ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಒಂದು ವಾರ ಶಿಕ್ಷಕರ ಸತ್ಯಾಗ್ರಹ

|
Google Oneindia Kannada News

ಬೆಂಗಳೂರು ಫೆಬ್ರವರಿ 18: ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಹಾಗೂ ರಾಷ್ಟ್ರದ ಎಲ್ಲಾ ರಾಜ್ಯಗಳ ಶಿಕ್ಷಕರ ಸಂಘಟನೆಗಳ ನೇತೃತ್ವದಲ್ಲಿ ಫೆ 21 ರಿಂದ 27 ರವರೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರ ಸರಣಿ ಸತ್ಯಾಗ್ರಹ ನಡೆಯಲಿದೆ.

ದೇಶದ ಶಿಕ್ಷಕರ ಸಾಮಾನ್ಯ ಸಮಸ್ಯೆಗಳನ್ನು ಇಟ್ಟುಕೊಂಡು ಹಾಗೂ ಕೇಂದ್ರ ಸರ್ಕಾರ ಕೂಡಲೇ ಈ ಬೇಡಿಕೆಗಳತ್ತಾ ಗಮನಹರಿಸಬೇಕೆಂದು ಒತ್ತಾಯಿಸಿ ಈ ನಿರಂತರ ಸರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಕೆ: ನಿಯಮದಲ್ಲಿ ಏನೇನಿದೆ?ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಕೆ: ನಿಯಮದಲ್ಲಿ ಏನೇನಿದೆ?

ಕೇಂದ್ರ ಸರ್ಕಾರ "ಒಂದೇ ದೇಶ ಒಂದೇ ತೆರಿಗೆ' ನೀತಿಯನ್ನು ಜಾರಿ ತಂದಿರುವಂತೆ "ಒಂದೇ ದೇಶ ಒಂದೇ ಪಿಂಚಣಿ' "ಒಂದೇ ದೇಶ ಒಂದೇ ರೀತಿಯ ವೇತನ' ಎಂಬ ನೀತಿಯನ್ನು ಜಾರಿಗೆ ತರಲು ಶಿಕ್ಷಕರು ಒತ್ತಾಯಿಸಿದ್ದಾರೆ.

Protest At Delhi By All India Teachers Association

ತಕ್ಷಣ ನೂತನ ಪಿಂಚಣಿಯನ್ನು ರದ್ದುಗೊಳಿಸಿ ಹಳೇ ಪಿಂಚಣಿಯನ್ನು ಜಾರಿಗೊಳಿಸುವುದು, ರಾಜ್ಯದ ಎಲ್ಲಾ ನೌಕರರಿಗೆ ಒಂದೇ ಮಾದರಿ ವೇತನವನ್ನು (ಕೇಂದ್ರ ಮಾದರಿ) ಜಾರಿಗೊಳಿಸುವುದು (ಸಮಾನ ಕೆಲಸಕ್ಕೆ ಸಮಾನ ವೇತನ), ಪ್ರಾಥಮಿಕ ಶಿಕ್ಷಣವನ್ನು ಸಶಕ್ತಿಕರಣಗೊಳಿಸುವುದು, 2019ರ ನೂತನ ಶಿಕ್ಷಣ ನೀತಿಯ 2018 ಸಮಗ್ರವಾಗಿ ಚರ್ಚಿಸಿ, ಅದನ್ನು ಸಂಪೂರ್ಣ ಶಿಕ್ಷಕ ಸ್ನೇಹಿ, ಶಿಕ್ಷಣ ನೀತಿಯಾಗಿ ಜಾರಿಗೊಳಿಸುವುದು, ಶಿಕ್ಷಕರ ನೇಮಕಾತಿ ನಿಯಮ ಹಾಗೂ ಅರ್ಹತಾ ಪರೀಕ್ಷೆಗಳನ್ನು ಸರಳೀಕರಣಗೊಳಿಸುವುದು ಶಿಕ್ಷಕರ ಪ್ರಮುಖ ಬೇಡಿಕೆಗಳಾಗಿವೆ.

English summary
Protest At Delhi On February 21 to 27. By All India Teachers Association. All India Teachers Submitting many Demands to Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X