ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆ(ಡಿ15) ಅಲ್ಪ ಸಂಖ್ಯಾತ ಖಾಸಗಿ ಶಾಲಾ ಶಿಕ್ಷಕರಿಂದ ಮುಷ್ಕರ ಆರಂಭ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 14 : ಸಾರಿಗೆ ನೌಕರರ ಮುಷ್ಕರದ ನಡುವೆ ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳು ಹೋರಾಟಕ್ಕೆ ಸಜ್ಜಾಗಿವೆ. ಡಿಸೆಂಬರ್ 16 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಕ್ಯಾಮ್ಸ್ ನೇತೃತ್ವದಲ್ಲಿ ಖಾಸಗಿ ಶಾಲಾ ಶಿಕ್ಷಕರು ಹೋರಾಟಕ್ಕೆ ಇಳಿಯಲಿದ್ದಾರೆ. ಇದಕ್ಕೂ ಮೊದಲೇ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಮಾಡಲು ಕರ್ನಾಟಕ ಅನುದಾನ ರಹಿತ ಅಲ್ಪ ಸಂಖ್ಯಾತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ ಸಂಘಟನೆ ಮುಂದಾಗಿದೆ. ಶಾಲೆ ಕಾರ್ಯಾರಂಭಕ್ಕೆ ಒತ್ತಾಯಿಸಿ ಡಾ. ಗುಲ್ಶಾದ್ ಅಹಮದ್ ನೇತೃತ್ವದ್ಲಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಕಳೆದ ನಾಲ್ಕು ದಿನದಿಂದ ಸಾರಿಗೆ ನೌಕರರು ಕೈಗೊಂಡಿರುವ ಮುಷ್ಕರದಿಂದ ರಾಜ್ಯದಲ್ಲಿ ಇಡೀ ಸಂಚಾರ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಮಾತುಕತೆ ವಿಫಲವಾಗಿ ಬಂದ್ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರ ಜತೆಯಲ್ಲಿಯೆ ಖಾಸಗಿ ಶಿಕ್ಷಣ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೀದಿಗೆ ಇಳಿಯಲಿದ್ದು ಮತ್ತೆ ಸರ್ಕಾರಕ್ಕೆ ಮುಷ್ಕರದ ಬಿಸಿ ತಟ್ಟಲಿದೆ.

ಖಾಸಗಿ ಶಾಲೆಗಳನ್ನು ಟಾರ್ಗೆಟ್ ಮಾಡಿ ಹೊರಡಿಸಿದ ಸುತ್ತೋಲೆಯ ಮಹಾ ಲೋಪ !ಖಾಸಗಿ ಶಾಲೆಗಳನ್ನು ಟಾರ್ಗೆಟ್ ಮಾಡಿ ಹೊರಡಿಸಿದ ಸುತ್ತೋಲೆಯ ಮಹಾ ಲೋಪ !

ಡಿಸೆಂಬರ್ 16 ರಂದು ಕರ್ನಾಟಕ ಖಾಸಗಿ ಶಾಲೆ ಶಿಕ್ಷಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕ್ಯಾಮ್ಸ್ ಒಕ್ಕೂಟದ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಖಾಸಗಿ ಶಾಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಬೇಕು, ಕೋವಿಡ್ ಲಸಿಕೆ ಮೊದಲ ಹಂತದದಲ್ಲಿಯೇ ನೀಡಬೇಕು. ಶಾಲಾ ಶುಲ್ಕ ವಸೂಲಾತಿ, ದಾಖಲಾತಿ ಕುರಿತ ಸರ್ಕಾರ ಸ್ಪಷ್ಟ ನಿಲುವು ಪ್ರಕಟಣಿಸಲು ಆಗ್ರಹಿಸಿ ಹೋರಾಟಕ್ಕೆ ಸಜ್ಜುಗೊಳಿಸಲಾಗಿದೆ.

private school teachers called for hunger strike on Tuesday

ಇದೀಗ ಅನುದಾನ ರಹಿತ ಅಲ್ಪ ಸಂಖ್ಯಾತ ಶಾಲೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರು, ಖಾಸಗಿ ಶಾಲಾ ಮಕ್ಕಳ ಹಿತ ರಕ್ಷಣಾ ಸಂಘಟನೆ ಒಗ್ಗೂಡಿ ಡಿಸೆಂಬರ್ 15 ರಿಂದ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.

ಸರ್ಕಾರದ ಆಡಳೀತ ನೀತಿಯಿಂದ ಖಾಸಗಿ ಶಾಲೆಗಳ ಹಕ್ಕುಗಳಿಗೆ ಧಕ್ಕೆಯಾಗಿದೆ. ಕುಸುಮಾ ಅಧ್ಯಕ್ಷ ಡಾ. ಗುಲ್ಶಾದ್ ಅಹಮದ್ ನೇತೃತ್ವದಲ್ಲಿ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತಿದೆ. ಕರೋನಾ ಹೆಸರಿನಲ್ಲಿ ಶಾಲಾಗಳನ್ನು ಬಂದ್ ಮಾಡಿ ಸರ್ಕಾರ ಅನುಸರಿಸುತ್ತಿರುವ ನೀತಿಯಿಂದ ಖಾಸಗಿ ಶಾಲೆ ಮತ್ತು ಸಿಬ್ಬಂದಿ ಬೀದಿಗೆ ಬಂದಂತಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ತರಲಾಗಿತ್ತು.

ಖಾಸಗಿ ಶಾಲೆಗಳು ಎದರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಅವಕಾಶ ನೀಡಿದ್ದು, ಕರೋನಾ ನೆಪದಲ್ಲಿ ಇಡೀ ಶಾಲಾ ವ್ಯವಸ್ಥೆಯನ್ನೇ ಮುಗಿಸುವ ಹುನ್ನಾರ ನಡೆಯುತ್ತಿದೆ. ಖಾಸಗಿ ಶಾಲೆ ಶಿಕ್ಷಕರ ಹಕ್ಕುಗಳ ರಕ್ಷಣೆ ಮತ್ತು ಶಾಲೆಗಳ ಕಾರ್ಯಾರಂಭಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಟ ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದು ಖಾಸಗಿ ಶಾಲೆ ಹಾಗೂ ಮಕ್ಕಳ ಪೋಷಕರ ಹಿತ ರಕ್ಷಣಾ ಸಂಘಟನೆ ಅಧ್ಯಕ್ಷ ಡಾ. ಅಪ್ಸಾದ್ ಅಹಮದ್ ಬಿ. ಜೆಡ್ ತಿಳಿಸಿದ್ದಾರೆ.

Recommended Video

ಬೆಂಗಳೂರು: ಪೊಲೀಸ್‌ ಭದ್ರತೆಯೊಂದಿಗೆ ನೆಲಮಂಗಲದಿಂದ ಬಸ್‌ ಸಂಚಾರ ಆರಂಭ | Oneindia Kannada

ಕೃಷಿ ಮಸೂದೆ ವಿರೋಧಿಸಿ ರಾಜ್ಯದಲ್ಲಿ ರೈತ ಸಂಘಟನೆಗಳ ಹೋರಾಟ, ಮರಾಠ ಅಭಿವೃದ್ಧಿ ನಿಗಮ ರಚನೆ ಸರ್ಕಾರದ ನೀತಿ ಖಂಡಿಸಿ ಕನ್ನಡ ಪರ ಸಂಘಟನೆಗಳ ಹೋರಾಟ, ಸಾರಿಗೆ ನೌಕರರ ಹೋರಾಟ, ಖಾಸಗಿ ಶಿಕ್ಷಕರ ಹೋರಾಟದ ಜತೆಗೆ ಇದೀಗ ಗೋ ಮಸೂದೆ ಕಾಯ್ದೆ ಕುರಿತ ಮತ್ತೊಂದು ಹೋರಾಟ ನಡೆದರೂ ಅಚ್ಚರಿ ಪಡಬೇಕಿಲ್ಲ. ಅದರ ತಯಾರಿಗಳು ಸದ್ದಿಲ್ಲದೇ ನಡೆಯುತ್ತಿದೆ

English summary
Private Schools and Children Welfare Association (PSACWA) Karnataka along with Karnataka Un-aided Minority School Management (KUMSMA) called for hunger strike on 15th dec, in freedom park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X