ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಖಾಸಗಿ ಶಾಲೆಗಳ ಶಾಲಾ ಶುಲ್ಕ ಪಾವತಿ ಮಾಡುವ ವಿಚಾರದಲ್ಲಿ ಪೋಷಕರಿಗೆ ಬಲವಂತ ಮಾಡುವಾಗಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಭೀತಿ ನಡುವೆ ಇಡೀ ಭಾರತ ಲಾಕ್‌ಡೌನ್ ಆಗಿದೆ. ಬಹುಪಾಲು ಮಂದಿ ಕೆಲಸವಿಲ್ಲದೆ, ಆದಾಯವಿಲ್ಲದೆ ಕಂಗಾಲಾಗಿದ್ದಾರೆ. ಆದರೆ, ಇಂತಹ ಕಷ್ಟದ ಸಮಯದಲ್ಲಿಯೂ ಕೆಲವು ಖಾಸಗಿ ಶಾಲೆಗಳು ಈಗಲೇ ಶುಲ್ಕ ಪಡೆಯುತ್ತಿವೆ. ಈ ಬಗ್ಗೆ ಅನೇಕ ಪೋಷಕರು ಆರೋಪ ಮಾಡಿದ್ದರು. ಹೀಗಾಗಿ ಸರ್ಕಾರ ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿ ಬಗ್ಗೆ ಸೂಚನೆ ನೀಡಿದೆ.

ಶಾಲಾ ಶುಲ್ಕ ವಿಚಾರದಲ್ಲಿ ಖಾಸಗಿ ಶಾಲೆಗೆ ತಮಿಳುನಾಡು ಸರ್ಕಾರ ಎಚ್ಚರಿಕೆ ಶಾಲಾ ಶುಲ್ಕ ವಿಚಾರದಲ್ಲಿ ಖಾಸಗಿ ಶಾಲೆಗೆ ತಮಿಳುನಾಡು ಸರ್ಕಾರ ಎಚ್ಚರಿಕೆ

ದೆಹಲಿ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಗಳ ನಂತರ ಕರ್ನಾಟಕ ಸರ್ಕಾರ ಕೂಡ ಖಾಸಗಿ ಶಾಲೆಗಳು ಬೋಧನಾ ಶುಲ್ಕ ಪಡೆಯುವ ಬಗ್ಗೆ ಆದೇಶ ನೀಡಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ವಿವರ ನೀಡಿದ್ದಾರೆ.

ಪೋಷಕರ ಮೇಲೆ ಒತ್ತಡ ಹೇರುವಂತಿಲ್ಲ

ಪೋಷಕರ ಮೇಲೆ ಒತ್ತಡ ಹೇರುವಂತಿಲ್ಲ

''ಯಾವ ಪೋಷಕರು, ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮಕ್ಕೆ ನಾವು ಮುಂದಾಗುತ್ತೇವೆ. ಇದನ್ನು ಎಲ್ಲ ಖಾಸಗಿ ಶಾಲೆಗಳೂ ಗಮನದಲ್ಲಿಟ್ಟುಕೊಳ್ಳಬೇಕು.'' ಎಂದು ಸುರೇಶ್ ಕುಮಾರ್ ಪ್ರಕಟಣೆಯ ಮೂಲಕ ಸ್ಪಷ್ಟವಾಗಿ ತಿಳಿಸಿದ್ದಾರೆ.

ಸ್ವಯಂಪ್ರೇರಿತರಾಗಿ ನೀಡಿದರೆ ಪಡೆಯಬಹುದು

ಸ್ವಯಂಪ್ರೇರಿತರಾಗಿ ನೀಡಿದರೆ ಪಡೆಯಬಹುದು

''ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನ ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ, ಬಾಕಿ ಪಾವತಿಸಲು ಶಕ್ತರಿದ್ದಾರೋ, ಯಾವ ಫೋಷಕರು ತಮ್ಮ ಮಕ್ಕಳ ಶಾಲೆಯ ಉಳಿವಿನ ಬಗ್ಗೆ ಆಲೋಚಿಸಿ ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಅವರು ಇಚ್ಚಿಸುವ ಸಂಖ್ಯೆಯ ಕಂತುಗಳಲ್ಲಿ ಶಿಕ್ಷಣ ಕಾಯ್ದೆಯ ಅವಕಾಶಗಳಡಿಯಲ್ಲಿ ಶುಲ್ಕ ವಸೂಲಾತಿಗೆ ಶಾಲೆಗಳಿಗೆ ಅವಕಾಶ ನೀಡಬಹುದು.'' ಎಂದು ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಶಿಕ್ಷಕರ ವೇತನಕ್ಕೆ ಮೊದಲ ಆದ್ಯತೆ

ಶಿಕ್ಷಕರ ವೇತನಕ್ಕೆ ಮೊದಲ ಆದ್ಯತೆ

''ಪೋಷಕರು ನೀಡುವ ಹಣವನ್ನು ಖಾಸಗಿ ಶಾಲೆಗಳು ಕೆಲಸ ಮಾಡುವ ಶಿಕ್ಷಕರು ಹಾಗೂ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು'' ಎಂದು ಸರ್ಕಾರ ತಿಳಿಸಿದೆ. ಶುಲ್ಕ ಪಾವತಿಯ ಮೇಲೆ ನಿಯಮಗಳನ್ನು ಹಾಕಿದ್ದು, ವೇತನ ತಡೆಗೆ ಅದೇ ಕಾರಣ ನೀಡಬಹುದು ಎಂದು ಉಹಿಸಿ ಈ ಸೂಚನೆ ಕೊಟ್ಟಿದೆ.

ದೆಹಲಿ ಹಾಗೂ ತಮಿಳುನಾಡು ಸರ್ಕಾರಗಳ ನಿಯಮ

ದೆಹಲಿ ಹಾಗೂ ತಮಿಳುನಾಡು ಸರ್ಕಾರಗಳ ನಿಯಮ

ದೆಹಲಿ ಹಾಗೂ ತಮಿಳುನಾಡು ಸರ್ಕಾರಗಳು ಸಹ ಖಾಸಗಿ ಶಾಲೆಗಳಿಗೆ ಇದೇ ರೀತಿಯ ಸೂಚನೆ ನೀಡಿವೆ. ದೆಹಲಿ ಸರ್ಕಾರ ಲಾಕ್‌ಡೌನ್ ಸಮಯವನ್ನು ಬಳಸಿಕೊಂಡು, ಖಾಸಗಿ ಶಾಲೆಗಳು ಬೋಧನಾ ಶುಲ್ಕುವನ್ನು ಹೆಚ್ಚು ಮಾಡುವಂತಿಲ್ಲ. ವಾಹನ ಶುಲ್ಕ, ಕಟ್ಟಡ ಶುಲ್ಕ, ವಾರ್ಷಿಕ ಶುಲ್ಕ ಹೀಗೆ ಯಾವುದೇ ರೀತಿಯ ಹಣ ಪಡೆಯಬಾರದು ಎಂದು ತಿಳಿಸಿದೆ. ಅಲ್ಲದೆ ಶುಲ್ಕ ಪಾವತಿ ಮಾಡಲು ಆಗದ ವಿದ್ಯಾರ್ಥಿಗಳನ್ನು ಆನ್‌ಲೈನ್ ಕ್ಲಾಸ್‌ಗಳಿಂದ ದೂರ ಇಡುವ ಹಾಗಿಲ್ಲ ಎಂದು ಹೇಳಿದೆ.

English summary
Private schools cannot force fees during lockdown insists Karnataka government as the government has been receiving complaints from parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X