ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರಗ ಜ್ಞಾನೇಂದ್ರ ಸೇರಿ ಕೆಲವು ಸಚಿವರ ಭವಿಷ್ಯ ಹೈಕಮಾಂಡ್ ಅಂಗಳದಲ್ಲಿ!

|
Google Oneindia Kannada News

ಬೆಂಗಳೂರು, ಮೇ12: ರಾಜ್ಯ ಬಿಜೆಪಿ ಸರ್ಕಾರ ಸಂಪುಟ ಪುನಾರಚನೆಯ ಸಿದ್ದತೆಯಲ್ಲಿದೆ. ಆದರೆ ಬಿಜೆಪಿಯ ಹೈಕಮಾಂಡ್ ಚುನಾವಣಾ ಸಂಪುಟವನ್ನು ತರಬೇಕು. ಕ್ಲೀನ್ ಇಮೇಜ್ ಮತ್ತು ಪಕ್ಷದ ವರ್ಚಸ್ಸನ್ನು ಹೆಚ್ಚಿಸುವವರನ್ನು ಸಂಪುಟಕ್ಕೆ ಸೇರಿಸಬೇಕು ಎಂಬ ಇರಾದೆಯಲ್ಲಿದೆ. ಇದರ ನಡುವೆ ಬಿಜೆಪಿಗೆ ಭ್ರಷ್ಟಾಚಾದ ೪೦ ಕಮೀಷನ್ ಆರೋಪ , ಪಿಎಸ್‌ಐ ನೇಮಕಾತಿ ಹಗರಣ ಭಾರೀ ಡ್ಯಾಮೇಜ್ ಮಾಡ್ತಿದೆ. ಇದರ ನಡುವೆ ಗೃಹಸಚಿವ ಆರಗ ಜ್ಞಾನೇಂದ್ರ ತನಿಖೆ ಫೈಲ್ ಹಿಡಿದು ಹೈಕಮಾಂಡ್ ಭೇಟಿಗೆ ತೆರಳಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಪಿಎಸ್‌ಐ ನೇಮಕಾತಿ ಹಗರಣದ ಚಂಡು ಹೈಕಮಾಂಡ್ ಅಂಗಳವನ್ನು ತಲುಪಿದೆ. ಬಿಜೆಪಿ ಹೈಕಮಾಂಡ್ ಸಿಎಂ ಬಸವರಾಜ ಬೊಮ್ಮಾಯಿಯನ್ನು ಬೆಂಗಳೂರಿಗೆ ವಾಪಸ್ ಕಳಿಸಿ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ದೆಹಲಿಗೆ ಕರೆಸಿಕೊಂಡಿದೆ. ಆರಗ ಜ್ಞಾನೇಂದ್ರ ಪಿಎಸ್‌ಐ ನೇಮಕಾತಿ ಹಗರಣದ ತನಿಖಾ ಪ್ರಗತಿಯ ವರದಿ ಜೊತೆ ಕೆಲವು ಮಹತ್ವದ ಸಂಗತಿಯನ್ನು ಹೊತ್ತು ದೆಹಲಿಗೆ ಹೋಗಿದ್ದಾರೆ. ಪಿಎಸ್ಐ ಹಗರಣದಲ್ಲಿ ಬಿಜೆಪಿ ಜೊತೆಗೂ ನಂಟು ಹೊಂದಿದ್ದ ದಿವ್ಯಾಹಾಗರಗಿ ಅರೆಸ್ಟ್ ಆಗಿದ್ದಾರೆ. ಇನ್ನಷ್ಟು ವಿವರ ಮುಂದಿದೆ...

ಪಿಎಸ್ಐ ಹಗರಣದಲ್ಲಿ ಸ್ವಪಕ್ಷೀಯರ ಲಿಂಕ್

ಪಿಎಸ್ಐ ಹಗರಣದಲ್ಲಿ ಸ್ವಪಕ್ಷೀಯರ ಲಿಂಕ್

ದಿವ್ಯಾ ಹಾಗರಗಿ ಆರಗ ಜ್ಞಾನೇಂದ್ರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದ ಫೋಟೋ ಕೂಡ ವೈರಲ್ ಆಗಿತ್ತು. ಇನ್ನು ಈ ವಿಚಾರದಲ್ಲಿ ಈಗಾಗಲೇ ಗೃಹಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ ಇದೀಗ ಹೈಕಮಾಂಡ್ ಹಗರಣದಲ್ಲಿ ಯಾರು ನೇರವಾಗಿ ಮತ್ತು ಪರೋಕ್ಷವಾಗಿ ಶಾಮೀಲಾಗಿದ್ದ ತನಿಖೆಯ ವೇಳೆಯಲ್ಲಿ ತಿಳಿದುಬಂದಿರುವ ಅಂಶವೇನು? ಸ್ವಪಕ್ಷಿಯರ ಪಾತ್ರವೇನು? ಕಾಂಗ್ರೆಸ್ ಪಕ್ಷದಲ್ಲಿದ್ದವರ ಪಾತ್ರವೇನು? ಸಂಪೂರ್ಣವಾದ ವರದಿಯನ್ನು ಆರಗ ಜ್ಞಾನೇಂದ್ರರವರ ಬಳಿ ಬಿಜೆಪಿ ಹೈಕಮಾಂಡ್ ಕೇಳಿದೆ ಎನ್ನಲಾಗತ್ತಿದೆ.

ಬಿಜೆಪಿಗೆ ಈಗಾಗಲೇ 40% ಕಮೀಷನ್ ಆರೋಪವಿದೆ.

ಬಿಜೆಪಿಗೆ ಈಗಾಗಲೇ 40% ಕಮೀಷನ್ ಆರೋಪವಿದೆ.

ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಸರ್ಕಾರದ ಕಮೀಷನ್ ದಂಧೆಯ ಕುರಿತು ಪ್ರಧಾನಿ ಕಚೇರಿಯವರೆಗೂ ಪತ್ರವನ್ನು ಬರದಿದ್ದರು. ಆ ನಂತರ ಆತ್ಮಹತ್ಯೆಗೂ ಸಂತೋಷ್ ಪಾಟೀಲ್ ಶರಣಾಗಿದ್ದ. ಇದರಿಂದಾಗಿ ಬಿಜೆಪಿ ಮೇಲೆ ಮುಗಿಬೀಳಲು ಕಾಂಗ್ರೆಸ್‌ಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಸರ್ಕಾರವಿದ್ದಾಗ 10% ಸರ್ಕಾರ ಎಂದ ಟೀಕಿಸಿದ್ದರು. ಇದೀಗ ಸ್ವಪಕ್ಷದ ವಿರುದ್ದವೇ 40% ಆರೋಪ ಕೇಳಿಬಂದಿದೆ. ಇದು ಬಿಜೆಪಿ ಪಕ್ಷಕ್ಕೆ ಮುಜುಗರವನ್ನು ತಂದಿಟ್ಟಿದೆ. ಇದರ ಜೊತೆಗೆ ಪಿಎಸ್ಐ ನೇಮಕಾತಿ ಹಗರಣ ಕಾಂಗ್ರೆಸ್ ಕೈಗೆ ಬೆತ್ತವನ್ನು ಕೊಟ್ಟು ಬಡಿಸಿಕೊಳ್ಳುವಂತಾಗಿದೆ.

ಸಂಪುಟ ಪುನಾರಚನೆಗೆ ಮುನ್ನ ಕಳಂಕಿತ ಸಚಿವರನ್ನು ಕೈ ಬಿಡುತ್ತಾ ಹೈಕಮಾಂಡ್

ಸಂಪುಟ ಪುನಾರಚನೆಗೆ ಮುನ್ನ ಕಳಂಕಿತ ಸಚಿವರನ್ನು ಕೈ ಬಿಡುತ್ತಾ ಹೈಕಮಾಂಡ್

ಪಿಎಸ್‌ಐ ಹಗರಣದಲ್ಲಿ ಬಿಜೆಪಿಗೆ ಕಪ್ಪುಚುಕ್ಕೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಶೀಘ್ರವೇ ಮುಗಿಸುವಂತೆ ಗೃಹಸಚಿವ ಆರಗ ಜ್ಞಾನೇಂದ್ರರವರಿಗೆ ಹೈಕಮಾಂಡ್ ಸೂಚನೆ ನೀಡಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಇನ್ನು ಸಚಿವ ಸಂಪುಟ ಪುನಾರಚನೆಗೆ ಮುನ್ನ ಹೈಕಮಾಂಡ್ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ. ಇವನ್ನೆಲ್ಲಾ ಪರಿಶೀಲಿಸುವ ಸಲುವಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿಮಗಳಲ್ಲಿ ಸೂಚನೆ ಕೊಡುವುದಾಗಿ ಸಿಎಂಗೆ ಹೇಳಿದ್ದರು.

ಪಿಎಸ್ಐ ಹಗರಣದ ತನಿಖೆಗೆ ಶೀಘ್ರವೇ ಮುಕ್ತಿ?

ಪಿಎಸ್ಐ ಹಗರಣದ ತನಿಖೆಗೆ ಶೀಘ್ರವೇ ಮುಕ್ತಿ?

ಇನ್ನು ಗೃಹ ಸಚಿವರು ಸಮರ್ಥವಾಗಿ ಖಾತೆಯನ್ನು ನಿಭಾಯಿಸುತ್ತಿಲ್ಲ ಎಂಬ ಅಂಶವೂ ಹೈಕಮಾಂಡ್ ಅಂಗಳವನ್ನು ತಲುಪಿರುವ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಗೃಹ ಖಾತೆಯ ಬದಲಾಗಿ ಬೇರೆ ಖಾತೆಯನ್ನು ನೀಡುವ ಸಾಧ್ಯತೆಯಿದೆ. ಇನ್ನು ಪಕ್ಷಕ್ಕೆ ಭಾರಿ ಮುಜುಗರವನ್ನು ತರುತ್ತಿರುವ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಶೀಘ್ರವೇ ಮುಕ್ತಿ ಕೊಡುವ ಸಾಧ್ಯತೆಗಳಿವೆ.

Recommended Video

Delhi Captain ಬಲಿಷ್ಠ ರಾಜಸ್ಥಾನ ತಂಡವನ್ನು ಸೋಲಿಸಿದ್ದು ಹೇಗೆ | Oneindia Kannada

English summary
PSI Recruitment scam : BJP high command calls Araga Jnanendra to New Delhi. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X