ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹರಕೆಯ ಕುರಿ ಬೇರೆಯವರೇ ಆಗಬೇಕಲ್ಲವೇ?' ಪ್ರಿಯಾಂಕಾಗೆ ಸುರೇಶ್ ಟಾಂಗ್

|
Google Oneindia Kannada News

ಬೆಂಗಳೂರು, ಏಪ್ರಿಲ್ 25: "ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರ ವಿರುದ್ಧ ಕಣಕ್ಕಿಳಿಸದಿರುವುದು ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಏಕೈಕ ಬುದ್ಧಿವಂತ ನಿರ್ಧಾರ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಟ್ವೀಟಿಸಿದ್ದಾರೆ.

ವಾರಣಾಸಿಯಲ್ಲಿ ಬಿಜೆಪಿಯ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಿತ್ತು. ತಾವು ಮೋದಿ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದು ಪ್ರಿಯಾಂಕಾ ಗಾಂಧಿ ಸಹ ಹೇಳಿದ್ದರು. ಆದರೆ ಕಾಂಗ್ರೆಸ್ ಕಳೆದ ಬಾರಿಯೂ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಅಜಯ್ ರೈ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಗುರುವಾರ ಅಧಿಕೃತವಾಗಿ ಘೋಷಿಸಿದೆ.

ವಾರಣಾಸಿಯಲ್ಲಿ ಕೊನೇ ಕ್ಷಣದ ಆಘಾತ? ಅಡಕತ್ತರಿಯಲ್ಲಿ ಮೋದಿ?ವಾರಣಾಸಿಯಲ್ಲಿ ಕೊನೇ ಕ್ಷಣದ ಆಘಾತ? ಅಡಕತ್ತರಿಯಲ್ಲಿ ಮೋದಿ?

ಈ ಬೆಳವಣಿಗೆಯ ನಂತರ, 'ವಾರಣಾಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು?' ಎಂಬ ಅತ್ಯಂತ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಜಾಣ ನಡೆ

ಮೊದಲ ಕುಟುಂಬಕ್ಕೆ ಬಹಳ ಬುದ್ಧಿವಂತಿಕೆ ಇದೆ. ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರಾ ರವರನ್ನು ನಿಲ್ಲಿಸುತ್ತಿಲ್ಲ. ಹರಕೆಯ ಕುರಿ ಬೇರೆಯವರೇ ಆಗಬೇಕಲ್ಲವೇ? - ಸುರೇಶ್ ಕುಮಾರ್

ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ಕಾರಣವೇನು?ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ಕಾರಣವೇನು?

ಬುದ್ಧಿವಂತ ತೀರ್ಮಾನ

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಏಕೈಕ ಬುದ್ದಿವಂತ ತೀರ್ಮಾನವೆಂದರೆ ವಾರಣಾಸಿಯಲ್ಲಿ ಪ್ರಿಯಾಂಕ ವಾದ್ರಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡದಿರುವುದು! - ಸುರೇಶ್ ಕುಮಾರ್

ಶರಣಾದರು!

ಶರಣಾದರು, ಅಜಯ್ ರೈ ಅವರನ್ನು ವಾರಣಾಸಿಯಲ್ಲಿ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ತಮ್ಮ ಸೋಲನ್ನು ಒಪ್ಪಿಕೊಂಡಿತು. 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಸ್ಪರ್ಧೆ ಮುಗಿಯಿತು, ಇದರಲ್ಲಿ ಗೆದ್ದಿದ್ದಿ ಶಾ ಮತ್ತು ಮೋದಿ- ಮೇ. ಸುರೇಂದ್ರ ಪೂನಿಯಾ

ಇಷ್ಟೆಲ್ಲ ನಾಟಕ ಯಾಕೆ ಬೇಕಿತ್ತು?

ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧಿಸೋಲ್ಲ ಎಂದಾದರೆ ಇಷ್ಟು ದಿನ ವದಂತಿ ಹಬ್ಬಿಸೋದು ಯಾಕೆ ಬೇಕಿತ್ತು. ಇದರಿಂದ ಕಾಂಗ್ರೆಸ್ ಗೆ ಸಿಕ್ಕ ಲಾಭವಾದರೂ ಏನು? ಕಾಮಗ್ರೆಸ್ ಗೆ ಮೋದಿ ವಿರುದ್ಧ ಸೆಣಸುವ ಧೈರ್ಯವಿಲ್ಲ ಎಂದು ಬಿಜೆಪಿ ಹೇಳುವುದಿಲ್ಲವೇ? ಕಾಂಗ್ರೆಸ್ಸಿಗೆ ನಿಜಕ್ಕೂ ನೆರವಿನ ಅಗತ್ಯವಿದೆ- ಸುಮಂತ್ ರಮಣ್

English summary
Priyanka Gandhi Vadra is not contesting from Varanasi MLA leader Suresh Kumar calls it an intelligent move!,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X