ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆಗಳಲ್ಲಿ ಬಿಸಿಯೂಟವನ್ನು ಶೀಘ್ರ ಪುನಾರಂಭಿಸಲು ಆಗ್ರಹ

|
Google Oneindia Kannada News

ಬೆಂಗಳೂರು,ಜನವರಿ 21:ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೀಘ್ರ ಬಿಸಿಯೂಟ ನೀಡುವ ಕಾರ್ಯಕ್ರಮ ಆರಂಭಿಸಬೇಕು ಎಂದು ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನ ಸಮಿತಿ ಒತ್ತಾಯಿಸಿದೆ.

ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು, ಶಾಲಾ ಅಭಿವೃದ್ಧಿ ಮತ್ತು ಸಲಹಾ ಸಮಿತಿಯ ಸದಸ್ಯರು ಮತ್ತು ಶಿಕ್ಷಕರು ಆರನೇ ತರಗತಿಗಿಂತ ಕಡಿಮೆ ತರಗತಿಗಳನ್ನು ಮುಚ್ಚುವಂತೆ ಸಲಹೆಗಳನ್ನು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಕೊರತೆ ಎದುರಾಗುತ್ತಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ಕೇವಲ 'ಸ್ಪಾ'ಗಳಿಗೆ ಮಾತ್ರ ಅನುಮತಿ ಏಕಿಲ್ಲ: ಹೈಕೋರ್ಟ್ ಪ್ರಶ್ನೆ ದೆಹಲಿಯಲ್ಲಿ ಕೇವಲ 'ಸ್ಪಾ'ಗಳಿಗೆ ಮಾತ್ರ ಅನುಮತಿ ಏಕಿಲ್ಲ: ಹೈಕೋರ್ಟ್ ಪ್ರಶ್ನೆ

ಡಿಸೆಂಬರ್ ತಿಂಗಳಿನಲ್ಲಿ ಸಚಿವರನ್ನು ಭೇಟಿಯಾದಾಗ, ಜನವರಿ 15ರ ಬಳಿಕ ಎಲ್ಲಾ ತರಗತಿಗಳನ್ನು ತೆರೆಯುವ ಭರವಸೆ ನೀಡಿದ್ದರು. ಆದರೆ, ಅದಾವುದೂ ಆಗಲಿಲ್ಲ. ಅಂಗನವಾಡಿಗಳೂ ಬಂದ್ ಆಗಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾಗುತ್ತಿದೆ. ಸರ್ಕಾರ ಕೂಡಲೇ ಬಿಸಿಯೂಟ ಕಾರ್ಯಕ್ರಮ ಆರಂಭಿಸಬೇಕಿದೆ ಎಂದು ಆರೋಗ್ಯ ತಜ್ಞ ಡಾ.ಬೆವಿಂಜೆ ಶ್ರೀನಿವಾಸ ಕಕ್ಕಿಳಾಯ ಅವರು ಹೇಳಿದ್ದಾರೆ.

Provide Midday Meals, Restart All Classes: Forum

ರಾಜ್ಯದಲ್ಲಿ ಜನವರಿ 1 ರಿಂದ ಶಾಲೆಗಳು ಪುನರಾರಂಭಗೊಂಡಿದ್ದು, ಸಚಿವ ಸುರೇಶ್ ಕುಮಾರ್ ಅವರ ಭರವಸೆಯ ಹೊರತಾಗಿಯೂ ಬಿಸಿಯೂಟ ಕಾರ್ಯಕ್ರಮ ಇನ್ನೂ ಆರಂಭಗೊಂಡಿಲ್ಲ ಎಂದು ಹೇಳಿದೆ.

ಜನವರಿ 23ರಿಂದ ಎಲ್ಲಾ ತರಗತಿಗಳನ್ನು ಆರಂಭಿಸಿ ಸರ್ಕಾರ ಬಿಸಿಯೂಟ ಆರಂಭಿಸಬೇಕು. ಒಂದು ವೇಳೆ ಸರ್ಕಾರ ನಮ್ಮ ಆಗ್ರಹವನ್ನು ಈಡೇರಿಸದೇ ಹೋದಲ್ಲಿ ಜನವರಿ 25 ರಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಗ್ರಹಿಸಿದ್ದಾರೆ.

Recommended Video

ನೂತನ ಅಧ್ಯಕ್ಷನಾಗಿ ಜೋ ಬಿಡೆನ್ ಪ್ರಮಾಣವಚನ !! | Oneindia Kannada

ಬಿಸಿಯೂಟದ ಬದಲಾಗಿ ಸರ್ಕಾರ ಫುಡ್ ಕಿಟ್ ಗಳನ್ನು ನೀಡಿದ್ದರೂ ಕೂಡ ಅದರಲ್ಲಿ ಅಕ್ಕಿ, ಬೇಳೆಯನ್ನಷ್ಟೇ ನೀಡಲಾಗಿದೆ. ತರಕಾರಿ, ಹಾಲಿನ ಪುಡಿ ನೀಡಲಾಗಿಲ್ಲ. ಕೂಲಿಗೆ ತೆರಳಲುವ ಪೋಷಕರು ಮನೆಯಲ್ಲಿ ಆಹಾರವನ್ನು ತಯಾರಿಸುವುದಿಲ್ಲ. ಮಕ್ಕಳು ಆಹಾರವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ನೀಡುವ ಫುಡ್ ಕಿಟ್ ಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಪೋಷಕರೊಬ್ಬರು ಹೇಳಿದ್ದಾರೆ.

English summary
More than a fortnight after schools opened to some classes, the government is yet to restart midday meals. This, despite the assurance of Primary and Secondary Education Minister S Suresh Kumar in this regard.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X