ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೇಷಾದ್ರಿಪುರಂನಲ್ಲಿ ಮಾಧ್ಯಮ ಗ್ರಂಥಾಲಯ ಉದ್ಘಾಟನೆ

|
Google Oneindia Kannada News

ಬೆಂಗಳೂರು, ಮೇ 9 : ಪ್ರೊ.ಬಿ.ಎ. ಶ್ರೀಧರ ಅವರ ಪುಸ್ತಗಳ ಸಂಗ್ರಹಗಳನ್ನು ಒಳಗೊಂಡ 'ಪ್ರೊ. ಬಿಎ ಶ್ರೀಧರ ಮಾಧ್ಯಮ ಗ್ರಂಥಾಲಯವನ್ನು' ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಶುಕ್ರವಾರ ಶೇಷಾದ್ರಿಪುರಂನಲ್ಲಿ ಉದ್ಘಾಟಿಸಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳು ಓದುವುದನ್ನು ಕಡಿಮೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಕಟ್ಟೆ ಸತ್ಯನಾರಾಯಣ ಅವರು, ಎ.ಜಿ ರಾಘವೇಂದ್ರಗೌಡ ಅವರು ಆರಂಭಿಸಿರುವ ಮಾಧ್ಯಮ ಗ್ರಂಥಾಲಯ ಇಂದಿನ ದಿನಗಳಲ್ಲಿ ಒಂದು ಅರ್ಥಪೂರ್ಣವಾದ ಪ್ರಯತ್ನವಾಗಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಮುಖ್ಯಸ್ಥರಾಗಿ, ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ಹಾಗೂ ಲೇಖಕರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಪ್ರೊ.ಬಿ.ಎ. ಶ್ರೀಧರ ಅವರ ಪುಸ್ತಗಳ ಸಂಗ್ರಹಗಳನ್ನು ಒಳಗೊಂಡ ಪ್ರೊ. ಬಿಎ ಶ್ರೀಧರ ಮಾಧ್ಯಮ ಗ್ರಂಥಾಲಯವನ್ನು ಎ.ಜಿ.ರಾಘವೇಂದ್ರಗೌಡ ಆರಂಭಿಸಿದ್ದಾರೆ.

ಶೇಷಾದ್ರಿಪುರಂ ಶಿಕ್ಷಣ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ ಕೃಷ್ಣ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್, ಲೇಖಕ ಡಾ.ಕೆ.ಪುಟ್ಟಸ್ವಾಮಿ, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ಪ್ರೊ. ಬಿ.ಎ ಶ್ರೀಧರ ಅವರ ಪತ್ನಿ ರಮಾ ಶ್ರೀಧರ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ ಎ ಪೊನ್ನಪ್ಪ, ಕುವೆಂಪು ವಿ.ವಿ ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪೂರ್ಣಾನಂದ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರಗಳಲ್ಲಿ ನೋಡಿ ಗ್ರಂಥಾಲಯ ಉದ್ಘಾಟನೆ

ಶೇಷಾದ್ರಿಪುರಂನಲ್ಲಿ ಗ್ರಂಥಾಲಯ ಉದ್ಘಾಟನೆ

ಶೇಷಾದ್ರಿಪುರಂನಲ್ಲಿ ಗ್ರಂಥಾಲಯ ಉದ್ಘಾಟನೆ

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಮುಖ್ಯಸ್ಥರಾಗಿ, ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ಹಾಗೂ ಲೇಖಕರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಪ್ರೊ.ಬಿ.ಎ. ಶ್ರೀಧರ ಅವರ ಪುಸ್ತಗಳ ಸಂಗ್ರಹಗಳನ್ನು ಒಳಗೊಂಡ ಪ್ರೊ. ಬಿಎ ಶ್ರೀಧರ ಮಾಧ್ಯಮ ಗ್ರಂಥಾಲಯವನ್ನು ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಉದ್ಘಾಟಿಸಿದರು.

ಗ್ರಂಥಾಲಯ ಸ್ಥಾಪನೆ ಶ್ಲಾಘನೀಯ

ಗ್ರಂಥಾಲಯ ಸ್ಥಾಪನೆ ಶ್ಲಾಘನೀಯ

ಸಮಾರಂಭದಲ್ಲಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಪತ್ರಿಕೋದ್ಯಮದ ಬಗ್ಗೆ ಸಾಕಷ್ಟು ಅಗಾಧ ಜ್ಞಾನವನ್ನು ಸಂಪಾದಿಸಿದಂತಹ ಪ್ರೊ. ಬಿಎ ಶ್ರೀಧರ ಅವರ ಹೆಸರಿನಲ್ಲಿ ಈ ಒಂದು ಗ್ರಂಥಾಲಯ ಸ್ಥಾಪನೆ ಆಗುತ್ತಿರುವುದು ಶ್ಲಾಘನೀಯ. ಇಂದಿನ ದಿನಗಳಲ್ಲಿ ಹೊಸ ಆಲೋಚನೆಗಳು ಮತ್ತು ಚಟುವಟಿಕೆಗಳಲ್ಲಿ ತೊಡಗುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ

ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ

ಲೇಖಕ ಡಾ. ಕೆ ಪುಟ್ಟಸ್ವಾಮಿ ಮಾತನಾಡಿ, ಶ್ರೀಧರ ಅವರ ಸಂಪರ್ಕಕ್ಕೆ ನಾನು ತಡವಾಗಿ ಬಂದರೂ ಅವರೊಂದಿಗಿನ ಅಲ್ಪ ಅವಧಿಯ ಒಡನಾಟ ಸಾಕಷ್ಟು ಕಲಿಸಿದೆ. ಅವರ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಳೆದಿದ್ದಾರೆ ಎಂದರು.

ಶ್ರೀಧರ ಅವರ ನಂದಾದೀಪ

ಶ್ರೀಧರ ಅವರ ನಂದಾದೀಪ

ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಿ.ಎ ಶ್ರೀಧರ ಅವರು ಒಂದು ನಂದಾದೀಪ ಎಂದು ಹೇಳಬೇಕು. ನಗರದ ವಿದ್ಯಾರ್ಥಿಗಳ ಮುಂದೆ ಕೀಳಿರಿಮೆ ಅನುಭವಿಸುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಬಿ.ಎ ಶ್ರೀಧರ ಮಾಧ್ಯಮ ಗ್ರಂಥಾಲಯದ ಬಗ್ಗೆ

ಬಿ.ಎ ಶ್ರೀಧರ ಮಾಧ್ಯಮ ಗ್ರಂಥಾಲಯದ ಬಗ್ಗೆ

ಇಂಜಿನಿಯರ್, ಡಾಕ್ಟರ್, ಸಿ.ಎ ಹೀಗೆ ವಿವಿಧ ವೃತ್ತಿಯಲ್ಲಿ ಕಾರ್ಯನಿರ್ವಹಿಸುವವರು ಒಂದು ನಿರ್ದಿಷ್ಟ ವಿಷಯದಲ್ಲಿ ಪರಿಣಿತಿ ಮತ್ತು ಜ್ಞಾನವನ್ನು ಹೊಂದಿದ್ದರೆ ಸಾಕು. ಆದರೆ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿರುವ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು, ನಿರ್ಧಿಷ್ಟವಲ್ಲ ಬದಲಾಗಿ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಾಗಿಯೇ ಮಾಧ್ಯಮ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದೆ.

English summary
The Bruhat Bangalore Mahanagara Palike mayor Katte Satyanarayana inaugurated ‘PROF B.A SHRIDHARA MEDIA LIBRARY’ at Sheshadripuram Bangalore on Friday, May 9. Kuvempu university Journalism & Communication Department HOD Poornananda, writer Dr. K Puttaswamy, ETV Kannada news Editor G N Mohan were present on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X