ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಮೂರ್ತಿ ಬಗ್ಗೆ ಏನಿದು ಇಂಥ ಪ್ರಮಾದ?

By ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

ಬೆಂಗಳೂರು, ಆ.22: ನಾಡಿನ ಹೆಮ್ಮೆಯ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಅವರು ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೆ ಅವರ ಆರೋಗ್ಯ ಕುರಿತಂತೆ ವದಂತಿಗಳು, ಸುಳ್ಳು ಸುದ್ದಿಗಳು ಹಬ್ಬುತ್ತಿರುವುದು ವಿಷಾದನೀಯ. ಫೇಸ್ ಬುಕ್ ನಲ್ಲಂತೂ ಅನಂತಮೂರ್ತಿ ಪರ ವಿರೋಧಿಗಳ ನಡುವೆ 'ಸ್ಟೇಟಸ್' ಸಮರ ಸಾಗಿದೆ. ಇದರ ನಡುವೆ ಡಿಡಿನ್ಯೂಸ್ ಹಾಗೂ ವಿಕಿಪೀಡಿಯ ದೊಡ್ಡ ಪ್ರಮಾದ ಮಾಡಿಬಿಟ್ಟಿವೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಪ್ರೊ. ಯು.ಆರ್ ಅನಂತಮೂರ್ತಿ ಅವರನ್ನು ಶುಕ್ರವಾರ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀರ್ಘಕಾಲದಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಅನಂತಮೂರ್ತಿ(82) ಅವರು ಬಳಲುತ್ತಿದ್ದರು ಎಂಬ ಸುದ್ದಿ ಹಬ್ಬುತ್ತಿದ್ದಂತೆ ಅನೇಕ ಮಂದಿ ಕಂಗಲಾಗಿ ಆಸ್ಪತ್ರೆಯತ್ತ ಧಾವಿಸಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಆರೋಗ್ಯದ ಬಗ್ಗೆ ಅಪ್ಡೇಟ್ ವಿಚಾರಿಸಿ ಪ್ರಶ್ನೆಗಳು ಬಂದವು. ಪರ ವಿರೋಧಿಗಳ ನಡುವೆ ಕೆಸರೆರೆಚಾಟವೂ ಆರಂಭವಾಯಿತು, ದುರಂತವೆಂದರೆ ಈ ಅಸಹ್ಯ ಇನ್ನೂ ನಿಂತಿಲ್ಲ.[ಯುಆರ್ ಎ ನೋಡಲು ಆಸ್ಪತ್ರೆಗೆ ಆಪ್ತರ ದಂಡು]

ಈ ನಡುವೆ ದೂರದರ್ಶನದ ಸುದ್ದಿವಾಹಿನಿ ತನ್ನ ಅಧಿಕೃತ ಟ್ವೀಟ್ ಐಡಿಯಿಂದ 'ಸಾಹಿತಿ ಯುಆರ್ ಅನಂತಮೂರ್ತಿ ಅವರು ನಿಧನರಾಗಿದ್ದಾರೆ' ಎಂದು ಟ್ವೀಟ್ ಮಾಡಿ ಪ್ರಮಾದ ಎಸಗಿತು.

ಬಹುಶಃ ಇದನ್ನು ನೋಡಿಕೊಂಡೋ ಏನೋ ವಿಕಿಪೀಡಿಯಾದ ಇಂಗ್ಲೀಷ್ ಆವೃತ್ತಿ ಅವರು ಕೂಡಾ 22 ಆಗಸ್ಟ್ 2014ರಂದು ಯುಆರ್ ಎ ಮೃತರಾದರು ಎಂದು ಪೇಜ್ ಅಪ್ದೇಟ್ ಮಾಡಿಬಿಟ್ಟರು. ಮಲೆಯಾಳಂ ನ್ಯೂಸ್ ಚಾನೆಲ್, ಪಿಟಿಐ ಸುದ್ದಿ ಫೀಡ್ ನಂಬಿಕೊಂಡು ಕೆಲ ವೆಬ್ ಪತ್ರಿಕೆಗಳು ಇದೇ ಹಾದಿ ಹಿಡಿದವು, ಡಿಡಿನ್ಯೂಸ್ ಕ್ಷಮೆಯಾಚಿಸಿತು. ಟ್ವೀಟ್ ಗಳ ಸಂಗ್ರಹ ಮುಂದೆ ಓದಿ...

ವಿಕಿಪೀಡಿಯಾದಲ್ಲಿ ಆದ ಪ್ರಮಾದಕ್ಕೆ ಸಾಕ್ಷಿ

ವಿಕಿಪೀಡಿಯಾದಲ್ಲಿ ಆದ ಪ್ರಮಾದಕ್ಕೆ ಸಾಕ್ಷಿ

ವಿಕಿಪೀಡಿಯಾದಲ್ಲಿ ಆದ ಪ್ರಮಾದಕ್ಕೆ ಸಾಕ್ಷಿ ಒದಗಿಸಿದ ಸಾರ್ವಜನಿಕರು. ನಂತರ ತಪ್ಪು ತಿದ್ದಿಕೊಂಡ ವಿಕಿಪೀಡಿಯ ಪುಟವನ್ನು ಸರಿಪಡಿಸಿದೆ. ಆದರೆ, ತಪ್ಪಿಗೆ ಕ್ಷಮೆಯಾಚಿಸಿದ್ದರ ಬಗ್ಗೆ ಎಲ್ಲೂ ಏನು ಬಂದಿಲ್ಲ.

ಚಿತ್ರಕರ್ಮಿ ಮನೋಹರ್ ಪ್ರಸಾದ್ ಪ್ರಶ್ನೆ

ಚಿತ್ರಕರ್ಮಿ ಮನೋಹರ್ ಪ್ರಸಾದ್ ಪ್ರಶ್ನೆ

ಚಿತ್ರಕರ್ಮಿ ಮನೋಹರ್ ಪ್ರಸಾದ್ ಅವರು ಫೇಸ್ ಬುಕ್ ನಲ್ಲಿ ಪ್ರಶ್ನೆ ಎತ್ತಿದ್ದು ಹೀಗೆHow can Wikipedia do this mistake? Who is handling the page? Ananthmurthy is still alive. He is critical though. But Wikipedia has already mentioned that he has passed away.

ಡಿಡಿ ನ್ಯೂಸ್ ನಿಂದ ಕ್ಷಮೆಯಾಚನೆ

ದೂರದರ್ಶನದ ನ್ಯೂಸ್ ಟ್ವಿಟ್ಟರ್ ಖಾತೆಯಿಂದ ಕ್ಷಮೆಯಾಚನೆ

ತಪ್ಪು ಮಾಹಿತಿ ನೀಡಿದವರಿಂದ ಟ್ವೀಟ್

ದೂರದರ್ಶನದ ನ್ಯೂಸ್ ಟ್ವಿಟ್ಟರ್ ಖಾತೆಯಿಂದ ಕ್ಷಮೆಯಾಚನೆ

ಸಂಪಾದಕ ವಿಶ್ವೇಶ್ವರ್ ಭಟ್ ಅವರಿಂದ ಟ್ವೀಟ್

ಸಂಪಾದಕ ವಿಶ್ವೇಶ್ವರ್ ಭಟ್ ಅವರಿಂದ ಟ್ವೀಟ್ ಮಾಡಿ ಶುಭ ಹಾರೈಕೆ

English summary
A hoax news spread about Dr. UR Ananthamurthy's health condition today after DDNews tweet which read that he passed away. Later Wikiepedia page about him also edited with the wrong information. Hoax messages did irked URA's fans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X