ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಿಧಾನಸೌಧಕ್ಕೆ ಬನ್ನಿ, ಹಾರೆ, ಗುದ್ದಲಿ, ಪಿಕಾಸಿ ತನ್ನಿ'

|
Google Oneindia Kannada News

ಬೆಂಗಳೂರು, ಜುಲೈ 17: 'ವಿಧಾನಸೌಧಕ್ಕೆ ಬನ್ನಿ ಗುದ್ದಲಿ ಹಾರೆ ಪಿಕಾಸಿ' ಹೀಗೊಂದು ಕರೆ ನೀಡಿದ್ದಾರೆ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ.

ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಾ, ಕ್ಷೇತ್ರ ಬಿಟ್ಟು ಲಾಡ್ಜ್‌ಗಳಲ್ಲಿ ಕೂತಿರುವ ಶಾಸಕರು ವಿಧಾನಸೌಧದ ಒಳಕ್ಕೆ ಹೋಗದಂತೆ ತಡೆಯುವ ಸಲುವಾಗಿ ಇಂದು ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಳಿಗ್ಗೆ 10:30 ಕ್ಕೆ ಮೌರ್ಯ ವೃತ್ತದ ಬಳಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾಕಾರರು ಸಮಾವೇಶಗೊಳ್ಳಲಿದ್ದಾರೆ.

ವಿಧಾನಸೌಧದಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ, ಪೊಲೀಸರ ತಲೆದಂಡ ವಿಧಾನಸೌಧದಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ, ಪೊಲೀಸರ ತಲೆದಂಡ

ಅಲ್ಲಿಂದ ಹಾರೆ, ಗುದ್ದಲಿ, ಪಿಕಾಸಿಗಳನ್ನು ಹಿಡಿದು ವಿಧಾನಸೌಧದತ್ತ ತೆರಳಿ ಅಲ್ಲಿ, ವಿಧಾನಸೌಧದ ಗೇಟುಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವ ಗುರಿಯನ್ನು ಪ್ರತಿಭಟನಾಕಾರರು ಹಮ್ಮಿಕೊಂಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯುಳ್ಳವರು ಪ್ರತಿಭಟನೆಯಲ್ಲಿ ಭಾಗಿಯಾಗಿರೆಂದು ಕರೆ ನೀಡಿದ್ದಾರೆ ರವಿಕೃಷ್ಣಾ ರೆಡ್ಡಿ.

Protest against three party MLAs in front of Vidhan Soudha

ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಮೂರೂ ಪಕ್ಷದ ಶಾಸಕರ ವಿರುದ್ಧ ಗುದ್ದಲಿ-ಸಲಿಕೆ-ಹಾರೆ ಪ್ರತಿಭಟನೆ ನಡೆಸಲಾಗುತ್ತಿದ್ದು, 12:30 ರ ಸುಮಾರಿಗೆ ಪ್ರತಿಭಟನಾಕಾರರ ಗುಂಪು ವಿಧಾನಸೌಧ ಪ್ರವೇಶಿಸಲಿದೆ.

English summary
Karnataka Rashtra Samiti president Ravi Krishna Reddy called for a protest against three party MLAs who were in resort doing dirty politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X