ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್ ಪಾರ್ಥಿವ ಶರೀರದ ಅಂತಿಮಯಾತ್ರೆ ಎಲ್ಲೆಲ್ಲಿ ಸಾಗುತ್ತೆ?

|
Google Oneindia Kannada News

ಬೆಂಗಳೂರು, ನವೆಂಬರ್ 26: ನಟ, ಮಾಜಿ ಸಚಿವ ಅಂಬರೀಶ್ ಅವರು ನವೆಂಬರ್ 24ರಂದು ನಿಧನರಾಗಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ.

ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭದ್ರತೆಗೆ 15 ಸಾವಿರ ಪೊಲೀಸ್ ನಿಯೋಜನೆ ಮಾಡಲಾಗಿದೆ.

ರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರ

ಮೆರವಣಿಗೆ ಸಾಗುವ 13ಕಿ.ಮೀ ಉದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಗ್ರತಾ ಕ್ರಮ ಕೈಗೊಳ್ಳಲಾಗಿದೆ. ಭದ್ರತೆಗೆ ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, ನಾಲ್ಕು ಸಾವಿರ ಡಿಸಿಪಿಗಳು, 11 ಸಾವಿರ ಕಾನೂನು ಸುವ್ಯವಸ್ಥೆ ಪೊಲೀಸರು ನಿಯೋಜನೆಗೊಳಿಸಿದ್ದಾರೆ.

In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ

Procession of remains mortal of Ambareesh from Katirava stadium to studio

ಅಂತಿಮ ಯಾತ್ರೆ ಸಾಗುವ ಮಾರ್ಗ: ಹಡ್ಸನ್ ವೃತ್ತ, ಕೆಜಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಸಿಐಡಿ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಠಾಣೆ ಜಂಕ್ಷನ್, ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಭಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಾರಮ್ಮ ವೃತ್ತ, ಬಿಎಚ್‌ಇಎಲ್, ಯಶವಂತಪುರ ಮೇಲ್ಸೇತುವೆ, ಮೆಟ್ರೋ ನಿಲ್ದಾಣ ಬಲಭಾಗದ ತಿರುವು, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ, ಗುರಗುಂಟೆಪಾಳ್ಯ ಜಂಕ್ಷನ್ ಎಡ ತಿರುವು, ಸಿಎಂಟಿಐ, ಎಫ್‌ಟಿಐ ಮೂಲಕ ಕಂಠೀರವ ಸ್ಟುಡಿಯೋ ತಲುಪಲಿದೆ.

ತುಳುನಾಡಿನ ಮೊದಲ ಕಂಬಳದಲ್ಲಿ ಅಂಬರೀಶ್ ಗೆ ಶ್ರದ್ಧಾಂಜಲಿ ತುಳುನಾಡಿನ ಮೊದಲ ಕಂಬಳದಲ್ಲಿ ಅಂಬರೀಶ್ ಗೆ ಶ್ರದ್ಧಾಂಜಲಿ

ಸಂಚಾರ ಮಾರ್ಗ ಬದಲಾವಣೆ: ಹೊರ ವರ್ತುಲ ರಸ್ತೆ ಸುಮ್ಮನಹಳ್ಳಿ ಜಂಕ್ಷನ್‌ನಿಂದ ಗೊರಗುಂಟೆ ಪಾಳ್ಯದ ಕಡೆಗೆ ಹಾದು ಹೋಗುವ ಭಾರಿ ವಾಹನಗಳು ಮಾಗಡಿ ರಸ್ತೆ, ಹೌಸಿಂಗ್ ಬೋರ್ಡ್, ಮಾಗಡಿ ರಸ್ತೆ, ಟೋಲ್‌ಗೇಟ್ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಸಂಚರಿಸಬಹುದು.

In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ

ತುಮಕೂರು ರಸ್ತೆ ಗೊರಗುಂಟೆಪಾಳ್ಯ, ಎಂಇಐ ಜಂಕ್ಷನ್, ಆರ್‌ಎಂಸಿ ಯಾರ್ಡ್, ಮಾರಪ್ಪನಪಾಳ್ಯ, ಸಯಾಮಡಲ್‌ವುಡ್ ಫ್ಯಾಕ್ಟರಿ ವೃತ್ತ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಹೋಗಬಹುದು.

ಮೇಖ್ರಿ ವೃತ್ತ-ಸಿವಿ ರಾಮನ್ ರಸ್ತೆ, ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಬಲತಿರುವುದು, ಕುವೆಂಪು ವೃತ್ತ ಎಡತಿರುವು ಪಡೆದು ಬಿಇಎಲ್ ವೃತ್ತ ಬಲತಿರುವು, ಗಂಗಮ್ಮ ವೃತ್ತ ಎಡ ತಿರುವು ಪಡೆದು ತುಮಕೂರು ರಸ್ತೆ ತಲುಪಬಹುದು.

English summary
The procession of remains mortal of Ambareesh will be proceed around 13 kms from Kathirava stadium to studio via Basaveshwar circle, Kaveri junction and Yashwantur fly over on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X