ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟೀಲ್ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಅಕ್ಟೋಬರ್ 16ಕ್ಕೆ ಪ್ರತಿಭಟನೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಬಸವೇಶ್ವರ ವೃತ್ತದಿಂದ ಹೆಬ್ಭಾಳದವರೆಗೆ 1,791 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಟೀಲ್ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಅಕ್ಟೋಬರ್ 16ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಸ್ಟೀಲ್ ಫ್ಲೈ ಓವರ್ ನಿರ್ಮಾಣದ ವಿರುದ್ಧ ಭಾರಿ ಪ್ರತಿಭಟನೆಗೆ ಬೆಂಗಳೂರಿಗರು ಸಜ್ಜಾಗುತ್ತಿದ್ದಾರೆ. ಅಕ್ಟೋಬರ್ 16ರಂದು ಬೆಳಗ್ಗೆ 8ಕ್ಕೆ ಮಾನವ ಸರಪಳಿ ರಚಿಸಿ, ಯೋಜನೆಗೆ ವಿರೋಧ ವ್ಯಕ್ತಪಡಿಸಲಿದ್ದಾರೆ. ಬೆಳಗ್ಗೆ 8ರಿಂದ 11ರವರೆಗೆ ಏಕ ಕಾಲದಲ್ಲಿ ಚಾಲುಕ್ಯ ವೃತ್ತ, ಬಿಡಿಎ, ಕಾವೇರಿ ಚಿತ್ರಮಂದಿರ, ಮೇಖ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ.[ಸ್ಟೀಲ್ ಬ್ರಿಡ್ಜ್ ಗೆ ತಡೆ ನೀಡಲು ಹೈಕೋರ್ಟ್ ನಕಾರ]

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪ್ರಕಟವಾಗಿದ್ದು, ಅದಕ್ಕೆ ಕಾರಣಗಳನ್ನು ಸಹ ನೀಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ 812 ಪೂರ್ತಿಯಾಗಿ ಬೆಳೆದ, ದಶಕಗಳಷ್ಟು ಹಳೆಯ ಮರಗಳು ಯೋಜನೆಗೆ ಬಲಿಯಾಗುತ್ತವೆ.[ಸ್ಟೀಲ್ ಮೇಲ್ಸೇತುವೆ ಬೇಕೋ ಬೇಡವೋ, ಮತ ಹಾಕಿ]

steel flyover

ಪರಂಪರೆಯ ಭಾಗದಂತಿರುವ ಬಾಲಬ್ರೂಯಿ ವಸತಿ ಗೃಹದ ಕೆಲ ಭಾಗ ಕೂಡ ನಾಶವಾಗುತ್ತದೆ. ಈ ಮರಗಳಿಗೆ ಪರ್ಯಾಯವಾಗಿ ಹತ್ತರಷ್ಟು ಸಸಿಗಳನ್ನು ನೆಟ್ಟರೂ ಈಗಿನ ಪರಿಸರ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ.[ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]

ವಿಮಾನ ನಿಲ್ದಾಣಕ್ಕೆ ಹೋಗುವ ಏಳು ನಿಮಿಷದ ಸಮಯ ಉಳಿಸುವುದಕ್ಕೆ 1,791 ಕೋಟಿ ಖರ್ಚು ಮಾಡಬೇಕಾ? ಶೇ 1ಕ್ಕಿಂತ ಕಡಿಮೆ ಸಂಖ್ಯೆಯ ಬಳಕೆದಾರರ ಪ್ರಯೋಜನಕ್ಕಾಗಿ, ವರ್ಷದಲ್ಲಿ ಮೂರ್ನಾಲ್ಕು ಸಲವಷ್ಟೇ ವಿಮಾನ ನಿಲ್ದಾಣಕ್ಕೆ ಹೋಗುವವರಿಗಾಗಿ ಇಂಥ ಯೋಜನೆ ಬೇಕಾ?

6.7 ಕಿಲೋಮೀಟರ್ ವಿಸ್ತೀರ್ಣದ ಸೇತುವೆಗೆ ಪ್ರತಿ ಕಿ.ಮೀಗೆ 265 ಕೋಟಿ ಖರ್ಚಾಗುತ್ತದೆ. ಇದರ ಬದಲು ವಿಂಡ್ಸರ್ ಮ್ಯಾನರ್ ಹಾಗೂ ಕಾವೇರಿ ಬಳಿ ಎರಡು ಸೇತುವೆ ನಿರ್ಮಿಸಿದರೆ, ಐವತ್ತು ಕೋಟಿ ರುಪಾಯಿಯಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ ನಗರ ಯೋಜನಾ ತಜ್ಞರು.[ಯು ಟರ್ನ್ ಸಿನಿಮಾದ ಫ್ಲೈಓವರ್ ಗೆ ದುರಸ್ತಿ ಭಾಗ್ಯ]

ಸದ್ಯ ಏರ್ ಪೋರ್ಟ್ ಗೆ ಇರುವ ಎರಡು ಪರ್ಯಾಯ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ, ಮೆಟ್ರೋ ರೈಲು ವಿಸ್ತರಿಸಿ, ಅದಕ್ಕೆ ನಮ್ಮ ರೈಲು ಜೋಡಣೆ ಮಾಡಿದರೆ ತುಂಬ ಕಡಿಮೆ ಖರ್ಚಿನಲ್ಲಿ ಕೆಲಸ ಆಗಿಹೋಗುತ್ತೆ. ಈ ನಿರ್ಮಾಣದ ಯೋಜನೆ ಒಳಗೊಳಗೆ ಮಾಡಲಾಗಿದೆ. ಆರ್ ಟಿಐ ಅಡಿಯಲ್ಲಿ ಈ ಸೇತುವೆ ಹಾಗೂ ಯೋಜನೆ ಬಗ್ಗೆ ಮಾಹಿತಿ ಕೇಳಿದರೆ ಸಿಗುತ್ತಿಲ್ಲ. ನಗರ ಯೋಜನಾ ಸಮಿತಿಯಿಂದ ಈ ಯೋಜನೆ ಪ್ರಕ್ರಿಯೆಗೆ ಯಾವುದೇ ಒಪ್ಪಿಗೆ ಪಡೆದಿಲ್ಲ ಎಂದು ತಿಳಿಸಲಾಗಿದೆ.

ಯೋಜನೆ ವಿರುದ್ಧದ ಪ್ರತಿಭಟನೆಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಲಾಗಿದ್ದು, ಹೋರಾಟದಲ್ಲಿ ಪಾಲ್ಗೊಂಡು, ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಫೇಸ್ ಬುಕ್ ಪೇಜ್ ನೋಡಬಹುದು.

English summary
Protest call against steel flyover construction on October 16th. State government decided to construct a flyover from Basaveshwara circle to Hebbal in Banagalore at a cost of 1,791 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X