ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷದ ಅವ್ಯವಹಾರ: ಎಎಪಿ

|
Google Oneindia Kannada News

ಬೆಂಗಳೂರು, ಸೆ. 21: ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು ಸರಿಯಾದ ಕ್ರಮದಲ್ಲಿ ಸಂಗ್ರಹ ಮಾಡುವ ಅವಕಾಶವಿದ್ದರೂ ಸರಿಯಾಗಿ ಸಂಗ್ರಹ ಮಾಡುತ್ತಿಲ್ಲ., ಆಸ್ತಿ ತೆರಿಗೆ ಸಂಗ್ರಹ- ಪ್ರತಿ ವರ್ಷ ನಡೆಯುವ ಭಾರಿ ಅವ್ಯವಹಾರ ಎಂದದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಆಸ್ತಿ ತೆರಿಗೆ ಪಾವತಿ ಮಾಡದೇ ಇರುವವರ ಸ್ಥಿರಾಸ್ತಿ ಜಪ್ತಿಗೆ ಪ್ರಸ್ತಾವನೆ ಕಳುಹಿಸಿರುವ ಬಿಬಿಎಂಪಿ ನಡೆ ಸ್ವಾಗತಾರ್ . ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರಗಳಿಗೆ ಯಾವ ಕ್ರಮ ಕೈಗೊಳ್ಳುವಿರಿ. ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.

ಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ದರ ಹೆಚ್ಚಳ ಸಾಧ್ಯತೆ!ಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ದರ ಹೆಚ್ಚಳ ಸಾಧ್ಯತೆ!

ಪಾಲಿಕೆಯು ಈ ಹಿಂದೆ ನಡೆಸಿದ್ದ 104 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೆಯ (ಟಿಎಸ್‌ಎಸ್‌) ಸಮಗ್ರ ವರದಿಯ ಪ್ರಕಾರ ಅಧಿಕಾರಿಗಳ ತಪ್ಪು ಆದೇಶದಿಂದ ಪಾಲಿಕೆಗೆ ₹627 ಕೋಟಿ ನಷ್ಟ ಉಂಟಾಗಿದೆ ಎನ್ನುವ ವಿಚಾರ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿ, ಮರೆತೆ ಹೋಗಿದೆ. ಈ ವಿಚಾರವಾಗಿ ಏನು ಬೆಳವಣಿಗೆ ಆಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಉತ್ತರಿಸಬೇಕು.

ಮೊದಲು ಈ ನಷ್ಟವನ್ನು ವಸೂಲಿ ಮಾಡಿ

ಮೊದಲು ಈ ನಷ್ಟವನ್ನು ವಸೂಲಿ ಮಾಡಿ

ಮೊದಲು ಈ ನಷ್ಟವನ್ನು ವಸೂಲಿ ಮಾಡಿ ಹೊಸ ಪ್ರಸ್ತಾವನೆ ವಿಚಾರವಾಗಿ ಮುಂದುವರೆಯಬೇಕು. ಅಲ್ಲದೇ ಹಳೆ ನಿಯಮದ ಪ್ರಕಾರ ಚರಾಸ್ಥಿ ಜಪ್ತಿಗೆ ಅವಕಾಶವಿದೆ. ಈ 10 ವರ್ಷದಲ್ಲಿ ಅಕ್ರಮ ಎಸಗಿರುವವರ ಎಷ್ಟು ಚರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎನ್ನುವ ಲೆಕ್ಕವನ್ನು ಕೊಡಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ .

ಶೇ 20 ರಷ್ಟು ಹಣವೂ ಸಂಗ್ರಹವಾಗುತ್ತಿಲ್ಲ

ಶೇ 20 ರಷ್ಟು ಹಣವೂ ಸಂಗ್ರಹವಾಗುತ್ತಿಲ್ಲ

10 ಸಾವಿರ ಕೋಟಿ ಆದಾಯ ಇರುವ ಕಡೆ, ಪ್ರತಿ ವರ್ಷ ಶೇ 20 ರಷ್ಟು ಹಣವೂ ಸಂಗ್ರಹವಾಗುತ್ತಿಲ್ಲ. ಪ್ರತಿ ವರ್ಷ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಹಣ ಸಂಗ್ರಹಗೊಂಡು ಬಿಬಿಎಂಪಿಗೆ ನಷ್ಟವಾಗುತ್ತಿದೆ. ವಾಣಿಜ್ಯ ಕಟ್ಟಡಗಳನ್ನು ವಾಸವಿರುವ ಕಟ್ಟಡಗಳೆಂದು ತೋರಿಸಿ ಮೋಸ ಎಸಗಲಾಗುತ್ತಿದೆ. ಸರ್ಕಾರಕ್ಕೆ ಸೇರಬೇಕಾದ ಈ ಹಣ ಸ್ಥಳೀಯ ಪುಡಾರಿಗಳ, ರಾಜಕಾರಣಿಗಳ, ಅಧಿಕಾರಿಗಳ ಜೇಬು ಸೇರುತ್ತಿದೆ. ಈ ಅಕ್ರಮಕ್ಕೆ ಶಿಕ್ಷೆ ಏನು ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರೇ ತಿಳಿಸಬೇಕು.

ಮುಖ್ಯಮಂತ್ರಿ, ಕಂದಾಯ ಸಚಿವರೇ ಉತ್ತರಿಸಿ

ಮುಖ್ಯಮಂತ್ರಿ, ಕಂದಾಯ ಸಚಿವರೇ ಉತ್ತರಿಸಿ

ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ಗಳು , ಪ್ರಭಾವಿ ಸಾಫ್ಟ್‌ವೇರ್ ಕಂಪೆನಿಗಳು, ಇತರೆ ಸಂಸ್ಥೆಗಳು ಆಸ್ತಿ ತೆರಿಗೆ ವಂಚಿಸಿವೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇಟ್ಟು ಕೊಂಡಿರುವ ಮುಖ್ಯಮಂತ್ರಿಗಳ ಹಾಗೂ ಕಂದಾಯ ಸಚಿವರ ಹಸ್ತಕ್ಷೇಪವಿಲ್ಲದೇ ಈ ತೆರಿಗೆ ಕಳ್ಳತನ ನಡೆಯಲು ಸಾಧ್ಯವೇ?

Recommended Video

Chahal ಎಸೆತಕ್ಕೆ Sun Risers ತತ್ತರ!! | Oneindia Kannada
ಸ್ಥಿರಾಸ್ತಿ ಜಪ್ತಿ ಮಾಡಬಹುದು ಎನ್ನುವ ಪ್ರಸ್ತಾವನೆ

ಸ್ಥಿರಾಸ್ತಿ ಜಪ್ತಿ ಮಾಡಬಹುದು ಎನ್ನುವ ಪ್ರಸ್ತಾವನೆ

ಸ್ಥಿರಾಸ್ತಿ ಜಪ್ತಿ ಮಾಡಬಹುದು ಎನ್ನುವ ಪ್ರಸ್ತಾವನೆಯ ಜಾರಿಗೂ ಮೊದಲು ಅಕ್ರಮ ಎಸಗಿರುವವರಿಂದ ಎರಡು ಪಟ್ಟು ದಂಡ ವಸೂಲಿ ಮಾಡಿ ಮತ್ತು ಕಳೆದ 10 ವರ್ಷಗಳಲ್ಲಿ ಆಸ್ತಿ ತೆರಿಗೆ ಗುರುತಿಸುವ, ಸಂಗ್ರಹಿಸುವ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗೆ ಒಳಪಡಿಸಿ ಹಾಗೂ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಬಿಬಿಎಂಪಿ ಆಡಳಿತ ಅಧಿಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ಕರ್ನಾಟಕದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ ಹೇಳಿದರು.

English summary
Property tax- Every year scam in BBMP alleges Aam Aaadmi Party Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X