ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಬಂಧನ ವಿರೋಧಿಸಿ ನಾಳೆ (ಸೆ 11) ಭಾರೀ ಪ್ರತಿಭಟನೆ: ಪೊಲೀಸರು ಹೊರಡಿಸಿದ 15 ಕಟ್ಟಾಜ್ಞೆ

|
Google Oneindia Kannada News

ಬೆಂಗಳೂರು, ಸೆ 10: ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಯಲದ ಅಧಿಕಾರಿಗಳು ಬಂಧಿಸಿರುವುದನ್ನು ಪ್ರತಿಭಟಿಸಿ, ವಿವಿಧ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಬುಧವಾರ (ಸೆ 11) ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.

ಈ ಸಂಬಂಧ, ಬೆಂಗಳೂರು ಪೊಲೀಸರು, ಪ್ರತಿಭಟನಾಕಾರರಿಗೆ, ಮೆರವಣಿಗೆಯ ವೇಳೆ, ಶಾಂತಿ ಕಾಪಾಡುವಂತೆ ಸೂಚಿಸಿದ್ದು, ಅಹಿತಕರ ಘಟನೆ ನಡೆದಲ್ಲಿ, " ಅರ್ಜಿದಾರರೇ ಹೊಣೆಗಾರರು " ಎನ್ನುವ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದಾರೆ. ಪೊಲೀಸರು ನೀಡಿದ ಹದಿನೈದು ಸೂಚನೆ ಹೀಗಿದೆ:

ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೆ ಇ.ಡಿ ಸಮನ್ಸ್ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೆ ಇ.ಡಿ ಸಮನ್ಸ್

1. ಸಂಘಟಕರು ಅನುಮತಿ ನೀಡಲಾದ ವೇಳೆಗೆ ಹಾಗೂ ನಿಗದಿಪಡಿಸಿದ ಮಾರ್ಗಕ್ಕೆ ಬದ್ಧರಾಗಿರತಕ್ಕದ್ದು.
2. ಯಾವುದೇ ಕಾರಣಕ್ಕೂ ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.

ಡಿಕೆಶಿಗೆ ಸಂಕಷ್ಟ ತಂದ ಅರಮನೆ ಮೈದಾನದ ಜಮೀನು ಖರೀದಿಡಿಕೆಶಿಗೆ ಸಂಕಷ್ಟ ತಂದ ಅರಮನೆ ಮೈದಾನದ ಜಮೀನು ಖರೀದಿ

ಕೆರಳಿಸುವ ಘೋಷಣೆ ಅಥವಾ ಪ್ರಚೋದನಾಕಾರಿ ಹೇಳಿಕೆ

ಕೆರಳಿಸುವ ಘೋಷಣೆ ಅಥವಾ ಪ್ರಚೋದನಾಕಾರಿ ಹೇಳಿಕೆ

3. ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ, ಭಾಷಾವಾರು ಅಥವಾ ಸಾಂಸ್ಕೃತಿಕ ಗುಂಪುಗಳನ್ನು ಕೆರಳಿಸುವ ಘೋಷಣೆ ಅಥವಾ ಪ್ರಚೋದನಾಕಾರಿ ಹೇಳಿಕೆ ಇತ್ಯಾದಿಗಳನ್ನು ನೀಡಬಾರದು.

4. ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ-36 ಮತ್ತು 37 ರಲ್ಲಿ ಹೇಳಿರುವ ಅಂಶಗಳನ್ನು ಉಲ್ಲಂಘಿಸಬಾರದು.

5. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವಾಗ ಆ ಸ್ಥಳದಿಂದ ಹೊರಹೊಮ್ಮುವ ಧ್ವನಿಯು ಆ ಜಾಗದ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ನಿಗದಿಪಡಿಸಿದ ಶಬ್ದ ಮಟ್ಟಕ್ಕಿಂತ ಕೇವಲ 10 ಡಿಬಿ(ಎ) ನಷ್ಟು ಹೆಚ್ಚು ಅಥವಾ ಒಟ್ಟಾರೆಯಾಗಿ 75 ಡಿಬಿ(ಎ) ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಮೀರಬಾರದು.

ಅರ್ಜಿದಾರರೇ ಸಂಪೂರ್ಣ ಹೊಣೆಗಾರರಾಗುತ್ತಾರೆ

ಅರ್ಜಿದಾರರೇ ಸಂಪೂರ್ಣ ಹೊಣೆಗಾರರಾಗುತ್ತಾರೆ

6. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅರ್ಜಿದಾರರೇ ಸಂಪೂರ್ಣ ಹೊಣೆಗಾರರಾಗುತ್ತಾರೆ.

7. ಸಂಘಟಕರು ಕಾರ್ಯಕ್ರಮವನ್ನು ಸುವ್ಯವಸ್ಥೆ ರೀತಿಯಲ್ಲಿ ನಡೆಸಿಕೊಂಡು ಹೋಗುವುದು ಹಾಗೂ ಜವಾಬ್ದಾರಿಯುತ ಸದಸ್ಯರು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ, ಯಾವುದೇ ಅವಗಢ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು.

8. ಕಾರ್ಯಕ್ರಮವನ್ನು ಅನುಮತಿ ನೀಡಿರುವ ಸ್ಥಳದಲ್ಲಿ ನಡೆಸಬೇಕು. ರಸ್ತೆಗಿಳಿದು ರಸ್ತೆ ಬಂದ್ ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಬಾರದು.

ವಸ್ತುಗಳನ್ನು ಸುಟ್ಟುಹಾಕುವುದನ್ನು ಮಾಡಬಾರದು

ವಸ್ತುಗಳನ್ನು ಸುಟ್ಟುಹಾಕುವುದನ್ನು ಮಾಡಬಾರದು

9. ಕಾರ್ಯಕ್ರಮದ ಸಮಯದಲ್ಲಿ ಪಟಾಕಿ ಹಚ್ಚುವುದು, ಯಾವುದೇ ವಸ್ತುಗಳನ್ನು ಸುಟ್ಟುಹಾಕುವುದನ್ನು ಮಾಡಬಾರದು.

10. ಸ್ಥಳದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಸಂಚಾರ ಪೊಲೀಸರು ಸಾರ್ವಜನಿಕರ ಹಿತದೃಷ್ಟಿ ಹಾಗೂ ವಾಹನ ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ನೀಡುವ ಸೂಚನೆಗಳನ್ನು ಪಾಲಿಸತಕ್ಕದ್ದು.

11. ಕಾರ್ಯಕ್ರಮದ ಸಮಯದಲ್ಲಿ ಗಲಭೆಯಲ್ಲಿ ತೊಡಗಿ ಸಾರ್ವಜನಿಕರ ಆಸ್ತಿಪಾಸ್ತಿ, ಜೀವ ಹಾನಿ ಮಾಡಬಾರದು, ಮಾಡಿದವರ ಮೇಲೆ Prevention of Damage to Public Property Act 1984, (u/s 3) Karnataka Prevention of Destruction & Loss of Property Act 1981 {u/s 2(A) ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

ನಿಬಂಧನೆಗಳು ಅಥವಾ ಲೈಸೆನ್ಸ್

ನಿಬಂಧನೆಗಳು ಅಥವಾ ಲೈಸೆನ್ಸ್

12. ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸತಕ್ಕದ್ದು.

13. ಈ ಆದೇಶದ ಯಾವುದೇ ನಿಬಂಧನೆಗಳು ಅಥವಾ ಲೈಸೆನ್ಸ್ ಗಳಲ್ಲಿ ನಮೂದಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅನುಮತಿಯನ್ನು ರುದ್ದುಪಡಿಸಲಾಗುವುದು ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ. 103 ಇತರೆ ಸಂಬಂಧಪಟ್ಟ ಕಾನೂನು ಅಡಿಯಲ್ಲಿ ಸಂಘಟಕರನ್ನು ಅಭಿಯೋಗಗೊಳಿಸಲಾಗುವುದು.

ಯಾವುದೇ ಆಯುಧಗಳನ್ನು ತರುವಂತಿಲ್ಲ

ಯಾವುದೇ ಆಯುಧಗಳನ್ನು ತರುವಂತಿಲ್ಲ

14. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಆಯುಧಗಳನ್ನು ತರುವಂತಿಲ್ಲ.

15. ಪ್ರತಿಭಟನಾಕಾರರು ಬಲವಂತವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು, ಸಂಸ್ಥೆಗಳನ್ನು ಮುಚ್ಚಿಸುವಂತಿಲ್ಲ.

English summary
Protest Against Former Minister And Senior Congress Leader DK Shivakumar Arrest On September 11: Bengaluru Police Instructions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X