ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಮಾ ಬೇಡಿಯ 'ನೃತ್ಯ ಗ್ರಾಮ' ಶೀಘ್ರವೇ ಸರ್ಕಾರದ ಸುಪರ್ದಿಗೆ?

ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಪ್ರತಿಮಾ ಬೇಡಿ ನಿರ್ಮಿಸಿದ್ದ 'ನೃತ್ಯ ಗ್ರಾಮ' ದತ್ತು ಪಡೆಯಲು ರಾಜ್ಯ ಸರ್ಕಾರದ ನಿರ್ಧಾರ. ಸೋಮವಾರ ಅಂಗೀಕಾರವಾದ ಸಂಸ್ಕೃತಿ ಕುರಿತ ಶಿಫಾರಸುಗಳ ಮುಂದುವರಿದ ಭಾಗವಾಗಿ ಈ ಸಂಸ್ಥೆ ದತ್ತು ಪಡೆಯಲು ನಿರ್ಧಾರ. ಬೆಂಗಳ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ, ದಿವಂಗತ ಪ್ರತಿಮಾ ಬೇಡಿ ಅವರ ಕನಸಿನ ಕೂಸಾದ 'ನೃತ್ಯ ಗ್ರಾಮ'ವನ್ನು ಸರ್ಕಾರ ದತ್ತು ಪಡೆಯಲು ಮುಂದಾಗಿದೆ.

ಬೆಂಗಳೂರಿನ ಹೊರವಲಯದಲ್ಲಿರುವ 'ಹೆಸರುಘಟ್ಟ'ದಲ್ಲಿ 1990ರಲ್ಲಿ ಪ್ರತಿಮಾ ಬೇಡಿ ಅವರು, ನೃತ್ಯ ಗ್ರಾಮವನ್ನು ಕಟ್ಟಿದ್ದರು. ತನ್ನದೇ ಆದ ವಿಶಿಷ್ಠ ಬೋಧನಾ ಮಾದರಿಗಳಿಂದಾಗಿ ಇದು ದೇಶದ ಮೊಟ್ಟ ಮೊದಲ ಆಧುನಿಕ ಗುರುಕುಲ ಎಂದೂ ಹೆಸರು ಗಳಿಸಿತ್ತು. ಇದೇ ಗುರುಕುಲವನ್ನು ದತ್ತು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

PROTIMA BEDI’S NRITYAGRAM, WILL BE UNDERTAKEN BY STATE GOVERNMENT

ಮೂರು ವರ್ಷಗಳ ಹಿಂದೆ, ಹಿರಿಯ ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ನೀಡಿದ್ದ ಸಂಸ್ಕೃತಿ ಶಿಫಾರಸುಗಳನ್ನು ರಾಜ್ಯ ಸರ್ಕಾರ ಸೋಮವಾರ (ಆಗಸ್ಟ್ 7) ಅಂಗೀಕರಿಸಿದೆ. ಇದರ ಮುಂದುವರಿದ ಭಾಗವಾಗಿ, ನೃತ್ಯ ಗ್ರಾಮವನ್ನು ದತ್ತು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಆದರೆ, ಈ ನಿರ್ಧಾರಕ್ಕೆ ಕೆಲ ನೃತ್ಯ ಪಟುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ನೃತ್ಯಪಟು ಪ್ರತಿಭಾ ಪ್ರಹ್ಲಾದ್, ''ಈಗಾಗಲೇ ಸರ್ಕಾರಿ ಸ್ವಾಮ್ಯದ ರಂಗಮಂದಿರಗಳು ಹಾಗೂ ಸಭಾಂಗಣಗಳು ದುರವಸ್ಥೆಯಲ್ಲಿವೆ. ಅವುಗಳಿಗೆ ಮೊದಲು ಸರ್ಕಾರ ಕಾಯಕಲ್ಪ ನೀಡಲಿ. ನೃತ್ಯ ಗ್ರಾಮವನ್ನು ಸರ್ಕಾರ ದತ್ತು ಪಡೆಯುವುದು ಬೇಡ. ಅದಕ್ಕೆ ಬದಲಾಗಿ, ಸೂಕ್ತ ವ್ಯಕ್ತಿಗಳ ಆಡಳಿತ ಮಂಡಳಿಯೊಂದನ್ನು ರಚಿಸಿ, ಈ ನೃತ್ಯ ಗ್ರಾಮವನ್ನು ಖಾಸಗಿಯಾಗಿಯೇ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಲಿ'' ಎಂದಿದ್ದಾರೆ.

English summary
A new culture policy approved by the state cabinet on Aug 7, is pushing for the takeover of Nrityagram, a traditional dance school buit by Odissi dancer Protima Bedi in Hesaraghatta, on the outskirts of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X