅಕ್ರಮ ನಡೆದಿತ್ತು. ಅಕ್ರಮ ವಿಚಾರ ಗೃಹಸಚಿವರು ಸೇರಿದಂತೆ ಸರ್ಕಾರಕ್ಕೆ ಮಸಿ ಬಳಿಯುವಂತಾಗಿತ್ತು. ಅಕ್ರಮದ ವಿಚಾರ ಹೆಚ್ಚು ಹೆಚ್ಚು ಬಯಲಾಗುತ್ತಿದ್ದಂತೆ ಎಡಿಜಿಪಿ ಅಮೃತ್ ಪೌಲ್ ಮೇಲೆ ಅನುಮಾನಗಳು ಹೆಚ್ಚಾಗಿದ್ದವು. ಸರ್ಕಾರ ಪಿಎಸ್ಐ ನೇಮಕಾತಿ ಪರೀಕ್ಷೆಯನ್ನೇ ರದ್ದು ಮಾಡಿ ಆದೇಶವನ್ನು ಹೊರಡಿಸಿತು. ನೇಮಕಾತಿ ವಿಭಾಗದಿಂದ ಅಮೃತ್ ಪೌಲ್ ರನ್ನು ವರ್ಗಾಯಿಸಿ ಕಮಲ್ ಪಂಥ್ ರನ್ನು ನೇಮಕಾತಿ ವಿಭಾಗಕ್ಕೆ ನೇಮಕವನ್ನು ಮಾಡಲಾಯಿತು.

ಈ ವೇಳೆಯಲ್ಲಿ ತನಿಖೆಯನ್ನು ನಡೆಸುತ್ತಿದ್ದ ಸಿಐಡಿ ಪದೇ ಪದೇ ಎಡಿಜಿಪಿಯವರನ್ನು ಲೀಡ್‌ಗಳ ಆಧಾರದಲ್ಲಿ ಕರೆತಂದು ವಿಚಾರಣೆಯನ್ನ ನಡೆಸಿದ್ದರು. ಎಡಿಜಿಪಿ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದರಿಂದ ನಾಲ್ಕನೇ ಸಲ ಎಡಿಜಿಪಿಯನ್ನು ವಿಚಾರಣೆಗೆ ಕರೆದು ಬಂಧಿಸಲಾಗಿದೆ.

ಪೊಲೀಸ್ ಕಸ್ಟಡಿಗೆ ಪಡೆಯಲಿರುವ ಸಿಐಡಿ

ಪೊಲೀಸ್ ಕಸ್ಟಡಿಗೆ ಪಡೆಯಲಿರುವ ಸಿಐಡಿ

ಸಿಐಡಿ ಅಧಿಕಾರಿಗಳು ಎಡಿಜಿಪಿ ಅಮೃತ್ ಪೌಲ್ ರನ್ನು ಬಂಧಿಸಿದ್ದಾರೆ. ಅಮೃತ್ ಪೌಲ್‌ರನ್ನು ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಅಮೃತ್ ಪೌಲ್‌ರವರ ವಿಚಾರಣೆಯನ್ನು ಮತ್ತಷ್ಟು ಸಮಯಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಎಡಿಜಿಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಿಕೊಳ್ಳಲಾಗುತ್ತದೆ. ಅಮೃತ್ ಪೌಲ್‌ರನ್ನು ನಿರ್ಧಿಷ್ಟ ದಿನ ಕಷ್ಟಡಿಗೆ ಪಡೆದು ತನಿಖೆಯನ್ನು ನಡೆಸಲಾಗುತ್ತದೆ.

ಎಡಿಜಿಪಿ ಅಮೃತ್ ಪೌಲ್‌ರಿಂದ ರಿವೀಲ್ ಆಗುವುದೇನು..?

ಎಡಿಜಿಪಿ ಅಮೃತ್ ಪೌಲ್‌ರಿಂದ ರಿವೀಲ್ ಆಗುವುದೇನು..?

ಎಡಿಜಿಪಿ ಅಮೃತ್ ಪೌಲ್‌ರನ್ನು ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದ ಬಳಿಕ ತೀವ್ರವಾದ ವಿಚಾರಣೆಯನ್ನು ನಡೆಸಲಿದ್ದಾರೆ. ಅಕ್ರಮದ ಸಾಕ್ಷ್ಯಾಧಾದ ಮೇಲೆ ಸ್ಪಾಟ್ ಮಹಜರ್ ಮಾಡಲಿದ್ದಾರೆ. ಎಡಿಜಿಪಿ ಮೇಲೆ ಆರೋಪ ಮಾಡಿದವರನ್ನು ಮುಖಾಮುಖಿ ಕೂರಿಸಿ ವಿಚಾರಣೆಯನ್ನು ನಡೆಸಿ ಸತ್ಯಾಸತ್ಯತೆಯನ್ನು ಪೊಲೀಸರು ತಿಳಿಯಲಿದ್ದಾರೆ. ಈ ವೇಳೆ ಆರೋಪಿತ ಎಡಿಜಿಪಿ ಅಮೃತ್ ಪೌಲ್ ಯಾವೆಲ್ಲ ಸಂಗತಿಯನ್ನು ಬಾಯ್ಬಿಡಲಿದ್ದಾರೆ ಎಂಬುದು ಕುತೂಹಲವನ್ನು ಕೆರಳಿಸಿದೆ.

Recommended Video

Zameer Ahmed ಅವರಿಗೆ ಸಂಬಂಧಿಸಿದ 5 ಜಾಗಗಳ ಮೇಲೆ ACB ದಾಳಿ | *Politics | OneIndia Kannada

English summary
PSI Recruitment Scam: CID officials arrested ADGP Amrit Paul after 4th enquiry and what was the next process, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X